ಕಿರುತೆರೆ ನಟಿ ಆರತಿ ಹರೀಶ್ ಚಂದ್ರ ಮಿತ್ತಲ್ ಅವರನ್ನು ವೇಶ್ಯಾವಾಟಿಕೆ ಆರೋಪದ ಅಡಿ ಪೊಲೀಸರು ಬಂಧಿಸಿದ್ದಾರೆ.
ಮಾಡೆಲ್ ಗಳನ್ನು ಬಳಕೆ ಮಾಡಿಕೊಂಡು ಆರತಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ದೊರೆತ ಖಚಿತ ಮಾಹಿತಿ ಆಧಾರದಡಿ ಆರತಿಯನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ.

ಮುಂಬೈ ಪೊಲೀಸರ ಸೋಶಿಯಲ್ ಬ್ರಾಂಚ್, ಪೊಲೀಸ್ ಅಧಿಕಾರಿಗಳನ್ನು ಗ್ರಾಹಕರ ಸೋಗಿನಲ್ಲಿ ಕಳುಹಿಸಿ ಇಬ್ಬರು ಮಾಡೆಲ್‌ಗಳನ್ನು ರಕ್ಷಿಸಿದ್ದಾರೆ. ನಟಿ ಆರತಿ (೨೭ ವರ್ಷ) ಅವರು ಅಪ್ನಾಪನ್ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜತೆಗೆ ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಗುರುತಿಸಿಕೊಂಡವರು. ಆರತಿ ಮಿತ್ತಲ್ ವೇಶ್ಯಾವಾಟಿಗೆ ದಂಧೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಕೇಳಿಕೊಂಡು ಬರುವ ನಟಿಯರು, ಮಾಡೆಲ್‌ಗಳನ್ನು ಆರತಿ ಗ್ರಾಹಕರ ಬಳಿ ಕಳುಹಿಸುತ್ತಿದ್ದಳು. ಹೆಚ್ಚಿನ ಹಣ ಸಿಗುತ್ತಿದ್ದರಿಂದ ಅವರು ಗ್ರಾಹಕರ ಬಳಿ ಹೋಗುತ್ತಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಆಕೆಯ ಮೇಲೆ ಕಣ್ಣಿಟ್ಟಿದ್ದರು.
ಕೂಡಲೇ ಎಚ್ಚೆತ್ತುಕೊಂಡ ಮುಂಬೈ ಸೋಶಿಯಲ್ ಸರ್ವೀಸ್ ಬ್ರಾಂಚ್ ಅಧಿಕಾರಿಗಳು ಗ್ರಾಹಕರ ಮಾರುವೇಷದಲ್ಲಿ ಆರತಿ ಸಂಪರ್ಕಿಸಿದ್ದರು. 60 ಸಾವಿರ ಬೇಡಿಕೆ ಇಟ್ಟು, ಹುಡುಗಿಯರನ್ನು ಕಳುಹಿಸುವುದಾಗಿ ಆರತಿ ತಿಳಿಸಿದ್ದರು.
ಹೋಟೆಲ್ ರೂಮ್ ಗೆ ತೆರಳುವ ಮುನ್ನ ಸ್ವತಃ ಆರತಿಯೇ ಅಧಿಕಾರಿಗಳಿಗೆ ಕಾಂಡೋಮ್ ನೀಡಿದ್ದಾರೆ ಎನ್ನಲಾಗಿದೆ. ಸೋಶಿಯಲ್ ಸರ್ವೀಸ್ ಬ್ರ್ಯಾಂಚ್ ಸಂಪೂರ್ಣ ವಿಚಾರಣೆ ನಡೆಸಿ, ಘಟನೆಗೆ ಸಂಬಂಧಿಸಿದ ವಿವರಗಳನ್ನು ವಿಡಿಯೋ ಸಮೇತ ಚಿತ್ರೀಕರಿಸಿದ್ದಾರೆ. ಈ ಸಾಕ್ಷಾಧಾರದ ಮೇಲೆ ಪೊಲೀಸರು ಆರತಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆರತಿಯೊಂದಿಗೆ ಇನ್ನೆಲ್ಲ ಯಾರ್ಯಾರು ಇದ್ದಾರೆ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.




