ನಟಿ ಸಮಂತಾ ನಟನೆಯ ಶಾಕುಂತಲಂ ಸಿನಿಮಾ ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ತಮ್ಮ ಅನಾರೋಗ್ಯ ದ ನಡುವೆಯೂ ಗೋಷ್ಠಿ ಅಟೆಂಟ್ ಮಾಡಿ, ಪ್ರಚಾರ ಮಾಡಿದ್ದ ನಟಿ ಶ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ. ಮೊದಲೇ ಗೊತ್ತಿದ್ದ ಕಥೆಗೆ ಕೆಟ್ಟ ಗ್ರಾಫಿಕ್ ಬಳಸಿ ಹಾಳು ಮಾಡಿದ್ದಾರೆ ಎಂಬ ಟೀಕೆ ವ್ಯಕ್ತವಾಗ್ತಿದೆ. ಇದರ ಬೆನ್ನಲ್ಲೇ ಸದಾ ಒಂದಲ್ಲ ಒಂದು ವಿವಾದದ ಹೇಳಿಕೆ ನೀಡೋ ಮೂಲಕ ಸದ್ದು ಮಾಡುವ ವಿಮರ್ಶಕ ಉಮೈರ್ ಸಂಧು, ನಟಿ ಸಮಂತಾ ಕೆರಿಯರ್ ಕ್ರೇಜ್ ಮುಗಿದ ಅಧ್ಯಾಯ ಎಂದು ಹೇಳುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ ಸಂಧು,
ನಟಿ ಸಮಂತಾ ಕೆರಿಯರ್- ಕ್ರೇಜ್ ಇನ್ನು ಮುಗಿದ ಅಧ್ಯಾಯ. ಇವರ ಸೋಲೋ ಹಾಗೂ ಅತೀ ದೊಡ್ಡ ರಿಲೀಸ್ ‘ಶಾಕುಂತಲ’ ಮೊದಲ ದಿನ ವಿಶ್ವದಾದ್ಯಂತ ದುರಂತ ಅಂತ್ಯ ಕಂಡಿದೆ. ಸಮಂತಾ ಒಬ್ಬರು ಮಹಾನಟಿ ಅಲ್ಲ, ಫ್ಲಾಪ್ ಕ್ವೀನ್.ಇವರಿಂದಾಗಿ ನಿರ್ಮಾಪಕರಿಗೆ ಸಿಕ್ಕಾಪಟ್ಟೆ ಹಣ ನಷ್ಟ ಆಗಿದೆ. ಮೊದಲ ದಿನದ ಕಲೆಕ್ಷನ್ ನಾಚಿಕೆಗೇಡು ಎಂದು ಬರೆದುಕೊಂಡಿದ್ದಾರೆ.
ಇಷ್ಟಕ್ಕೆ ನಿಲ್ಲದ ಅವರು, ಸಮಂತಾ ಖಿನ್ನತೆಗೆ ಜಾರಿದ್ದಾರೆ ಎಂದು ಕಮೆಂಟಿಸುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಯಾಗಿದ್ದಾರೆ. ಶಾಕುಂತಲಂʼ ಸಿನಿಮಾದ ಸೋಲಿನ ಬಳಿಕ ನಟಿ ಸಮಂತಾ ಖಿನ್ನತೆಗೆ ಒಳಗಾಗಿದ್ದಾರೆ. ನಿನ್ನೆಯಿಂದ ಸಮಂತಾ ತನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರ ಬ್ರ‍್ಯಾಂಡ್ ಹಾಗೂ ಮಾರ್ಕೆಟ್ ಬೆಲೆ ಒಂದು ದಿನದಲ್ಲೇ ಕಡಿಮೆಯಾಗಿದೆ ಎಂದ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಯಾಗ್ತಿದೆ.




