Rape And Murder: ಅಜ್ಜಿ ಮನೆಗೆ ಬಂದಿದ್ದ ಬಾಲಕನ ತಲೆಗೆ ಜಜ್ಜಿ ಕೊಲೆಗೈದ ದುಷ್ಕರ್ಮಿಗಳು

ಹುಬ್ಬಳ್ಳಿ: ಶಾಲೆಗೆ ರಜೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಅಜ್ಜಿಯ ಮನೆಗೆ ಬಂದಿದ್ದ ಬಾಲಕನ ಮೇಲೆ ದುಷ್ಕರ್ಮಿಗಳು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಪೈಶಾಚಿಕ ಕೃತ್ಯವೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.

ಹೀಗೆ ಮುಳ್ಳಿನ ಕಂಟಿಯಲ್ಲಿ ಕೊಲೆಯಾಗಿ ಬಿದ್ದಿರುವ ಈ ಎಂಟು ವರ್ಷದ ಬಾಲಕನ ಹೆಸರು ನದೀಂ ಹಸನಸಾಬ್ ಹುಬ್ಬಳ್ಳಿ. ಈತ ಶ್ರೀನಗರ ನಿವಾಸಿ. ನದೀಂ ಬೆಂಡಿಗೇರಿ ಪೊಲೀಸ್ ಠಾಣೆ ಹತ್ತಿರ ಇರುವ, ಕ್ರಿಶ್ಚಿಯನ್ ಕಾಲೋನಿಯ ದೊಡ್ಡನೆ ಚಾಳದಲ್ಲಿರುವ ಅಜ್ಜಿಯ ಮನೆಗೆ ಬಂದಿದ್ದ. ಯಾರೋ ದುಷ್ಕರ್ಮಿಗಳು ನಿನಗೆ ದುಡ್ಡು ಕೊಡುತ್ತೇವೆ ಬಾ ಎಂದು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ನಿನ್ನೆಯಿಂದ ನಾಪತ್ತೆಯಾಗಿದ್ದ ನದೀಂ, ಈ ಬಗ್ಗೆ ಪೋಷಕರು ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇಂದು ಮಧ್ಯಾಹ್ನ ನದೀಂ ಅಜ್ಜ ಪಾಳು ಬಿದ್ದ ಗೌಂಡ್‌ನಲ್ಲಿ ಹುಡುಕುತ್ತ ಹೋದಾಗ ಮುಳ್ಳಿನ ಕಂಟಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಈ ಬಾಲಕನ ಕೊಲೆಯಿಂದ ಇಡೀ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೆಂಡಿಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಬಟ್ಟೆಯನ್ನು ದುಷ್ಕರ್ಮಿಗಳು ಬಿಚ್ಚಿದ್ದಾರೆ.

ಸ್ಥಳಕ್ಕೆ ಡಿಸಿಪಿ ರಾಜೀವ್ ಎಮ್ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೃತ್ಯ ಎಸಗಿದವರನ್ನು ಪತ್ತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಶಾಲೆಯ ರಜೆ ದಿನಗಳನ್ನು ಖುಷಿಯಿಂದ ಕಳೆಯಬೇಕೆಂದು ಅಜ್ಜಿ ಮನೆಗೆ ಬಂದಿದ್ದ.ನದೀಂ ಬಾಲಕನ ಕೊಲೆ ಇಡೀ ಕುಟುಂಬವೇ ಸಂಕಷ್ಟಕ್ಕಿಡಾಗಿ.ದೆ ಆದಷ್ಟು ಬೇಗ ಬಾಲಕ ನದೀಂ ಕೊಲೆಯ ಬಗ್ಗೆ ಪೊಲೀಸ್ ಅಧಿಕಾರಿ ಪರಿಶೀಲನೆ ನಡೆಯಿಸಿ, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದ ಕುಟುಂಬದ ಅಳಲಾಗಿದೆ

More News