MADAL VIRUPAKSHAPPA: ಕೇಳಿದ ಪ್ರಶ್ನೆಗಳಿಗೆಲ್ಲಾ ಕಣ್ಣೀರು ಹಾಕ್ತಿದ್ದಾರಂತೆ ಬಿಜೆಪಿ ಶಾಸಕ ಮಾಡಾಳ್..

ಲಂಚ ಪಡೆದ ಆರೋಪದಲ್ಲಿ ಲೋಕಾ ಕಸ್ಟಡಿಯಲ್ಲಿರುವ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ರಿಂದ ಉತ್ತರ ಪಡೆಯೋದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆಯಂತೆ. ಹೆಚ್ಚಿನ ವಿಚಾರ ನಡೆಸಬೇಕು ಎಂಬ ಹಿನ್ನಲೆಯಲ್ಲಿ ಐದು ದಿನಗಳ ಕಾಲ ಕಸ್ಟಡಿ ಸುಪರ್ದಿಗೆ ಕೊಡಿ ಎಂದು ನ್ಯಾಯಾಲದಿಂದ ಅನುಮತಿ ಪಡೆದು ವಿಚಾರಣೆ ಕೈಗೆತ್ತಿಕೊಂಡಿರುವ ಪೊಲೀಸರ ಮುಂದೆ ಮಾಡಾಳ್ ಏನನ್ನೂ ಉತ್ತರಿಸದೆ ಕೇಳಿದ ಪ್ರಶ್ನೆಗೆಲ್ಲಾ ಕಣ್ಣೀರು ಹಾಕುತ್ತಿದ್ದಾರೆ.

40 ಲಕ್ಷ ಲಂಚ ಪಡೆದ ಪ್ರಕರಣ ದಲ್ಲಿ ಚನ್ನಗಿರಿ ಶಾಸಕ ಮಾಡಾಳ್ ಗೆ ಸಂಕಷ್ಟ ಎದುರಾಗಿದೆ. ಕೆಎಸ್ ಡಿಎಲ್ ಟೆಂಡರ್ ಅಪ್ರೋವಲ್ ಗಾಗಿ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಾಸಕ ಮಾಡಾಳ್ ಪುತ್ರ ಪ್ರಶಾಂತ್ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಇದ್ದು, ಪ್ರಕರಣದ ಎ1 ಆರೋಪಿಯಾಗಿದ್ದ ಮಾಡಾಳ್ ವಿರುಪಾಕ್ಷಪ್ಪ ಅವರನ್ನು ಬಂಧಿಸಿ ಲೋಕಾ ಕಚೇರಿಗೆ ಶಿಪ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಕಳೆದ ನಾಲ್ಕು ದಿನದಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಪೊಲೀಸರ ಸುಪರ್ಧಿಯಲ್ಲಿದ್ದು, ಕೋಟಿ ಕೋಟಿ ಹಣದ ತನಿಖೆ ಎದುರಿಸುತ್ತಿದ್ದಾರೆ. ದಿನಕ್ಕೆ ನಾಲ್ಕಾರು ಗಂಟೆ ವಿಚಾರಣೆ ಎದುರಿಸುತ್ತಿದ್ದಾರೆ. ತನಿಖೆ ಪ್ರಾರಂಭಿಸುವ ವೇಳೆ ಇದ್ದಕ್ಕಿದ್ದಂತೆ ಮೌನಕ್ಕೆ ಜಾರಿ ಹೋಗೋದು.. ಗಂಟೆಗಟ್ಟಲೆ ಯಾರ ಜೊತೆ ಮಾತನಾಡದೇ ಸುಮ್ಮನಾಗೋದು.. ಕೆಲವು ವೇಳೆ ಗಳಗಳ ಅಳಲು ಶುರು ಮಾಡ್ಕೊಳ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಧ್ಯ ಲೋಕಾಯುಕ್ತ ಕಸ್ಟಡಿಯಲ್ಲಿರೋ ಮಾಡಾಳ್ ಅವರ ಕಸ್ಟಡಿ ಇಂದಿಗೆ ಅಂತ್ಯವಾಗುತ್ತಿದೆ. ಕಸ್ಟಡಿ ಮುಗಿಯುತ್ತಿದ್ದಂತೆ ಬಹುತೇಕ ಜೈಲಿಗೆ ಕಳಿಸಿಕೊಡುವ ಸಾಧ್ಯತೆ ಇದೆ. ಹೀಗಾಗಿಯೇ ಮಾಡಾಳ್ ಅವರು ಚಿಂತೆಗೆ ಜಾರಿರೋ ಸಾಧ್ಯತೆ ಇದೆ. ಮಾಡಾಳ್ ಪರಿಸ್ಥಿತಿ ಕಂಡು ಲೋಕಾ ಅಧಿಕಾರಿಗಳೇ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆಂದು ಲೋಕಾಯುಕ್ತ ಮೂಲಗಳು ತಿಳಿದು ಬಂದಿದೆ.

More News