AIR POLLUTION: ಬೆಂಗಳೂರಲ್ಲಿ ಉಸಿರಾಡೋದಕ್ಕೂ ಕಷ್ಟಪಡೋ ದಿನ ದೂರ ಇಲ್ಲ..!: CSTEP ಸಂಶೋಧನೆ

ಬೆಂಗಳೂರು: ರಾಜಧಾನಿ ಬೆಂಗಳೂರು  ವಾಯುಮಾಲಿನ್ಯ ಪ್ರಮಾಣ ಹೆಚ್ಚಳ ಸಂಬಂಧ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದೆ. ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಮಟ್ಟವು ಹೆಚ್ಚಳವಾಗಿದ್ದು, ಉರಿರಾಡೋಕು ಸಮಸ್ಯೆ ಉಂಟಾಗೋ ದಿನ ದೂರವಿಲ್ಲ ಎಂಬ ಸಂಶೋಧನಾ ವರದಿ ಒಂದು ಹೊರ ಬಿದ್ದಿದೆ.

ಇತ್ತೀಚಿನ ಹಲವಾರು ಅಧ್ಯಯನಗಳ ಪ್ರಕಾರ ಐಟಿಬಿಟಿ ನಗರದಲ್ಲಿ ಚಳಿಗಾಲದಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದೆ.ನಗರದ ಮಾಲಿನ್ಯದ ಹಾಟ್‌ಸ್ಪಾಟ್‌ಗಳನ್ನು  ಕಂಡುಹಿಡಿಯುವ ಹೊಸ ಅಧ್ಯಯನವು ಈಗ ಐದು ಪ್ರಮುಖ ರಸ್ತೆಗಳು ಮತ್ತು ನಗರದ ಪಶ್ಚಿಮ ಭಾಗವನ್ನು ಅತ್ಯಂತ ಕಲುಷಿತ ಪ್ರದೇಶಗಳೆಂದು ಗುರುತಿಸಿದೆ.

ಎಜುಕೇಶನ್ ಸೆಂಟರ್ ಫಾರ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿ (CSTEP) ನಡೆಸಿದ ಸಂಶೋಧನೆಯಲ್ಲಿ ರಾಜಧಾನಿಯಲ್ಲಿ ವಾಯುಮಾಲಿನ್ಯ ಮಟ್ಟ ಏರಿಕೆಯಾಗಿರುವುದು ಬೆಳಕಿಗೆ ಬಂದಿದೆ.
ಹೀಗೆ ಮಾಲಿನ್ಯದ ಪ್ರಮಾಣ ಹೆಚ್ಚಾದಲ್ಲಿ ಉಸಿರಾಡುವುದಕ್ಕೂ ಕಷ್ಟಪಡುವ ದಿನಗಳು ದೂರವಿಲ್ಲ ಎಂದು ಹೇಳಲಾಗುತ್ತಿದೆ.ಕಳೆದ ಹಲವು ವರ್ಷಗಳಿಂದ ಈಚೆಗೆ ವಾಹನಗಳ ಸಂಖ್ಯೆ ಹೆಚ್ಚಿದ್ದು, ಸಂಚಾರ ದಟ್ಟಣೆಯೂ ಬೆಳೆಯುತ್ತಿದೆ. ಅದರೊಂದಿಗೆ ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಬಳಕೆಯಿಂದ ಶೇ. ೫೦ ರಷ್ಟು ವಾಯುಮಾಲಿನ್ಯವೂ ಹೆಚ್ಚಿದೆ.

ವಾಹನಗಳಿಂದ ಹೊರಹೊಮ್ಮುವ ಕಾರ್ಬನ್ ಮಾನಾಕ್ಸೈಡ್ ನಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ನವದೆಹಲಿಗೆ ಹೋಲಿಸಿದ್ದಲ್ಲಿ ಬೆಂಗಳೂರಿನ ಮಾಲಿನ್ಯ ಮಟ್ಟ ಅಪಾಯಕಾರಿಯಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವುದು ನೋಡಿದರೆ‌ ಭವಿಷ್ಯ ದಲ್ಲಿ ತೊಂದರೆ ಎದುರಿಸಬೇಕಾಗುವುದು.

More News