Royal Challengers Bangalore: ಬೆಂಗಳೂರು ಆಟಗಾರರ ಪರಿಸರ ಪ್ರೇಮ: ಏ.23ರಂದು ಗ್ರೀನ್‌ ಜರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಆರ್‌ಸಿಬಿ ಪ್ಲೇಯರ್ಸ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನಲ್ಲಿ ಕ್ರಿಕೆಟ್‌ ಜೊತೆಗೆ ಸಾಮಾಜಿ ಕಳಕಳಿ ಹೊಂದಿರುವ ತಂಡಗಳ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಸಹ ಒಂದು. ಪ್ರತಿಬಾರಿಯ ಐಪಿಎಲ್‌ನ ಒಂದು ಪಂದ್ಯದಲ್ಲಿ “ಹಸಿರು ಜರ್ಸಿ” ಧರಿಸಿ ಮೈದಾನಕ್ಕಿಳಿಯುವ ಆರ್‌ಸಿಬಿ ಆಟಗಾರರು ಆ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರುತ್ತಾರೆ.

ಅದೇ ರೀತಿಯಲ್ಲಿ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲೂ ಆರ್‌ಸಿಬಿ ಆಟಗಾರರು “ಗೋ ಗ್ರೀನ್‌” ಕ್ಯಾಂಪೇನ್‌ ನಡೆಸಲು ಸಜ್ಜಾಗಿದ್ದಾರೆ. ಏಪ್ರಿಲ್‌ 22ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರ ಹಸಿರು ಜರ್ಸಿ ಧರಿಸಿ ಮೈದಾನಕ್ಕಿಳಿಯಲಿದ್ದಾರೆ.

https://twitter.com/RCBTweets/status/1646506761506164737?t=ttttIaUFO1W6Yae5br3nEw&s=08

ವಿಶೇಷವೆಂದರೆ ಗೋ ಗ್ರೀನ್‌ ಅಭಿಯಾನಕ್ಕಾಗಿ ಆರ್‌ಸಿಬಿ ಆಟಗಾರರು ಧರಿಸುವ ಹಸಿರು ಜರ್ಸಿಯನ್ನ ಸಂಪೂರ್ಣವಾಗಿ ಪುನರ್‌ ಬಳಕೆಯ ವಸ್ತುಗಳನ್ನ ಬಳಸಿ ಮಾಡಲಾಗುತ್ತದೆ. ಇನ್ನೂ ಆರ್‌ಸಿಬಿ ಆಟಗಾರರ ಈ ರಾಯಲ್‌ ಅಭಿಯಾನಕ್ಕೆ ಫ್ಯಾನ್ಸ್‌ಗಳು ಸಹ ಸಾಥ್‌ ನೀಡಬಹುದಾಗಿದ್ದು, ಆಸಕ್ತರು ಆರ್‌ಸಿಬಿ ತಂಡದ ಅಧಿಕೃತ ವೆಬ್‌ಸೈಟ್‌ ಮೂಲಕ ಗೋ ಗ್ರೀನ್‌ ಅಭಿಯಾನಕ್ಕೆ ಕೈಜೋಡಿಸಬಹುದಾಗಿದೆ.

ಇನ್ನೂ ಏ.23ರಂದು ನಡೆಯುವ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ನಡೆಯುವ ಗೋ ಗ್ರೀನ್‌ ಅಭಿಯಾನದ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡದ ಆಟಗಾರರು ಹಸಿರು ಜರ್ಸಿ ಧರಿಸಿ ಫೋಟ್‌ ಶೂಟ್‌ ಸಹ ನಡೆಸಿದರು. ನಾಯಕ ಫಾಫ್‌ ಡುಪ್ಲೆಸ್ಸಿ, ವಿರಾಟ್‌ ಕೊಹ್ಲಿ, ಗ್ಲೇನ್‌ ಮ್ಯಾಕ್ಸ್‌ವೆಲ್‌, ದಿನೇಶ್‌ ಕಾರ್ತಿಕ್‌ ಸೇರಿದಂತೆ ಎಲ್ಲಾ ಆಟಗಾರರು ಸಹ ಹಸಿರು ಜರ್ಸಿ ಧರಿಸಿ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ.

More News