ಬಾಲಿವುಡ್ ಹೆಸರಾಂತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಶೋ 'ಕಾಫಿ ವಿತ್ ಕರಣ್' ಸೀಸನ್ ೮ರಲ್ಲಿ ಕನ್ನಡದ ನಟರಾದ ಯಶ್ ಹಾಗು ರಿಷಬ್ ಶೆಟ್ಟಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕಲರ್ ಫುಲ್ ಉತ್ತರಗಳು, ಕಾಂಟ್ರವರ್ಷಿಯಲ್ ಸ್ಟೇಟ್ ಮೆಂಟ್ ಸೇರಿದಂತೆ ಬೋಲ್ಡ್ ಕಂಟೆಂಟ್ ಮೂಲಕ ಜನರ ಮನಸ್ಸು ಗೆದ್ದಿರುವ ‘ಕಾಫಿ ವಿತ್ ಕರಣ್’ ಸೀಸನ್- ೮ ರೀ ಲಾಂಚ್ಗೆ ಕರಣ್ ಜೋಹರ್ ಯಶ್ ಮತ್ತು ರಿಷಬ್ ಶೆಟ್ಟಿ ಅವರನ್ನು ಆಹ್ವಾನಿಸಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಇವರೊಂದಿಗೆ ಅಲ್ಲು ಅರ್ಜುನ್ ಕೂಡ ಜೊತೆಯಾಲಿದ್ದಾರೆ. ಇವರೆಲ್ಲರೂ ತಮ್ಮ ಕುಟುಂಬದೊಂದಿಗೆ ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ಯಶ್ ನಟನೆಯ ಕೆಜಿಎಫ್೨ ಪ್ರಿ ರಿಲೀಸ್ ಈವೆಂಟ್ ಅನ್ನು ಹೋಸ್ಟ್ ಮಾಡಿದ್ದರು ಕರಣ್. ಇನ್ನು ರಿಷಬ್ ಅಭಿನಯಿಸಿರುವ ಕಾಂತಾರ ಸಿನಿಮಾ ಬಗ್ಗೆಯೂ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಮೂವಿ ಪುಷ್ಪ ಬಾಕ್ಸಾಫೀಸ್ ನಲ್ಲಿ ಕಂಡು ಹರ್ಷಿಸಿದ್ದರು.
ಕಾಂಟ್ರವರ್ಸಿ ಟಾಕ್ ಶೋ ಎಂದೇ ಖ್ಯಾತಿ ಪಡೆದಿರುವ ‘ಕಾಫಿ ವಿತ್ ಕರಣ್’ ಸೀಸನ್ 8 ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಡಿಸ್ನೀ ಹಾಟ್‌ಸ್ಟಾರ್‌ನಲ್ಲಿ ಈ ಶೋ ಪ್ರಸಾರವಾಗಲಿದೆ.
ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಈ ಶೋನಲ್ಲಿ ಬಾಲಿವುಡ್‌ನ ಹಲವು ಸ್ಟಾರ್‌ಗಳು, ಸ್ಟಾರ್ ಕಪಲ್‌ಗಳು ಪಾಲ್ಗೊಂಡಿದ್ದಾರೆ. ಕೆಲವರು ತಮ್ಮ ನೇರ ನಡೆ ನುಡಿಗಳಿಂದ ಗಮನಸೆಳೆದಿದ್ದಾರೆ. ಈ ಟಾಕ್ ಶೋಗೆ ಬರುವ ಗೆಸ್ಟ್‌ಗಳ ಬಗ್ಗೆಯೂ ವೀಕ್ಷಕರಿಗೆ ಕುತೂಹಲ ಇರುತ್ತದೆ.
ಬಾಲಿವುಡ್ ಮಂದಿಗೆ ಮಾತ್ರ ಸೀಮಿತವಾಗಿದ್ದ ಈ ಶೋ ನಲ್ಲಿ ಈಗ ದಕ್ಷಿಣ ಭಾರತದ ಕಲಾವಿದರಿಗೂ ಆದ್ಯತೆ ನೀಡಲಾಗುತ್ತಿದೆ. ಕನ್ನಡಿಗರ ಕುರಿತಂತೆ ಬಾಲಿವುಡ್ ಮಂದಿ ತಿರುಗಿ ನೋಡುತ್ತಿರುವುದು ಉತ್ತಮ ಬೆಳವಣಿಗೆ.ಕಳೆದ ವರ್ಷ ‘ಕಾಫಿ ವಿತ್ ಕರಣ್ ಸೀಸನ್ ೭’ ಪ್ರಸಾರವಾಗಿತ್ತು.




