ACTRESS RAMYA: ಎಲ್ಲರೂ ಟ್ರೋಲ್ ಮಾಡಿದರು ಅಂತ ನಾನು ತಲೆ ಕೆಡಿಸಿಕೊಳ್ಳೋಕೆ ಆಗಲ್ಲ: ನಟಿ ರಮ್ಯಾ

ರಮ್ಯಾ.. ಸ್ಯಾಂಡಲ್ ವುಡ್ ಕ್ವೀನ್… ಕನ್ನಡ ಇಂಡಸ್ಟ್ರಿ ಯಲ್ಲಿ ಫ್ಯಾನ್ ದಂಡು ಹೊಂದಿರೋ ಏಕೈಕ ಕನ್ನಡದ ನಾಯಕ ನಟಿ ಅಂದ್ರೆ ತಪ್ಪಾಗಲ್ಲ.. ಸಿನಿಮಾ ಇಂಡಸ್ಟ್ರಿ ಯಿಂದ ದೊಡ್ಡ ಬ್ರೇಕ್ ತೆಗೆದುಕೊಂಡರೂ ನಟಿ ರಮ್ಯಾ ಅದೇ ಗತ್ತನ್ನ ಇನ್ನೂ ಸಿನಿಮಾ ರಂಗದಲ್ಲಿ ಇಟ್ಕೊಂಡಿದ್ದಾರೆ. ಇಷ್ಟೆಲ್ಲಾ ನೇಮ್ ಫೇಮ್ ಮಾಡಿರೋ ನಟಿಯ ಬಗ್ಗೆ ಮೊದಲ ಬಾರಿಗೆ ತಮ್ಮ ಅಭಿಮಾನಿಗಳೇ ಬೇಸರ ವ್ಯಕ್ತಪಡಿಸಿದ್ದಾರೆ.

ಜೀ ಕನ್ನಡದ ವೀಕೆಂಡ್‌ ವಿತ್‌ ರಮೇಶ್‌ 5ನೇ ಸೀಸನ್‌ ಆರಂಭವಾಗಿದ್ದು, ಮೊದಲ ಎಪಿಸೋಡ್‌ನಲ್ಲಿ ರಮ್ಯಾ ಅತಿಥಿಯಾಗಿ ಆಗಮಿಸಿದ್ದರು. ಈ ಎಪಿಸೋಡ್ ಗಾಗಿ ಕಾಯುತ್ತಿದ್ದ ಕನ್ನಡ ಅಭಿಮಾನಿಗಳಿಗೆ ತೀರ ನಿರಾಸೆಯಾಗಿದೆ. ಅದಕ್ಕೆ ಕಾರಣ ನಟಿ ರಮ್ಯಾರ ಭಾಷೆ..

ಹೌದು.. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾದ ನಟಿ ರಮ್ಯಾ ಒಂದೇ ಒಂದು ಕನ್ನಡ ಪದ ಬಳಸಿ ಮಾತನಾಡಿಲ್ಲ.. ಕಾರ್ಯಕ್ರಮ ದ ಉದ್ದಕ್ಕೂ ಇಂಗ್ಲಿಷ್ ‌ನಲ್ಲೇ ಮಾತನಾಡಿದ್ದ ನಟಿ, ಕುರಿತು ಸಾಕಷ್ಟು ಅಸಮಧಾನ ವ್ಯಕ್ತವಾಯಿತು. ಸಾಮಾಜಿಕ ಜಾಲತಾಣದಲ್ಲಿ ಟೀಕೆಯೂ ವ್ಯಕ್ತವಾಯಿತು. ರಶ್ಮಿಕಾ ಮಂದಣ್ಣ ಜೊತೆಗೆ ಹೋಲಿಕೆ ಮಾಡಿ ಟೀಕೆ ಮಾಡಲಾಯ್ತು.. ರಶ್ಮಿಕಾ ತತ್ಸಮ, ರಮ್ಯಾ ತದ್ಭವ ಎಂದ ಕುಟುಕಲಾಯಿತು.

ಈ ಬಗ್ಗೆ ಮೊದಲ ಬಾರಿಗೆ ರಿಯಾಕ್ಟ್ ಮಾಡಿರೋ ನಟಿ ರಮ್ಯಾ, ಟ್ರೋಲ್ ಗಳಿಗೆಲ್ಲಾ ತಲೆ ಕೆಡಿಸಿಕೊಳ್ಳೋದಕ್ಕೆ ಆಗಲ್ಲ ಎಂದು ಖಡಕ್ ಆಗಿ ರಿಪ್ಲೇ ಮಾಡಿದ್ದಾರೆ.. ಡಾಲಿ ಧನಂಜಯ ನಟನೆಯ ಹೊಯ್ಸಳ ಸಿನಿಮಾ ಬಿಡುಗಡೆ ವೇಳೆ ಮಾತನಾಡಿದ ನಟಿ ರಮ್ಯಾ, ವೀಕೆಂಡ್ ವಿತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಎಲ್ಲರೂ ನಾನ್ ಕನ್ನಡಿಗರು. ಅವರಿಗೆ ಅರ್ಥ ಆಗ್ಲಿ ಎಂಬ ಕಾರಣಕ್ಕಷ್ಟೇ ನಾನು ಇಂಗ್ಲಿಷ್ ನಲ್ಲಿ ಮಾತನಾಡಬೇಕಾಯಿತು ಎಂದರು. ಮುಂದುವರೆದು ಮಾತನಾಡಿದ ಅವರು, ಎಲ್ಲರೂ ಟ್ರೋಲ್ ಮಾಡಿದರು ಎಂಬ ಕಾರಣಕ್ಕೆ ನಾನು ತಲೆ ಕೆಡಿಸಿಕೊಳ್ಳೋಕೆ ಆಗಲ್ಲ ಎಂದು ಉತ್ತರಿಸಿದ್ದಾರೆ‌

More News