RESIGNATION ACCEPTED: ಶಿರಹಟ್ಟಿ ಬಿಜೆಪಿ ಅಭ್ಯರ್ಥಿಯ ವೈದ್ಯ ವೃತ್ತಿಯ ರಾಜೀನಾಮೆ ಅಂಗೀಕಾರ ಮಾಡಿದ ಆರೋಗ್ಯ ಇಲಾಖೆ

ಬೆಂಗಳೂರು : ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಚಂದ್ರ ಲಮಾಣಿ ರಾಜೀನಾಮೆಯನ್ನು ರಾಜ್ಯ ಆರೋಗ್ಯ ಇಲಾಖೆ ಅಂಗೀಕರಿಸಿದೆ.

ಭ್ರಷ್ಟಾಚಾರ ಆರೋಪ ಹೊಂದಿದ್ದ ಚಂದ್ರ ಲಮಾಣಿ ಬಿಜೆಪಿಯ ಅಭ್ಯರ್ಥಿಯಾಗಿದ್ದರು. ರಾಜೀನಾಮೆ ಅಂಗೀಕಾರವಾಗದೇ ಇದ್ದುದ್ದರಿಂದ ಬಿಜೆಪಿ ಟಿಕೆಟ್ ಘೋಷಿಸಿದ್ದರೂ ಬಿ ಫಾರಂ ವಿತರಿಸಿರಲಿಲ್ಲ. ಕಳೆದ ಮೂರು ದಿನಗಳಿಂದಲೂ ರಾಜೀನಾಮೆ ಅಂಗೀಕರಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು.

ಇಂದು ಆರೋಗ್ಯ ಇಲಾಖೆ ಕೆಎಟಿ ಮತ್ತು ಹೈಕೋರ್ಟ್ ಆದೇಶದ ಅನ್ವಯ ಚಂದ್ರು ಲಮಾಣಿ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ.
ಹಾಲಿ ಬಿಜೆಪಿ ಶಾಸಕ ರಾಮಪ್ಪ‌ ಲಮಾಣಿಯವರು, ಚಂದ್ರ ಲಮಾಣಿಯವರ ರಾಜೀನಾಮೆ‌ ಅಂಗೀಕರಿಸದಂತೆ ಸರ್ಕಾರದ ಮೇಲೆ ಒತ್ತಾಯ ಹೇರಿದ್ದರು. ವಯೋಸಹಜ ಕಾರಣಕ್ಕೆ ರಾಮಪ್ಪ ಲಮಾಣಿ ಅವರಿಗೆ ಟಿಕೆಟ್ ನಿರಾಕರಿಸಿ, ಅದೇ ಸಮುದಾಯದ ಚಂದ್ರು ಲಮಾಣಿಗೆ ಬಿಜೆಪಿ ಟಿಕೇಟ್ ನೀಡಿತ್ತು.

More News