ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಒಂದೂವರೆ ತಾಸು ಸಫಾರಿ ನಡೆಸಿದ್ದು 15-18 ಕೀಮಿ ಕಾಡಿನಲ್ಲಿ ಓಡಾಡಿದ್ದಾರೆ.
ಸಫಾರಿಯನ್ನು ಓಪನ್ ಜೀಪ್ ನಲ್ಲಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಆನೆ, ಜಿಂಕೆ, ಕಡವೆ, ಕಾಡೆಮ್ಮೆ, ಉಡಗಳನ್ನು ನೋಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಮೋದಿ ಅವರ ಸಫಾರಿ ವಾಹನವನ್ನು ಬಂಡೀಪುರ ಅರಣ್ಯ ಇಲಾಖೆಯ ಚಾಲಕ ಮಧುಸೂದನ್ ಎಂಬವರು ಚಲಾಯಿಸಿದ್ದಾರೆ.

ಅದೇ ಸಫಾರಿ ವಾಹನದಲ್ಲಿ ನರೇಂದ್ರ ಮೋದಿ ತಮಿಳುನಾಡು ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ಕೊಟ್ಟಿದ್ದು ಆಸ್ಕರ್ ಪ್ರಶಸ್ತಿ ಜಯಿಸಿದ ಕಿರಚಿತ್ರ ” ಎಲಿಫೆಂಟ್ ವಿಸ್ಪರರ್ಸ್” ನಿಜ ಪಾತ್ರಧಾರಿಗಳಾದ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಭೇಟಿ ಆಗಿ ಸನ್ಮಾನಿಸಲಿದ್ದಾರೆ.
ಇನ್ನು, ತೆಪ್ಪಕಾಡು ಅರಣ್ಯ ಶಿಬಿರದಲ್ಲಿ ಆನೆಗಳಿಗೆ ಮೋದಿ ಕಬ್ಬು ತಿನ್ನಿಸಲಿದ್ದು ಆನೆಗಳ ಗೌರವ ವಂದನೆಯನ್ನೂ ಸ್ವೀಕರಿಸಲಿದ್ದಾರೆ.