RISHABH SHETTY POLITICS ENTRY: ಕರುನಾಡ ಕುರುಕ್ಷೇತ್ರಕ್ಕೆ ಡಿವೈನ್ ಸ್ಟಾರ್ ರಿಷಬ್ ಎಂಟ್ರಿ..?

ರಾಜ್ಯ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರೋಚಕವಾಗ್ತಿದೆ. ಈಗಾಗಲೇ ನಟ ಕಿಚ್ಚ ಸುದೀಪ್ ರನ್ನು
ಕರೆದಂತು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಬಿಜೆಪಿ ಈಗ ರಿಷಬ್ ನತ್ತ ತಿರುಗಿದೆ. ರಾಜ್ಯ ವಿಧಾನ ಸಭಾ ಚುನಾವಣಾ ಪ್ರಚಾರದ ಅಖಾಡಕ್ಕೆ ರಿಷಬ್ ರನ್ನು ಕರೆತರುವ ಮೂಲಕ ಮತದಾರರನ್ನ ಸೆಳೆಯುವ ಕೆಲಸವನ್ನು ಬಿಜೆಪಿ ಮಾಡ್ತಿದೆ.

ಕಾಂತಾರ ಕ್ರೇಸ್ ನ್ನು ಮತವಾಗಿ ಪರಿವರ್ತಿಸುವ ಪ್ಲ್ಯಾನ್..?

ಯಾವುದೇ ಕಾರಣಕ್ಕೂ ನಾನು ರಾಜಕೀಯ ಕಡೆ ಬರಲ್ಲ.. ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡೋದು ಇದೆ ಎಂದು ನಟ ರಿಷಬ್ ಎಷ್ಟೇ ಹೇಳಿಕೆ ನೀಡಿದರೂ ಅವರ ಸುತ್ತ ರಾಜಕೀಯ ಸುದ್ದಿ ಸುತ್ತುತ್ತಲೇ ಇದೆ. ಕಾಂತಾರ ಸಿನಿಮಾ ಮೂಲಕ ಮನೆ ಮಾತಾದ ರಿಷಬ್ ರನ್ನು ಕರೆತಂದರೆ ಮತದಾರ ಮಹಾಪ್ರಭು ಕರುಣೆ ತೋರಬಹುದೆಂಬ ಹಿನ್ನಲೆಯಲ್ಲಿ ಕೇಸರಿ ಪಡೆ ರಿಷಬ್ ಗೆ ಗಾಳ ಹಾಕುತ್ತಿದೆ.

ಕಿಚ್ಚ ಸುದೀಪ್‌ ಈಗಾಗಲೇ ಬೊಮ್ಮಾಯಿ ಪರ ನಿಲ್ಲಲು ನಿರ್ಧರಿಸಿದ್ದಾರೆ. ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಕಾಂತಾರ ಶಿವನನ್ನು ಕರೆ ತಂದು ಪ್ರಚಾರ ಮಾಡಿಸುವ ಸಿದ್ದತೆ ಯಲ್ಲಿ ಬಿಜೆಪಿ ಇದೆ. ಕರಾವಳಿ ಯಲ್ಲಿ ಕಮಲ ಪಾಳಯ ಇನ್ನಷ್ಟು ಬಲ ಪಡೆಯುವುದಕ್ಕಾಗಿ ರಿಷಬ್ ನ ಮೊರೆ ಹೋಗಿದೆ ಬಿಜೆಪಿ ಎಂಬ ಸುದ್ದಿ ಭಾರೀ ಸದ್ದು ಮಾಡ್ತಿದೆ.

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆಯಲು ಸಿಎಂ ಬಸವರಾಜ್ ಬೊಮ್ಮಾಯಿ ತೆರಳಿದ ವೇಳೆ ಸಿಎಂ ಜೊತೆಗೆ ರಿಷಬ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸಿಎಂ ಕಾಲಿಗೆ ಬಿದ್ದು ಆಶಿರ್ವಾದ ಪಡೆದಿದ್ದು, ರಿಷಬ್ ರ ಕುರಿತ ರಾಜಕೀಯ ಸುದ್ದಿ ಹುಟ್ಟಲು ಕಾರಣವಾಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಸಿಎಂ, ಪ್ರಚಾರದ ಬಗ್ಗೆ ಇನ್ನೂ ಏನೂ ಮಾತಾಡಿಲ್ಲ. ನನ್ನದು ರಿಷಬ್ ರದ್ದು ಒಳ್ಳೆ ಸ್ನೇಹ ಇದೆ. ಹೀಗಾಗಿ ಭೇಟಿ ಮಾಡಿದೆ ಎಂದಿದ್ದಾರೆ. ಆದರೆ ರಿಷಬ್ ನಮ್ಮ ಸಿದ್ದಾಂತ ಕ್ಕೆ ಬಹಳ ಹತ್ತಿರ ಇರುವವರು. ನಮ್ಮ ಸಿದ್ದಾಂತ ವನ್ನು ಬಹಿರಂಗ ವಾಗಿ ಪ್ರತಿಪಾದನೆ ಮಾಡುವವರು ಎಂದು ತಿಳಿಸುವ ಮೂಲಕ ಕಾಂತಾರ ಕ್ರೇಸ್ ನ್ನು ಮತವಾಗಿ ಪರಿವರ್ತಿಸುವ ಕೆಲಸ ಮಾಡಿದರು.

More News