Sanjay Dutt injury: ಕೇಡಿ ಚಿತ್ರದ ಬಾಂಬ್ ಸ್ಫೋಟದ ಚಿತ್ರೀಕರಣದ ವೇಳೆ ಜಗ್ಗು ದಾದನಿಗೆ ಗಾಯ

ಬೆಂಗಳೂರು: ಕೇಡಿ ಚಿತ್ರದ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್ ಗೆ ಗಾಯವಾಗಿದೆ. ಮಾಗಡಿ ರಸ್ತೆಯ ಸೀಗೇನಹಳ್ಳಿಯಲ್ಲಿ ಶೂಟಿಂಗ್ ನಡೆಸಲಾಗುತ್ತಿತ್ತು. ಬಾಂಬ್ ಶೂಟಿಂಗ್ ದೃಶ್ಯ ಚಿತ್ರೀಕರಣ ಮಾಡುವ ವೇಳೆ ಸಂಜಯ್ ದತ್ ಗೆ ಗಾಯವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್ ನ ಬಹುಕೋಟಿ ಹೂಡಿಕೆ ಚಿತ್ರ ಕೇಡಿ ಫೈಟಿಂಗ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದೆ. ಸೀಗೇನಹಳ್ಳಿಯಲ್ಲಿ ಬೃಹತ್ ಸೆಟ್ ನ್ನು ಹಾಕಿ ಸಾಹಸ ನಿರ್ದೇಶಕ ರವಿವರ್ಮಾ ಕಂಪೋಸ್ ಮಾಡಿದ ಸಾಹಸಮಯ ದೃಶ್ಯ ಚಿತ್ರೀಕರಣ ನಡೆಸಲಾಗುತ್ತಿತ್ತು. ಈ ವೇಳೆ ಬಾಂಬ್ ಬ್ಲಾಸ್ಟ್ ಆಗುವ ದೃಶ್ಯ ಚಿತ್ರೀಕರಣ ಮಾಡುವ ವೇಳೆ ಜಗ್ಗು ದಾದಗೆ ಕಣ್ಣಿಗೆ ಏಟು ಬಿದ್ದಿದೆ. ಮಂಗಳವಾರ ಸಂಜೆ 6 ಗಂಟೆ ಆಸುಪಾಸಿನಲ್ಲಿ ಘಟನೆ ನಡೆದಿದ್ದು, ಚಿತ್ರೀಕರಣ ಸ್ಟಾಪ್ ಮಾಡಿ ದತ್ತಾರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅದೃಷ್ಟವಶಾತ್ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ..
ಆದರೆ ಬಾಂಬ್ ಬ್ಲಾಸ್ಟ್ ಮಾಡುವಾಗ ಸಂಜಯ್ ದತ್ ಅವರ ಮೊಣಕೈ, ಮುಖ ಹಾಗೂ ಕಣ್ಣಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ಬೆನ್ನಲ್ಲೇ ಸಂಜಯ್ ದತ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ನೀಡಿದ ಬಳಿಕ ಕೆಲ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚಿಕಿತ್ಸೆ ಪಡೆದ ಬಳಿಕ ಸಂಜಯ್ ದತ್ತ ಅವರು ವಾಪಸ್ ಮುಂಬೈಗೆ ತೆರಳಿದ್ದು, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

More News