MP Kumaraswamy Resign: ಕೈ ತಪ್ಪಿದ ಟಿಕೆಟ್: ಬಿಜೆಪಿ ಪಕ್ಷಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ ರಾಜೀನಾಮೆ

ಚಿಕ್ಕಮಗಳೂರು: ಬುಧವಾರ ರಾತ್ರಿ ಬಿಜೆಪಿ‌ ಪಕ್ಷ ಬಿಡುಗಡೆ ಮಾಫ಼ಿದ ೨ನೇ ಪಟ್ಟಿಯಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವರೇ ನನಗೆ ಟಿಕೆಟ್ ತಪ್ಪಿಸಿದ್ದು ಎಂದು ಆರೋಪಿಸಿದ್ದಾರೆ.

ಮೂಡಿಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಅವಕಾಶ ನೀಡದ ಹಿನ್ನೆಲೆಯಲ್ಲಿ ಬೇಸತ್ತ ಎಂ.ಪಿ. ಕುಮಾರಸ್ವಾಮಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟಿದ್ದಾರೆ.
ತನ್ನ ವಿರುದ್ಧ ವರಿಷ್ಠರಿಗೆ ತಪ್ಪು ಅಭಿಪ್ರಾಯ ಬರುವಂತೆ ಸುಳ್ಳು ವರದಿಯನ್ನು ನೀಡಲಾಗಿದೆ ಎಂದು ಆರೋಪಿಸಿದರು.
ಶಾಸಕ ಸಿ.ಟಿ .ರವಿ ವಿರುದ್ಧ ನೇರ ವಾಗ್ದಾಳಿ ನಡೆಸಿ, ಆತ ಓದಿಕೊಂಡು ಬಂದಿಲ್ಲ, ಆರ್ ಎಸ್ ಎಸ್ ನಿಂದ ಮಾತನಾಡುವುದನ್ನು ಕಲಿತು ಬಂದಿದ್ದಾನೆ ಎಂದು ಏಕವಚನದಲ್ಲಿ ಮೂದಲಿಸಿದರು.
ಪಕ್ಷವನ್ನು ನಿರ್ನಾಮ ಮಾಡುವುದೇ ರವಿಯ ಮುಖ್ಯ ಉದೇಶವಾಗಿದ್ದು ಅಲ್ಲಿಯವರೆಗೂ ಅವರು ವಿಶ್ರಮಿಸುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರಿಗೆ ಇದು ಮನವರಿಕೆ ಆಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೊಬೈಲ್ ಸ್ವಿಚ್ ಆಫ್ ಮಾಡಿದರೆ ಬಿಜೆಪಿ 50 ಸ್ಥಾನಗಳನ್ನು ಗೆಲ್ಲುವುದಿಲ್ಲ. ದಯವಿಟ್ಟು ಸ್ವಿಚ್ ಆಫ್ ಮಾಡಿ ಎಂದು ಯಡಿಯೂರಪ್ಪನವರಲ್ಲಿ ಬಹಿರಂಗ ಮನವಿ ಮಾಡಿದರು.
ಈ ಮಧ್ಯೆ ಕುಮಾರಸ್ವಾಮಿ ಜೆಡಿಎಸ್ ಗೆ ಸೇರುತ್ತಾರೆ ಎನ್ನುವ ದಟ್ಟ ವದಂತಿ ಇದ್ದು ಈಗಾಗಲೇ ಆ ಪಕ್ಷದ ಮುಖಂಡರು ಇವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ

More News