Pentagon Director Raghu: ಹಸಿ ಬಿಸಿ ದೃಶ್ಯದಲ್ಲಿ ನಟ ಕಾಣಿಸಿಕೊಂಡ್ರೆ ಒಕೆ, ನಟಿ ಕಾಣಿಸಿಕೊಂಡರೆ ಸಮಸ್ಯೆ ಯಾಕೆ: ನಿರ್ದೇಶಕ ರಘು ಗರಂ

ಬೆಂಗಳೂರು: ಪ್ರಖ್ಯಾತ ನಟರು ಅತ್ಯಾಚಾರ ಮಾಡುವಂತಹ ದೃಶ್ಯ ದಲ್ಲಿ ನಟಿಸಿದ್ದಾರೆ. ಅವ್ರು ಮಾಡಿದರೆ ನಟನೆ.. ಅದೇ ಹೆಣ್ಣುಮಗಳೊಬ್ಬಳು ಬೋಲ್ಡ್ ಆಗಿ ಕಾಣಿಸಿಕೊಂಡ ತಕ್ಷಣ ಯಾಕೆ ಕೆಟ್ಟದಾಗಿ ಮಾತಾಡ್ತೀರಿ..? ಎಂದು ನಿರ್ದೇಶಕ ರಘು ಪ್ರಶ್ನೆ ಹಾಕಿದರು.

“ಸಿನಿಮಾ ಪಬ್ಲಿಸಿಟಿ ಗಿಮಿಕ್ ಅಲ್ಲ”

ನಟಿ ತನಿಷಾ ಕುಪ್ಪಂದ ವಿರುದ್ಧ ಯೂಟ್ಯೂಬರ್ ಒಬ್ಬ ನಾಲಿಗೆ ಹರಿಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಗೋಷ್ಟಿ ಕರೆದ ಪೆಂಟಗಾನ್ ಚಿತ್ರತಂಡ, ಒಬ್ಬ ಅಯೋಗ್ಯ ನಟಿ ತನಿಷಾ ಕುಪ್ಪಂದ ವಿರುದ್ಧ ಪ್ರಶ್ನೆ ಮಾಡಿದ ಕಾರಣ ನಾವು ಗೋಷ್ಟಿ ಕರೆಯಬೇಕಾಗಿ ಬಂದಿತು. ಇದು ಪೆಂಟಗಾನ್ ಚಿತ್ರದ ಪ್ರೋಮೋಷನ್ ಕಂಡಿತವಾಗಿಯೂ ಅಲ್ಲ.. ಪೊಲೀಸ್ ಠಾಣೆ ಗೆ ಹೋಗಿ ದೂರು ಕೊಟ್ಟು ಬರಲಾಗಿದೆ. ಇದು ಸಿನಿಮಾ ಪಬ್ಲಿಸಿಟಿಗಾಗಿ ಕರೆದ ಪತ್ರಿಕಾಗೋಷ್ಠಿ ಅಲ್ಲ. ನೆಗೆಟಿವ್ ಪಬ್ಲಿಸಿಟಿ ಯಿಂದ ಸಿನಿಮಾ ಗೆದ್ದ ಉದಾಹರಣೆ ಇಲ್ಲ. ಜನಕ್ಕೆ ನಮ್ಮ ಸಿನಿಮಾ ಗೊತ್ತಾಗ್ಬಹುದು ಅಷ್ಟೇ.. ಎಂದರು.

ಮುಂದುವರೆದು ಮಾತನಾಡಿದ ಅವರು, ಬೋಲ್ಡ್ ಆಗಿ ನಟಿ ಅಷ್ಟೇ ಅಲ್ಲ.. ಹುಡುಗ ಕೂಡ ನಟಿಸಿದ್ದಾನೆ. ಆ ಹುಡುಗನನ್ನು ಪ್ರಶ್ನೆ ಮಾಡ್ಬಹುದು ಅಲ್ವಾ..? ಯಾಕೆ ಬರೀ ನಟಿಯರನ್ನೇ ಪ್ರಶ್ನೆ ಮಾಡ್ತೀರಿ..? ಹಾಡು ಬಿಡುಗಡೆ ಆದಾಗಿನಿಂದ ನೋಡುತ್ತಿದ್ದೇವೆ. ಕೆಟ್ಟ ಕೆಟ್ಟ ಕಮೆಂಟ್ಸ್ ಬರುತ್ತಿದೆ. ಸಂಸ್ಕೃತಿ ಹಾಳು ಮಾಡಿದಳು ಆ ಮುಂಡೆ, ಈ ಮುಂಡೆ ಎಂದೆಲ್ಲಾ ಹೇಳುತ್ತಿದ್ದಾರೆ. ಸಂಸ್ಕೃತಿ ಉಳಿಸುವುದು ಬರೀ ಹೆಣ್ಣಿನ ಕೆಲಸ ಮಾತ್ರಾನಾ…? ಎಂದು ಪ್ರಶ್ನೆ ಹಾಕಿದರು

ಗಂಡಸನ್ನು ಯಾಕೆ ಪ್ರಶ್ನೆ ಮಾಡೋದಿಲ್ಲ..?ಪ್ರಖ್ಯಾತ ನಟರು ಅತ್ಯಾಚಾರ ಮಾಡುವಂತಹ ದೃಶ್ಯ ದಲ್ಲಿ ನಟಿಸಿದ್ದಾರೆ. ಅವ್ರು ಮಾಡಿದರೆ ನಟನೆ.. ಅದೇ ಹೆಣ್ಣುಮಗಳೊಬ್ಬಳು ಬೋಲ್ಡ್ ಆಗಿ ಕಾಣಿಸಿಕೊಂಡ ತಕ್ಷಣ ಯಾಕೆ ಕೆಟ್ಟದಾಗಿ ಮಾತಾಡ್ತೀರಿ..? ವೈಯಕ್ತಿಕ ಬದುಕು ಬೇರೆ.. ನಟನೆ ಬೇರೆ.. ಮೊದಲು ಕಾಮನ್ಸೆನ್ಸ್ ಇಟ್ಕೊಂಡು ಪ್ರಶ್ನೆ ಕೇಳಿ ಇನ್ಮುಂದೆ ಎಂದು ಕೋಪಗೊಂಡ ರು.

More News