ಬೆಂಗಳೂರು : ಸಚಿವರುಗಳಾದ ಆರ್ ಅಶೋಕ್ ಹಾಗೂ ವಿ ಸೋಮಣ್ಣ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕ್ರಮವಾಗಿ ಆರ್ ಅಶೋಕ್ ಮತ್ತು ವಿ ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.


ಇದರಿಂದ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಅವರಿಗೆ ಈ ಬಾರಿಯ ಚುನಾವಣೆಗೆ ಸ್ವಲ್ಪ ಮಟ್ಟಿಗೆ ಪ್ರತಿರೋಧ ನೀಡುವ ವ್ಯಕ್ತಿಗಳನ್ನು ಕಣಕ್ಕಿಳಿಸಿದೆ. ಆದರೆ ಅದರಲ್ಲೂ ಅವರಿಗೆ ಎರಡೆರಡು ಕ್ಷೇತ್ರಗಳನ್ನು ನೀಡಿ ಕಣಕ್ಕಿಳಿಸಿದೆ.
ಹಾಲಿ ಏಳು ಶಾಸಕರಿಗೆ ಟಿಕೆಟ್ ಮಿಸ್ ಆಗಿದೆ, ಅವರುಗಳ್ಯಾರು ಎಂದರೆ,
ಅನಿಲ್ ಬೆನಕೆ – ಬೆಳಗಾವಿ
ಗೂಳಿಹಟ್ಟಿ ಶೇಖರ್ – ಹೊಸದುರ್ಗ
ಸಂಜೀವ್ ಮಠಂದೂರು – ಪುತ್ತೂರು
ಅಂಗಾರ – ಸುಳ್ಯ
ಲಾಲಾಜಿ ಮಂಡೆನ್ – ಕಾಪು
ರಘುಪತಿ ಭಟ್ – ಉಡುಪಿ
ಹಾಲಾಡಿ ಶ್ರೀನಿವಾಸ್ ಶೆಟ್ಟಿ – ಕುಂದಾಪುರ
ಹಾಗೆಯೇ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಅಪೇಕ್ಷೆಯಂತೆ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಶಿಕಾರಿಪುರದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ಶಾಸಕಿ ಲಕ್ಚ್ಮಿ ಹೆಬ್ಬಾಳ್ಕರ್ ವಿರುದ್ದ ತನ್ನ ಆಪ್ತನಿಗೆ ಟಿಕೆಟ್ ಕೊಡಿಸುವಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ನಾಗೇಶ್ ಮುಣಲ್ಕರ್ ಅವರಿಗೆ ಟಿಕೆಟ್ ಕೊಡಿಸಿದ್ದು, ಅವರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಈ ಮೂಲಕ ತನ್ನ ಎದುರಾಳಿ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಪಣತೊಟ್ಟಿರುವ ರಮೇಶ್ ಜಾರಕಿಹೊಳಿ ಶಿಷ್ಯನಿಗೆ ಟಿಕೆಟ್ ಕೊಡಿಸಿದ್ದಾರೆ.
ಎನ್ ಆರ್ ಕ್ಷೇತ್ರದ ಟಿಕೇಟ್ ಘೋಷಿಸಿಲ್ಲ
ಯಡಿಯೂರಪ್ಪ ಆಪ್ತ ಎನ್ ಆರ್ ಸಂತೋಷ್ ಗೆ ಟಿಕೆಟ್ ನೀಡುವುದರ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಅರೆಸಿಕೆರೆಯಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಎನ್ ಆರ್ ಸಂತೋಷ್, ಇದೀಗ ಈ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿಲ್ಲ.
ವಿ ಸೋಮಣ್ಣ ಅವರ ಪುತ್ರನಿಗಿಲ್ವಾ ಟಿಕೆಟ್
ಗುಬ್ಬಿ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಮಾಡದ ಬಿಜೆಪಿ ವರಿಷ್ಠರು, ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಸಚಿವ ವಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಈ ಕ್ಷೇತ್ರದ ಟಿಕೆಟ್ ಬೇಡಿಕೆಯನ್ನು ಸಚಿವ ವಿ ಸೋಮಣ್ಣ ಇಟ್ಟಿದ್ದು, ಎರಡನೇ ಪಟ್ಟಿಯಲ್ಲಿ ಅನೌನ್ಸ್ ಆಗುವ ಸಾಧ್ಯತೆಗಳಿವೆ.




