ಧಾರವಾಡ: ಕರ್ನಾಟಕ ರಾಜ್ಯದ ಹದಿನಾರನೇ ವಿಧಾನಸಭೆಯ ರಚನೆಗೆ ಇದೀಗ ಚುನಾವಣೆ ನಡೆಯುತ್ತಿದೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾದ ಬಳಿಕ ನಡೆಯುತ್ತಿರುವ ನಾಲ್ಕನೇ ಚುನಾವಣೆ ಇದಾಗಿದೆ. ಮೇ.10,2023ರಂದು ಮತದಾನ ನಿಗದಿಯಾಗಿದೆ. 2004ರಲ್ಲಿ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆಗೆ ತರಲಾಯಿತು. ಇದೀಗ 2023 ರಲ್ಲಿಯೂ ಸಹ ವಿವಿಪ್ಯಾಟ್ ಯಂತ್ರಗಳನ್ನು ಬಳಸಿ ಮತದಾನ ನಡೆಸಲಾಗುತ್ತದೆ.
1957 ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಆರ್.ಎಮ್. ಪಾಟೀಲ್, ಪಕ್ಷೇತರವಾಗಿ ಎಂ.ಎನ್. ಕೊಯಪ್ಪನವರ ಅಭ್ಯರ್ಥಿಗಳಾಗಿದ್ದರು. ಕಾಂಗ್ರೆಸ್‍ನ ಆರ್.ಎಮ್. ಪಾಟೀಲ್ ಅವರು 21,798 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು.
1962 ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಆರ್.ಎಮ್. ಪಾಟೀಲ್, ಭಾಜಸಂ ನ ಎಮ್.ಕೆ. ಕುಲಕರ್ಣಿ, ಪಕ್ಷೇತರರಾಗಿ ಆರ್.ಎಮ್. ಜೋಶಿ ಸ್ಪರ್ಧಿಸಿದ್ದರು, ಕಾಂಗ್ರೆಸ್‍ನ ಆರ್.ಎಮ್. ಪಾಟೀಲ್ ಅವರು 20,618 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು,
1967 ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಆರ್.ಎಮ್. ಪಾಟೀಲ್, ಭಾಜಸಂ ನ ಬಿ.ಎಂ. ಬೆಟಸೂರ, ಪಕ್ಷೇತರರಾಗಿ ಎಮ್. ಜಿ. ಕೆಲ್ಲೂರ ಅಭ್ಯರ್ಥಿಗಳಾಗಿ ಸ್ಪರ್ದಿಸಿದ್ದರು. ಕಾಂಗ್ರೆಸ್‍ನ ಆರ್.ಎಮ್. ಪಾಟೀಲ್ ಅವರು 25,973 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು,

1972 ರ ಚುನಾವಣೆಯಲ್ಲಿ ಎನ್‍ಸಿಓ ನ ಎಮ್.ಕೆ. ಕುಲಕರ್ಣಿ, ಭಾರಾಕಾಂ ನ ಆರ್.ಎಂ. ಪಾಟೀಲ್, ಭಾಜಸಂ ನ ಕೆ.ಬಿ. ಕಲ್ಲನ್ನವರ ಅಭ್ಯರ್ಥಿಗಳಾಗಿ ಸ್ಪರ್ದಿಸಿದ್ದರು. ಎನ್‍ಸಿಓ ನ ಎಮ್.ಕೆ. ಕುಲಕರ್ಣಿ ಅವರು 21,716 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು,
1978 ರ ಚುನಾವಣೆಯಲ್ಲಿ ಕಾಂಗೈ ನ ಎಸ್.ಪಿ. ಪಾಟೀಲ್, ಜೆಎನ್‍ಪಿ ಯ ಎಮ್.ಕೆ. ಕುಲಕರ್ಣಿ, ಕಾಂಗ್ರೆಸ್ ನ ಬಿ.ಆರ್. ಯಾವಗಲ್ ಅಭ್ಯರ್ಥಿಗಳಾಗಿ ಸ್ಪರ್ದಿಸಿದ್ದರು. ಕಾಂಗೈ ನ ಎಸ್.ಪಿ. ಪಾಟೀಲ್ ಅವರು 22,825 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು.
1983 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಮ್.ಕೆ. ಕುಲಕರ್ಣಿ, ಪಕ್ಷೇತರ (ಜದ) ಎನ್.ಜೆ. ದೇಸಾಯಿ, ಪಕ್ಷೇತರರಾಗಿ ಐ.ಸಿ. ಕೊಟ್ಟೂರ ಸೇರಿದಂತೆ ಒಟ್ಟು 7 ಅಭ್ಯರ್ಥಿಗಳು ಸ್ಪರ್ದಿಸಿದ್ದರು. ಕಾಂಗ್ರೆಸ್ ನ ಎಮ್.ಕೆ. ಕುಲಕರ್ಣಿ ಅವರು 25,524 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು,
1985 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಮ್.ಕೆ. ಕುಲಕರ್ಣಿ, ಜನತಾಪಕ್ಷದ ಚಂದ್ರಕಾಂತ ಕಲ್ಲನ್ನವರ, ಭಾಜಪ ನ ಈಶ್ವರಚಂದ್ರ ಹೊಸಮನಿ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ಸ್ಪರ್ದಿಸಿದ್ದರು. ಕಾಂಗ್ರೆಸ್ ನ ಎಮ್.ಕೆ. ಕುಲಕರ್ಣಿ ಅವರು 23,469 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು,
1989 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಮ್.ಕೆ. ಕುಲಕರ್ಣಿ, ಕರಾರೈಸಂ ನ ವಿ. ಮಂಕಣಿ, ಜನತಾದಳ ಸಿ.ಎನ್. ಕಲ್ಲನ್ನವರ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಸ್ಪರ್ದಿಸಿದ್ದರು. ಕಾಂಗ್ರೆಸ್ ನ ಎಮ್.ಕೆ. ಕುಲಕರ್ಣಿ ಅವರು 27,222 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು,
1994 ರ ಚುನಾವಣೆಯಲ್ಲಿ ಕೆಸಿಪಿ ಯ ಕೆ.ಎನ್. ಗಡ್ಡಿ, ಕಾಂಗ್ರೆಸ್ ನ ಎಮ್.ಕೆ. ಕುಲಕರ್ಣಿ, ಜನತಾದಳ ಬಿ.ಬಿ. ಗಾಣಿಗೇರ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು ಸ್ಪರ್ದಿಸಿದ್ದರು, ಕೆಸಿಪಿ ಯ ಕೆ.ಎನ್. ಗಡ್ಡಿ ಅವರು 13,998 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು.
1999 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆ.ಎನ್. ಗಡ್ಡಿ, ಬಿಜೆಪಿ ಯ ಡಾ.ಆರ್.ವಿ. ಸಿರಿಯಣ್ಣನವರ, ಪಕ್ಷೇತರರಾಗಿ ದೇಸಾಯಿಗೌಡ ಶಂ.ಪಾಟೀಲ್ ಅಭ್ಯರ್ಥಿಗಳಾಗಿ ಸ್ಪರ್ದಿಸಿದ್ದರು. ಕಾಂಗ್ರೆಸ್ ನ ಕೆ.ಎನ್. ಗಡ್ಡಿ ಅವರು 20,396 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು.

2004 ರ ಚುನಾವಣೆಯಲ್ಲಿ ಬಿಜೆಪಿ ಯ ಡಾ.ಆರ್.ವಿ. ಸಿರಿಯಣ್ಣನವರ, ಭಾರಾಕಾಂ ನ ಕೆ.ಎನ್. ಗಡ್ಡಿ, ಜೆಡಿಎಸ್ ನ ಎನ್.ಎಚ್. ಕೋನರೆಡ್ಡಿ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಸ್ಪರ್ದಿಸಿದ್ದರು. ಬಿಜೆಪಿ ಯ ಡಾ.ಆರ್.ವಿ. ಸಿರಿಯಣ್ಣನವರ 30,195 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು.
2008 ರ ಚುನಾವಣೆಯಲ್ಲಿ ಬಿಜೆಪಿ ಯ ಶಂಕರ ಪಾಟೀಲ್ ಮುನೇನಕೊಪ್ಪ, ಕಾಂಗ್ರೆಸ್ ಗಡ್ಡಿ ಕಲ್ಲಪ್ಪ ನಾಗಪ್ಪ, ಜೆಡಿಎಸ್ ನ ಕೋನರಡ್ಡಿ ನಿಂಗರಡ್ಡಿ ಹನುಮರಡ್ಡಿ, ಬಿಎಸ್‍ಪಿ ಅಂಬಳಿ ಶಂಕ್ರಪ್ಪ ರುದ್ರಪ್ಪ, ಎಸ್.ಪಿ. ಯ ವಿಜಯಕುಮಾರ ನಿಂಗಪ್ಪ ಗುಡ್ಡದ, ಜೆಡಿಯು ನ ಮಲ್ಲಿಕಾರ್ಜುನ ನೀಲಪ್ಪ ನವಲಗುಂದ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ಸ್ಪರ್ದಿಸಿದ್ದರು. ಬಿಜೆಪಿ ಯ ಶಂಕರ ಪಾಟೀಲ್ ಮುನೇನಕೊಪ್ಪ ಅವರು 49,436 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು.
2013 ರ ಚುನಾವಣೆಯಲ್ಲಿ ಜೆಡಿಎಸ್ ನ ಎನ್.ಎಚ್. ಕೋನರಡ್ಡಿ, ಬಿಜೆಪಿ ಯ ಶಂಕರ ಪಾಟೀಲ್ ಮುನೇನಕೊಪ್ಪ, ಕಾಂಗ್ರೆಸ್ ನ ಕೆ.ಎನ್.ಗಡ್ಡಿ, ಪಕ್ಷೇತರರಾಗಿ ಶಿವಾನಂದ ಬಸಪ್ಪ ಕರಿಗಾರ, ಕೆಜೆಪಿ ಯ ಡಾ.ಶಿರಿಯಣ್ಣವರ, ಪಕ್ಷೇತರರಾಗಿ ಸುಭಾಶಚಂದ್ರಗೌಡ ಭೀಮನಗೌಡ ಪಾಟೀಲ್, ಬಿಎಸ್‍ಆರ್ ನ ಶಂಭುಲಿಂಗ ಸಿ.ಸಿದ್ರಾಮಶೆಟ್ಟರ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು ಸ್ಪರ್ದಿಸಿದ್ದರು. ಜೆಡಿಎಸ್ ನ ಎನ್.ಎಚ್. ಕೋನರಡ್ಡಿ ಅವರು 44,448 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು,
2018 ರ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಶಂಕರ ಪಾಟೀಲ ಮುನ್ನೇನಕೊಪ್ಪ, ಕಾಂಗ್ರೆಸ್ ನ ವಿನೋದ್ ಅಸೂಟಿ, ಜೆಡಿಎಸ್ ನ ಎನ್.ಎಚ್. ಕೋನರಡ್ಡಿ, ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಸ್ಪರ್ದಿಶಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಶಂಕರ ಪಾಟೀಲ ಮುನ್ನೇನಕೊಪ್ಪ ಅವರು 65,718 ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದ್ದರು.




