DK Suresh: ಯಾರೇ ಬಂದ್ರೂ ಹೊಡೆದು ಓಡಿಸಿ, ಸಾಯೋ ತನಕ ಬಿಡಬೇಡಿ ಎಂದು ಮುನಿರತ್ನ ಪ್ರಚೋದನೆ ನೀಡಿದ್ದಾರೆ: ಡಿಕೆ ಸುರೇಶ್

ಬೆಂಗಳೂರು: ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಚಿವ ಮುನಿರತ್ನರ ಭಾಷಣದ ವೀಡಿಯೋ ರಿಲೀಸ್ ಮಾಡುತ್ತಾ, ರಾಜರಾಜೇಶ್ವರಿ ಕ್ಷೇತ್ರದಲ್ಲಿ ಖಾತಾನಗರದಲ್ಲಿ ತಮಿಳು ಭಾಷಿಗರು 60- 70 ವರ್ಷದಿಂದ ವಾಸವಾಗಿದ್ದಾರೆ. ರಾಜ್ಯ ಸಚಿವರೊಬ್ಬರು ಮಾರ್ಚ್ 19 ರಂದು ರಾತ್ರಿ 9.30 ಕ್ಕೆ ತಮಿಳಿನ ಲ್ಲಿ ಮಾತನಾಡುತ್ತಾ, ಈ ಪ್ರದೇಶಕ್ಕೆ ಯಾರೇ ಬಂದರೂ ಹೊಡೆದು ಓಡಿಸಿ ಎಂದು ಕರೆ ನೀಡಿದ್ದಾರೆ. ಸಾಯುವ ವರೆಗೆ ಬಿಡಬೇಡಿ ಎಂದು‌‌ ಭಾಷಣ ಮಾಡಿದ್ದಾರೆ. ನಾನಿದ್ದೇನೆ. ಈ ಮೂಲಕ ತಮಿಳರನ್ನು ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಒಕ್ಕಲಿಗರ ಹೆಣ್ಣು ಮಗಳನ್ನು ಓಡಿಸಿ ಎಂದು ಕರೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಒಕ್ಕಲಿಗರನ್ನು ಗುರಿಯಾಗಿಸಿ ಸಿನಿಮಾ ತೆಗೆಯಲು ಹೊರಟ ವ್ಯಕ್ತಿ ಇವಾದ ದ್ವೇಷ ಸಾಧಿಸಲು ಹೊರಟಿದ್ದಾರೆ.ಪೊಲೀಸರ ಸಮ್ಮುಖದಲ್ಲಿ ಈ ಮಾತನ್ನು ಹೇಳಿದ್ದಾರೆ.‌ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ಕನ್ನಡದ, ಒಕ್ಕಲಿಗರ ಹೆಣ್ಣು ಮಗಳ ವಿರುದ್ಧ ಮಾತನಾಡಿದ್ದಾರೆ. ಮುನಿರತ್ನ ಮಾಡಿದ್ದಾರೆ, ಉರಿಗೌಡ, ನಂಜೇಗೌಡ ಮುನಿರತ್ನ. ಪೊಲೀಸರ ಮುಂದೆಯೇ ಎತ್ತಿಕಟ್ಟೋ ಕೆಲಸ ಮಾಡಿದ್ದಾರೆ. ಒಕ್ಕಲಿಗರ ಹೆಸರಲ್ಲಿ ವ್ಯಾಪಾರ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ಮುನಿರತ್ನರನ್ನು ಬಂಧಿಸಬೇಕು:

ಆರ್.ಆರ್‌.ನಗರ ಅಭ್ಯರ್ಥಿ ಕುಸುಮಾ ಅವರು ಪೊಲೀಸ್ ಗೆ ದೂರು ಕೊಟ್ಟಿದ್ದಾರೆ. ಆದರೆ ಇನ್ನೂ ಕ್ರಮ ಆಗಿಲ್ಲ. ನಾವು ಪ್ರೊಟೆಸ್ಟ್ ಮಾಡಿದ್ರೆ, ಹತ್ತಿಕ್ಕುತ್ತಾರೆ. ನಮ್ಮ ಕಾರ್ಯಕರ್ತರ ಮೇಲೆ ಹತ್ತಾರು ಕೇಸ್ ಹಾಕಿದ್ದಾರೆ. ತಕ್ಷಣ ಮುನಿರತ್ನ ಅವ್ರನ್ನ ಬಂಧಿಸಬೇಕು. ಸುಮೋಟೋ ಕೇಸ್ ದಾಖಲಿಸಬೇಕಿತ್ತು. ಪೊಲೀಸರಿಗೆ ನೈತಿಕತೆ ಇದ್ರೆ ಕ್ರಮ ಕೈಗೊಳ್ಳಿ. ಅದನ್ನ ಮಾಡದೇ ಎಲಾ ಡೀಲ್ ಡೀಲ್ ಡೀಲ್ ಮಾಡ್ತಿದ್ದಾರೆ. ಸಿಎಂ ಸೂಚನೆ ಕೊಟ್ಟು ಬಂಧಿಸಬೇಕು ಎಂದು ಆಗ್ರಹಿಸಿದರು.

ಅವನೊಬ್ಬ ಮುಟ್ಟಾಳ:

ಸಂಸದ ಡಿ.ಕೆ.ಸುರೇಶ್ ಗೆ ಭಯ ಇದಿಯಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಡಿ.ಕೆ. ಸುರೇಶ್ ಗೆ ಭಯ ಅನ್ನೋದು ಜಾಯಮಾನದಲ್ಲಿಯೇ ಇಲ್ಲ. ಡಿಕೆ ಸುರೇಶ್ ಗೆ ಭಯ ಇದೆ ಅಂದುಕೊಂಡವನು ಮುಟ್ಟಾಳ. ಅವನು ಮುಠ್ಠಾಳ. ಹೆಣ್ಣು ಮಕ್ಕಳ ಮೇಲೆ ರೇಪ್ ಕೇಸ್ ಹಾಕಿ ಗಾಂಜಾ ಕೇಸ್ ಹಾಕಿ ರಾಜಕಾರಣ ಮಾಡಿದವನಲ್ಲ. ಯಾರು ಯಾರನ್ನು ಹೇಗೆಲ್ಲ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ ನನಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

More News