ಸಚಿವ ಮಾಧುಸ್ವಾಮಿ ನನ್ನ ಕತ್ತು ಕೊಯ್ದರು, ನನ್ನನ್ನು ದುರಂತ ನಾಯಕನನ್ನಾಗಿ ಮಾಡಿದರು: ಬಿಜೆಪಿ ಟಿಕೆಟ್ ವಂಚಿತ ಬೆಟ್ಟಸ್ವಾಮಿ ಕಣ್ಣೀರು

ತುಮಕೂರು : ಸಚಿವ ಮಾಧುಸ್ವಾಮಿ ನನ್ನ ಕತ್ತು ಕೊಯ್ದರು, ನನ್ನನ್ನು ದುರಂತ ನಾಯಕನನ್ನಾಗಿ ಮಾಡಿದರು ಎಂದು ಗುಬ್ಬಿ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಬೆಟ್ಟಸ್ವಾಮಿ ಕಣ್ಣೀರು ಹಾಕಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತೊರೆದು ನಿನ್ನೆ ಜೆಡಿಎಸ್ ಗೆ ಸೇರಿದ ಬೆಟ್ಟಸ್ವಾಮಿ, ಸಚಿವ ಮಾಧುಸ್ವಾಮಿ ವಿರುದ್ದ ಹರಿಹಾಯ್ದರು.

ಬಿಜೆಪಿಯಿಂದ ನನಗೆ ಟಿಕೆಟ್ ತಪ್ಪಲು ಸಚಿವ ಮಾಧುಸ್ವಾಮಿಯೇ ನೇರ ಕಾರಣ, ಅವರು ಜಾತಿಯ ವ್ಯಾಮೋಹಕ್ಕೆ ಸಿಲುಕಿ, ತಮ್ಮ ಸಮಾಜದವರಿಗೆ ಟಿಕೆಟ್ ಕೊಡಿಸಿದ್ದಾರೆ, ಮೊದಲ ಪಟ್ಟಣದಲ್ಲಿ 190 ಜನರ ಹೆಸರಿತ್ತು, ಗುಬ್ಬಿ ಕ್ಷೇತ್ರದಿಂದ ನನ್ನ ಹೆಸರು ಅಂತಿಮವಾಗಿತ್ತು, ಮಾಧುಸ್ವಾಮಿ ಪ್ರಭಾವದಿಂದ ನನ್ನ ಹೆಸರು ಡಿಲೀಟ್ ಮಾಡಲಾಯಿತು. ಆಗ 189 ಜನರ ಹೆಸರು ಮಾತ್ರ ಬಿಡುಗಡೆಯಾತ್ತು ಎಂದು ಆರೋಪಿಸಿದರು.
ನನ್ನ ಬೀದಿಗೆ ತಂದ ಮಾಧುಸ್ವಾಮಿಗೆ ದೇವರು ಒಳ್ಳೆಯದು ಮಾಡಲ್ಲ ಎಂದು ಶಾಪ ಹಾಕಿದ ಅವರು, ನಾನೊಬ್ಬ ಹಿಂದುಳಿದ ವರ್ಗದ ನಾಯಕ, ನನ್ನನ್ನು ವ್ಯವಸ್ಥಿತವಾಗಿ ತುಳಿದರು. ಐದು ಬಾರಿ ಪಕ್ಷದ ವಿರುದ್ದ ಕೆಲಸ ಮಾಡಿದ ದಿಲೀಪ್ ಕುಮಾರ್ ಗೆ ಟಿಕೆಟ್ ಕೊಟ್ಟು ನನಗೆ ಮೋಸ ಮಾಡಿದರು ಎಂದು ಕಣ್ಣೀರು ಹಾಕಿದರು.

More News