CM DONE APRIL FOOL TO WORKING WOMEN: ದುಡಿಯುವ ಮಹಿಳೆಗೆ ಬಸ್ ಪಾಸ್ ನೀಡದೇ ಇರುವುದು ಸಿಎಂರಿಂದ ಏಪ್ರಿಲ್ ಫೂಲ್ ಕೆಲಸ: ಡಿ ಕೆ ಶಿವಕುಮಾರ್

ಬೆಂಗಳೂರು : ಏಪ್ರಿಲ್ ಒಂದರಿಂದ ಮಹಿಳೆಯರಿಗೆ ಬಸ್ ಪಾಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಆದನ್ನು ಕಾರ್ಯರೂಪಕ್ಕೆ ತಾರದೇ ಇರುವುದಕ್ಕೆ ಇದೀಗ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಿಎಂ ಬೊಮ್ಮಾಯಿ ಅವರು ಯಾವಾಗಲೂ ಜನರಿಗೆ ಫೂಲ್ ಮಾಡುತ್ತಾನೆ ಇರುತ್ತಾರೆ ಎಂದು ಟೀಕಿಸಿದರು.
ದುಡಿಯುವ ಮಹಿಳೆಯರಿಗೆ ಪಾಸ್ ಕೊಡ್ತಿನಿ ಅಂದ್ರು, ಸಿಂಧಗಿ ಎಲೆಕ್ಷನ್ ಟೈಮ್ ನಲ್ಲಿ ಕೋಲಿ ಸಮುದಾಯಕ್ಕೆ ಮೀಸಲಾತಿ ಕೊಡ್ತಿನಿ ಅಂದ್ರು, ಆದ್ರೆ ಕೊಟ್ಟಿಲ್ಲಾ. ಈ ಸರ್ಕಾರ ಕೇವಲ ಭರವಸೆ ನೀಡುವ ಸರ್ಕಾರವಾಗಿತ್ತು. ಆದರೆ, ಯಾವುದೇ ಕಾರ್ಯಕ್ರಮ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು.


ಕಾಂಗ್ರೆಸ್ ಎರಡನೇ ಪಟ್ಟಿ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಸಿಇಸಿ ಮೀಟಿಂಗ್ ನಾಲ್ಕನೇ ತಾರೀಖಿದೆ, ಉಳಿದ ಕ್ಷೇತ್ರಗಳ ಪಟ್ಟಿ ಅಲ್ಲಿ ತೀರ್ಮಾನವಾಗುತ್ತದೆ, ನಮ್ಮ ಪಕ್ಷದಲ್ಲಿ ಬಂಡಾಯವಿಲ್ಲ, ಆಕಾಂಕ್ಷಿತರು ಜಾಸ್ತಿ ಇದ್ದಾರೆ ಎಂದು ತಿಳಿಸಿದ ಶಿವಕುಮಾರು, ಯಾವುದೇ ಬ್ಲ್ಯಾಕ್ ಮೇಲ್ ಗೆ ಹೆದರಲ್ಲ ಎಂದು ತಿಳಿಸಿದರು.

More News