SAMPATH JAYARAM: ತಮಾಷೆಗೆ ಹೆದರಿಸಲು ಹೋಗಿ ಬದುಕೇ ಅಂತ್ಯವಾಗಿಸಿದ್ರಾ ಸಂಪತ್..?: ಮೃತ ನಟ ಸಂಪತ್ ಸ್ನೇಹಿತ ರಾಜೇಶ್ ಧ್ರುವ ಹೇಳಿದ್ದೇನು..?

ಗಂಡ ಹೆಂಡತಿ ಮಧ್ಯೆ ನಡೆದ ಚಿಕ್ಕ ಜಗಳವಾಗಿ, ಸುಮ್ನೆ ಸತ್ತು ಹೋಗ್ತಿನಿ ಎಂದು ಹೆದರಿಸೋಕೆ ಹೋಗಿ ಸಂಪತ್ ಕುತ್ತಿಗೆಗೆ ಲಾಕ್ ಆಗಿದೆ ಎಂದು ಮೃತ ಸಂಪತ್ ಸ್ನೇಹಿತ, ನಟ ರಾಜೇಶ್ ಧ್ರುವ ಹೇಳಿದರು.

ಅಗ್ನಿಸಾಕ್ಷಿ ಕಿರುತೆರೆ ಸೇರಿದಂತೆ ಹಲವು ಸೀರಿಯಲ್‌, ಸಿನಿಮಾದಲ್ಲಿ ನಟಿಸಿದ್ದ 35 ವರ್ಷದ ಸಂಪತ್ ಜಯರಾಮ್ ಆತ್ಮಹತ್ಯೆಗೆ ಶರಣಾಗಿದ್ದರು. ಜಯರಾಮ್ ನಿಧನ ಬೆನ್ನಲ್ಲೇ ಅವರ ನಿಧನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದವು. ಇದಕ್ಕೆ ಸ್ಪಷ್ಟನೆ ನೀಡಿದ ನಟ ಸಂಪತ್ ಜಯರಾಂ ಅವರ ಆತ್ಮೀಯ ಗೆಳೆಯ ಹಾಗೂ ನಟ ರಾಜೇಶ್ ಧ್ರುವ, ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಅಂತ ಬಂದಾಗ, ಹುಡುಗಾಟಿಕೆ ಮಾಡಿಕೊಳ್ಳೋಕೆ ಹೋಗಿ ಈತರ ಪರಿಣಾಮ ಆಗಿದೆ. ಗಂಡ ಹೆಂಡತಿ ಮಧ್ಯೆ ನಡೆದ ಚಿಕ್ಕ ಜಗಳಕ್ಕೆ ಸುಮ್ನೆ ಸತ್ತು ಹೋಗ್ತಿನಿ ಅಂತ ಹೆದರಿಸೋಕೆ ಹೋಗಿದ್ದಾನೆ. ಅದು ಲಾಕ್ ಆಗಿದೆ ಅಷ್ಟೇ. ಇನ್ನೇನೂ ಇಲ್ಲ. ಏನೇನೋ ವಿಷಯ ಹಬ್ಬಿಸಬೇಡಿ ಎಂದು ಮನವಿ ಮಾಡಿದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಬಿಡುಗಡೆ ಮಾಡಿ ಮಾತನಾಡಿದ ನಟ ಧ್ರುವ,
ಯೂಟ್ಯೂಬ್ ಚಾನೆಲ್‌ನಲ್ಲಿ ಸಂಪತ್ ಜಯರಾಂ ಬಗ್ಗೆ ಇಲ್ಲಸಲ್ಲದ ವರದಿಗಳನ್ನು ಮಾಡುತ್ತಿದ್ದಾರೆ. ಇದರಿಂದ ಸ್ನೇಹಿತರಿಗೆ ಹಾಗೂ ಕುಟುಂಬಕ್ಕೆ ನೋವುಂಟಾಗಿದೆ. ಇಂತಹ ಸುಳ್ಳು ವರದಿಗಳನ್ನು ಮಾಡಬೇಡಿ. ಹಿನ್ನೆಲೆ ಗೊತ್ತಿಲ್ಲದೆ ಏನೇನೋ ಹೇಳಬೇಡಿ ಎಂದು ಹೇಳಿದ್ದಾರೆ.

ಸಂಪತ್ ಸಾವಿನ ಬಗ್ಗೆ ತುಂಬಾ ಊಹಾಪೋಹ ಹರಿದಾಡುತ್ತಿದೆ. ನನ್ನ ಕಣ್ಣಿಗೂ ಒಂದೆರಡು ವಿಡಿಯೋಗಳು ಬಿದ್ದವು. ನಿಮ್ಮ ನಿಮ್ಮ ದೃಷ್ಟಿಕೋನದಲ್ಲಿ ಏನೋ ಅಂದುಕೊಂಡರೆ ಅದು ಸತ್ಯ ಆಗೋದಿಲ್ಲ. ಅವನು ಇಲ್ಲ ಅನ್ನೋ ಲಿಬರ್ಟಿ ತಗೊಂಡು ಮಾತಾಡಬೇಡಿ ಅನ್ನೋದು ನನ್ನ ವಿನಂತಿ. ಅವನದ್ದೇ ಆದ ಒಂದು ಫ್ಯಾಮಿಲಿ ಇದೆ. ಅವನಿಗೆ ನಮ್ಮತರ ತುಂಬಾ ಜನ ಫ್ರೆಂಡ್ಸ್ ಇದ್ದಾರೆ. ನೀವು ನಮ್ಮ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದೀರಾ. ಅದು ಆಗೋದು ಬೇಡ. ನಿಜಾಂಶ ಏನಿದೆ? ಅದು ನಿಮ್ಮಿಂದ ತಿಳಿಸೋ ಪ್ರಯತ್ನ ಆಗಲಿ. ನಿನ್ನೆ ರಾತ್ರಿ 2 ಗಂಟೆಗೆ ರವಿ ಅವರಿಂದ ನನಗೆ ಕರೆ ಬರುತ್ತೆ. ನಾನು ಕೂಡ ನಿದ್ರೆಯಲ್ಲಿದ್ದೆ. ಏನು ಅಂತ ಕೇಳಿದಾಗ, ಸಂಪತ್‌ಗೆ ಸೀರಿಯಸ್ ಅಂತ ಗೊತ್ತಾಯ್ತು. ಎದ್ದೋ ಬಿದ್ನೋ ಅಂತ ಓಡಿ ಹೋದೆ. ಅಲ್ಲಿ ಹೋಗಿ ನೋಡಿದಾಗ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅದಕ್ಕೆ ಕಾರಣ ಏನು ಅಂತ ತಿಳಿದುಕೊಂಡಾಗ, ಅಲ್ಲಿ ಬಂದಿದ್ದ ಕಾಮನ್ ಉತ್ತರ ಏನಂದರೆ, ಇತ್ತೀಚೆಗೆ ಮದುವೆ ಆಗಿದ್ದ. ಇನ್ನೂ ಒಂದು ವರ್ಷ ಕೂಡ ಆಗಿರಲಿಲ್ಲ. ಅಪ್ಪ ಆಗಿದ್ದ. ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. ಇಬ್ಬರೂ ತುಂಬಾನೇ ಇಷ್ಟ ಪಟ್ಟು 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿ, ಅಂತರ ಜಾತೀಯ ವಿವಾಹವಾಗಿದ್ದರೂ ಅದ್ಬುತವಾಗಿ ಜೀವನ ನಡೆಸುತ್ತಿದ್ದರು. ಅವರ ಜೀವನದಲ್ಲಿ ಹುಳುಕು ಇರಲಿಲ್ಲ. ಅವರ ಮದುವೆ ಪ್ರೀ-ವೆಡ್ಡಿಂಗ್ ಶೂಟ್‌ನ ನಾನೇ, ಇದೇ ಟಿ ಶರ್ಟ್‌ನಲ್ಲಿ ಮಾಡಿಕೊಟ್ಟಿದ್ದೇನೆ. ಮದುವೆಗೆ ಹೋಗಿದ್ದೀವಿ. ಅವರ ಲವ್ ಸ್ಟೋರಿ ಮುಂಚೆಯಿಂದಾನೂ ಗೊತ್ತು. ಅವನು ಅಷ್ಟೊಂದು ವೀಕ್ ಮೈಂಡೆಡ್ ಹುಡುಗ ಅಲ್ಲವೇ ಅಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೆಟ್ಟ ಮನಸ್ಥಿತಿಯವನಲ್ಲ. ಯಾಕಂದ್ರೆ, ಅವನೇ ತಿದ್ದಿ ಬುದ್ದಿ ಹೇಳಿದಂತಹ ಒಬ್ಬ ಹುಡುಗ. ಆದರೆ ಕೆಲವು ಯೂಟ್ಯೂನ್ ಚಾನೆಲ್‌ನಲ್ಲಿ ನೋಡಿದೆ. ಆರ್ಥಿಕ ಸಮಸ್ಯೆ ಇತ್ತು. ಮಾನಸಿಕ ಸ್ಥಿತಿ ಸರಿಯಿರಲಿಲ್ಲ. ಗಂಡ ಹೆಂಡತಿ ಸಂಬಂಧ ಸರಿಯಿರಲಿಲ್ಲ. ಇನ್ನೊಂದೇನೋ ಇತ್ತು. ಮತ್ತೊಂದು ಏನೋ ಇತ್ತು.ಚಾನ್ಸ್ ಸಿಗ್ತಿಲ್ಲ ಎಂದು ಡಿಪ್ರೆಷನ್‌ನಲ್ಲಿ ಇದ್ದ. ಎಂದೆಲ್ಲಾ ತುಂಬಾ ತಪ್ಪಾಗಿ ಮಾತಾಡುತ್ತಿದ್ದೀರ. ಹೌದು, ಅವಕಾಶಗಳು ಇರಲಿಲ್ಲ. ಆದರೆ, ನಮ್ಮ ಟೀಮ್ ನಾವೇ ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದೆವು. ಶ್ರೀ ಬಾಲಾಜಿ ಸ್ಟುಡಿಯೊ ಅನ್ನೋ ಸಿನಿಮಾ ಅವನಿಗೆ ತುಂಬಾನೇ ಬ್ರೇಕ್ ಕೊಟ್ಟಂತಹ ಸಿನಿಮಾ. ಹಾಗಾಗಿ ಏನೇನೋ ಸುದ್ದಿ ಬರೆಯಬೇಡಿ ಎಂದು ಮನವಿ ಮಾಡಿದರು.

More News