ಅಂತರ ರಾಜ್ಯ ಜಲ ವಿವಾದ – ಕೃಷಿ ಅಭಿವೃದ್ಧಿ ಕುರಿತು ಕೇಂದ್ರ ಸಚಿವರ ಜೊತೆ ಮುಖ್ಯಮಂತ್ರಿ ಚೆರ್ಚೆ

ನವದೆಹಲಿ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು  ಕೇಂದ್ರ ಸಚಿವರನ್ನು ಭೇಟಿ ಮಾಡಿ ಮೇಕೆದಾಟು,ಮಹದಾಯಿ ನದಿ ನೀರು ಹಂಚಿಕೆ ಡಿಪಿಆರ್ ಹಾಗೂ ಗಜೆಟ್ನೋ ಟಿಫೀಕೇಷನ್ ಹಾಗೂ ಕೃಷಿ  ಅಭಿವೃದ್ಧಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.

ಕೇಂದ್ರ ಸಚಿವರ ಜೊತೆಗೆ  ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೇಂದ್ರ ಕೃಷಿ ಸಚಿವರೊಂದಿಗೆ ಕರ್ನಾಟಕದಲ್ಲಿ 2021-22ರ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಹೆಸರು ಖರೀದಿಗೆ  ಬೆಂಬಲ ಬೆಲೆಯಲ್ಲಿ ಹೆಸರು,ಉದ್ದು ಖರೀದಿಗೆ ಕೇಂದ್ರದ ಅನುಮತಿ ದೊರೆತಿದ್ದು,ಖರೀದಿ ಬಗ್ಗೆ ಆದೇಶ ಸದ್ಯ ದಲ್ಲಿಯೇ  ಹೊರಬೀಳಲಿದೆ ಎಂದರು.ರೈತರ ಆದಾಯವನ್ನು ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೆಗೆದು ಕೊಳ್ಳಬೇ ಕಾದ ಕ್ರಮಗಳು ಹಾಗೂ ಹೊಸ ಕೃಷಿ ನೀತಿಗೆ ಸಂಬಂಧಿಸಿದಂತೆ ಕರ್ನಾಟ ಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಬಗ್ಗೆ  ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.

ರೈತರ ಮಕ್ಕಳಿಗಾಗಿ ರೈತ ವಿದ್ಯಾನಿಧಿ,ವಿದ್ಯಾರ್ಥಿ ವೇತನ ಯೋಜನೆಗಳ ಉದ್ಘಾಟಿಸಲು ಕೇಂದ್ರ ಕೃಷಿ ಸಚಿವರು ಮುಂದಿನ ತಿಂಗಳ 5 ನೇ ತಾರೀಖಿನಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಮುಖ್ಯ ಮಂತ್ರಿಗಳು ಹೇಳಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತದ ಬಗ್ಗೆ ಚರ್ಚಿಸಲಾಯಿತು.ಬ್ರಿಜೇಶ್ ಕುಮಾರ್ ಮಿಶ್ರಾ ಟ್ರಿಬ್ಯೂ ನಲ್ ನ ಅಧಿಸೂಚನೆ ಹೊರಡಿಸಲು ಕರ್ನಾಟಕ ಹಾಗೂ ಮಹಾರಾಷ್ಟ್ರ ಒಟ್ಟಾಗಿ ಬೇಡಿಕೆ ಇಟ್ಟಿದೆ ಎಂದರು.ಜಲವಿವಾದ ಪ್ರಕರಣ ಬಹುದಿನ ಗಳಿಂದ ಸರ್ವೋಚ್ಚ ನ್ಯಾಯಾಲಯ ದಲ್ಲಿ ಬಾಕಿ ಉಳಿದ್ದಿದ್ದು,ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ  ಪ್ರಕರಣ ಇತ್ಯರ್ಥಗೊಳಿಸಲು ಮನವಿ ಮಾಡ ಲಾಯಿತು.ಅಂತರರಾಜ್ಯ ಜಲವಿವಾದ ಕಾಯ್ದೆಯ ಪ್ರಕಾರ ರಾಜ್ಯದ ನಿಲುವು ಸಕಾರಾತ್ಮಕ ವಾಗಿದ್ದು ರಾಜ್ಯದ  ಅಟಾರ್ನಿ  ಜನರಲ್ ರವರ ಸಲಹೆ ಮೇರೆಗೆ ಮುಂದಿನ ನಡೆ  ಇಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅಂತರರಾಜ್ಯ ಕಲಹಗಳನ್ನು ಬಗೆಹರಿಸುವ ಕುರಿತಂತೆ ಇಂದು ಕೇಂದ್ರ ಜಲಶಕ್ತಿ ಸಚಿವರೊಂದಿಗೆ   ಸುದೀರ್ಘ ಚರ್ಚೆ ಮಾಡಲಾಗಿದೆ.ತಮಿಳು ನಾಡು ಸರ್ಕಾರದ ಕಾವೇರಿ -ಗುಂಡಾರ್ ನದಿ ಜೋಡಣೆ ಯೋಜನೆಗೆ ಅನುಮತಿ ಇಲ್ಲದಿರುವುದರಿಂದ ಅನುಷ್ಠಾನ ಕಷ್ಟ ಸಾಧ್ಯ.ಮೇಕೆದಾಟು, ಮಲಪ್ರಭ ಯೋಜನೆಗಳ ಬಗ್ಗೆಯೂ ಚರ್ಚಿಸಲಾಗಿದ್ದು,ಕಾವೇರಿ ಹಾಗೂ ಎತ್ತಿನಹೊಳೆ ಬಗ್ಗೆ ನಿರ್ದಿಷ್ಟ ಪ್ರಸ್ತಾವನೆಯೊಂದಿಗೆ ಪುನ: ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು ಎಂದರು.

ಮಹದಾಯಿ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾನೂನು ತಂಡದೊಂದಿಗೆ ಚರ್ಚಿಸಲಾಗುವುದು.ರಾಜ್ಯದ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡಲಾಗುವುದು ಎಂದ ಮುಖ್ಯಮಂತ್ರಿ ಗಳು,ರಾಜ್ಯ ಸರ್ಕಾರದ ನಿಲುವು ನ್ಯಾಯಸಮ್ಮತವಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ.ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ನೀರು ಹಂಚಿಕೆ ಮಾಡಿದ್ದೇವೆ. ಕೇಂದ್ರ ಜಲ ಪ್ರಾಧಿಕಾರ ಸಭೆಯಲ್ಲಿ  ಚರ್ಚಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಬೇಕಿದೆ.ಉಳಿದಂತೆ ಎಲ್ಲಾ ಅಗತ್ಯ ಅನುಮೋದನೆಗಳು ದೊರೆತಿ ವೆ ಎಂದರು.ಎತ್ತಿನಹೊಳೆ ಯೋಜನೆಯ ಬಗ್ಗೆ ಚರ್ಚೆಯಾಗಿದ್ದು ಆ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ.ನಿರ್ದಿಷ್ಠ ಪ್ರಸ್ತಾವನೆಯೊಂದಿಗೆ ಮತ್ತೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇನೆ.ಜಲನಜೀವನ್  ಮಿಷನ್ ಯೋಜನೆಗೆ ಅಗತ್ಯವಿರುವ ಅನುದಾನಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ‌ ಎಂದು ಅವರು ತಿಳಿಸಿದರು.‌ಮುಖ್ಯಮಂತ್ರಿ ಸಚಿವ ಭೇಟಿ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಉಪಸ್ಥಿತರಿದ್ದರು.

More News

You cannot copy content of this page