YSV DUTTA WILL CONTEST INDIPENDENT: ಅಭಿಮಾನಿಗಳಿಗೆ ಭಾವುಕ ಪತ್ರ ಬರೆದ ವೈಎಸ್ ವಿ ದತ್ತಾ: ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕೆ..?

ಚಿಕ್ಕಮಗಳೂರು: ಕಡೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಅಭಿಮಾನಿಗಳಿಗೆ ಭಾವುಕ ಪತ್ರ ಬರೆದಿದ್ದು, ಇಂಥ ಕಠಿಣ ಸಮಯದಲ್ಲಿ ನಿಮ್ಮ ಜೊತೆಗೆ ನಾನಿರಬೇಕು. ನನ್ನ ಜೊತೆಗೆ ನೀವಿರಬೇಕು. ಇದು ಇಂದಿನ ಅನಿವಾರ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಪತ್ರದಲ್ಲಿ ಏಪ್ರಿಲ್ 9 ರಂದು ಅಭಿಮಾನಿಗಳ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ಮುಂದಿನ ರಾಜಕೀಯ ನಡೆ ಕುರಿತು ಚರ್ಚೆ ನಡೆಸಿ, ಮುಂದಿನ ಹೆಜ್ಜೆ ಇಡಲಿದ್ದಾರೆ.

“ನಮ್ಮದ ಸಣ್ಣ ಪಕ್ಷ. ದತ್ತಾಗೆ ಜಾಗ ಇಲ್ಲ”

ಇನ್ನು ದತ್ತಾರ ಪತ್ರದ ಕುರಿತು ಬೀರೂರಿನಲ್ಲಿ ವ್ಯಂಗ್ಯ ಮಾಡಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ,
ನಮ್ಮದ ಸಣ್ಣ ಪಕ್ಷ. ಅವರು ಇಂಟರ್‌ನ್ಯಾಷನಲ್‌ ಪಕ್ಷ ಸೇರಲು ಹೋದವರು. ನಮ್ಮ ಪಕ್ಷದಲ್ಲಿ ಅವರಿಗೇನು ಸಿಗುತ್ತದೆ ಎಂದು ಛೇಡಿಸಿದರು. ವೈಎಸ್‌ವಿ ದತ್ತ ಅವರ ಬಗ್ಗೆ ನನಗೆ ಗೊತ್ತಿಲ್ಲ. ಅವರೆಲ್ಲ ದೊಡ್ಡವರು ಎಂದು‌ ಕುಟುಕಿದರು.

ಅಭಿಮಾನಿಗಳಿಗೆ ಬರೆದ ಭಾವುಕ ಪತ್ರದಲ್ಲೇನಿದೆ..?

“ನೀವು ನನಗೆ ಪ್ರೀತಿಯನ್ನು‌ ಧಾರೆ ಎರೆದಿದ್ದೀರಿ. ಹಣವಿಲ್ಲದ, ಜಾತಿ ಇಲ್ಲದ ನನ್ನನ್ನು ದತ್ತಣ್ಣ, ನಮ್ಮ ದತ್ತಣ್ಣ ಎಂದು ಅಭಿಮಾನದಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಈಗ ಬಂದಿರುವ ವಿಶೇಷ ರಾಜಕೀಯ ಪರಿಸ್ಥಿತಿಯಲ್ಲಿ ನಿಮ್ಮ ಜೊತೆಗೆ ನಾನಿರಬೇಕು ಹಾಗೂ ನನ್ನ ಜೊತೆಗೆ ನೀವಿರಬೇಕು ಎಂಬುದು ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ ಇದು ನನ್ನ ನಿಮ್ಮ ಸ್ವಾಭಿಮಾನ, ಆತ್ಮಾಭಿಮಾನಕ್ಕೆ ಅಪಮಾನ” ಎಂದು ಬರೆದುಕೊಂಡಿದ್ದಾರೆ.

More News