State Election: ರಾಜ್ಯ ಚುನಾವಣೆ ಕಾವು: ರಾಜಕೀಯ ಪಕ್ಷಗಳಿಂದ ಅಕ್ರಮದ ಘಾಟು

ರಾಜ್ಯ ಚುನಾವಣೆ ಕಾವು ಏರುತ್ತಿದ್ದಂತೆ ಚುನಾವಣೆ ಅಕ್ರಮದ ಘಾಟು ಕೂಡ ವ್ಯಾಪಿಸಿದೆ. ಮತದಾರರನ್ನು ಒಲೈಸಲು ಕೊನೆ ಹಂತದ ಅಸ್ತ್ರ ಪ್ರಯೋಗಿಸುತ್ತಿರುವ ರಾಜಕೀಯ ಪಕ್ಷಗಳ ಆಟಕ್ಕೆ ಅಧಿಕಾರಿಗಳು ಬ್ರೇಕ್ ಹಾಕುತ್ತಿದ್ದಾರೆ.

ಚುನಾವಣಾ ಅಕ್ರಮ ವಿರುದ್ಧ ತೀವ್ರ ಕಣ್ಗಾವಲು ನಡೆಸಿರುವ ಅಧಿಕಾರಿಗಳು ಮಾರ್ಚ್ 29ರಿಂದ ಇಲ್ಲಿಯವರೆಗೆ ಜಪ್ತಿ ಮಾಡಿದ ದಾಖಲೆ ನೀಡಿದ್ದಾರೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡ, ಪೊಲೀಸ್ ಮತ್ತು ಆದಾಯ ತೆರಿಗೆ ನಡೆಸಿದ ದಾಳಿಯಲ್ಲಿ 2,78,798 ಲೀಟರ್ ಮದ್ಯ, 13.575 ಕೆ.ಜಿ ಚಿನ್ನ ಜಪ್ತಿ, 12,82,94, 736 ರೂ ನಗದು ವಶಪಡೆಸಿಕೊಂಡಿದ್ದು, ಅಬಕಾರಿ ಇಲಾಖೆಯಿಂದ 16,02,76,775ಮೌಲ್ಯದ 2,78,798 ಲೀಟರ್ ಮದ್ಯ ವಶ
ಮತ್ತು 41,26,155 ರೂ ಮೌಲ್ಯದ 79.44 ಕೆ‌ಜಿ ಮಾದಕ ದ್ರವ್ಯ ವಶಕ್ಕೆ ಪಡೆದಿದೆ.

ಇನ್ನು ವಶಕ್ಕೆ ಪಡೆದ ವಸ್ತುಗಳ ಗಂಭೀರತೆ ಆಧರಿಸಿ ಅಬಕಾರಿ ಇಲಾಖೆ ಕೇಸ್ ನ್ನು ಜಡೆದಿದೆ. ಚುನಾವಣೆ ವೇಳೆ ವಶಕ್ಕೆ ಪಡೆದ ವಸ್ತು ಪ್ರಕರಣದಲ್ಲಿ 450 ಗಂಭೀರ ಪ್ರಕರಣ, ಮದ್ಯದ ಪರವಾನಗಿ ಉಲ್ಲಂಘಿಸಿದ 305 ಪ್ರಕರಣ ಮತ್ತು 270 ವಿವಿಧ ಮಾದರಿ ವಾಹನ ವಶಕ್ಕೆ ಪಡೆಯುವ ಮೂಲಕ ಬಿಸಿ ಮುಟ್ಟಿಸಿದೆ.

ಇನ್ನು ಆನ್ ಲೈನ್ ಮೂಲಕ ಮತದಾರರ ಖಾತೆಗೆ ಹಣ ವರ್ಗಾ ಮಾಡುವುದರ ಮೇಲೆಯೂ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಬ್ಯಾಂಕ್ ನಿಂದ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ವರ್ಗಾ ಆಗಿರುವುದು ಅಥವಾ ಅನುಮಾನಸ್ಪದ ಹಣ ವರ್ಗಾವಣೆ ಬ್ಯಾಂಕ್ ಮೂಲಕ ನಡೆದರೆ ಅಂಥ ಖಾತೆಗಳ ವಿರುದ್ಧ ವೂ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.

More News