JAGADISH SHETTAR: ಆರರಿಂದ ಏಳು ಜನ ಸಿಡಿ ತಡೆಯಾಜ್ಞೆ ತಂದವರಿಗೆ ಟಿಕೆಟ್ ಕೊಟ್ಟದ್ದು ಬಿಜೆಪಿಯ ಯಾವ ಐಡಿಯಾಲಜಿ.?: ಶೆಟ್ಟರ್ ಕಿಡಿ

ಹುಬ್ಬಳ್ಳಿ: ಬಿಜೆಪಿಯಲ್ಲಿ ಯಾವ ಐಡಿಯಾಲಾಜಿ ಇಲ್ಲ ಈಗ ಕ್ರಿಮಿನಲ್ ಗಳಿಗೆ ಯಾಕೆ ಟಿಕೆಟ್ ಕೊಟ್ಟರು? ಆರರಿಂದ ಏಳು ಜನ ಸಿಡಿ ತಡೆಯಾಜ್ಞೆ ತಂದವರಿಗೆ ಟಿಕೆಟ್ ಕೊಟ್ಟಿದ್ದು ಯಾವ ಐಡಿಯಾಲಾಜಿ. ಮಣಿಕಠ ರಾಠೋಡ ವಿರುದ್ಧ 80 ಕೇಸ್ ಇದೆ ಆತನಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದರು.

ಹುಬ್ಬಳ್ಳಿ ಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ
ಡಿವೈಡ್ ಅಂಡ್ ರೂಲ್ ನಡೆಯುತ್ತಿದೆ. ಲಿಂಗಾಯತ ನಾಯಕರ ಕೈಯಿಂದ ಲಿಂಗಾಯತ ಮತ್ತೊಬ್ಬ ನಾಯಕರನ್ನ ಟೀಕೆ ಮಾಡಿಸೋದು ನಡೆಯುತ್ತಿದೆ ಎಂದು ದೂರಿದರು. ಮುಂದುವರೆದು ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ ಶೆಟ್ಟರ್, ಎಲ್ಲ ಮಾನ ಮರ್ಯಾದೆ ಹೋದ ಮೇಲೆ- ರಾಜ್ಯಪಾಲ ಮಾಡುತ್ತಿದ್ವಿ, ರಾಜ್ಯಸಭಾ ಮಾಡ್ತಿದ್ವಿ ಅಂತಾರೆ. ನಿಮ್ಮನ್ನು ಸಂಸದರನ್ನಾಗಿ ಮಾಡಲು ಓಡಾಡಿದ್ದೇನೆ.ಐಡಿಯಾಲಾಜಿ ಬಗ್ಗೆ ಮಾತನಾಡುವ ಪ್ರಹ್ಲಾದ್ ಜೋಶಿ, ಕ್ರಿಮಿನಲ್ ಗಳಿಗೆ ಯಾಕೆ ಟಿಕೆಟ್ ಕೊಟ್ಟಿರಿ.? ಎಂದು ಪ್ರಶ್ನಿಸಿದ್ದಾರೆ.

“ಬಿಜೆಪಿಯಲ್ಲಿ ಯಾವುದೇ ಐಡಿಯಾಲಾಜಿ ಉಳಿದಿಲ್ಲ”

ಆರರಿಂದ ಏಳು ಜನ ಸಿಡಿ ತಡೆಯಾಜ್ಞೆ ತಂದವರಿಗೆ ಟಿಕೆಟ್ ಕೊಟ್ಟಿದ್ದು ಯಾವ ಐಡಿಯಾಲಜಿ. ಮಣಿಕಠ ರಾಠೋಡ ವಿರುದ್ಧ 80 ಕೇಸ್ ಇದೆ ಆತನಿಗೆ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಐಡಿಯಾಲಾಜಿ ಉಳಿದಿಲ್ಲ. ಆಪರೇಷನ್ ಕಮಲ ಮಾಡಿ ಕಾಂಗ್ರೆಸ್ ನವರನ್ನ ಸೇರಿಸಿಕೊಂಡಾಗ ಐಡಿಯಾಲಜಿ ಎಲ್ಲಿ‌ ಹೋಗಿತ್ತು..? ಬಿಜೆಪಿಯಿಂದ ಯಾವ ಸೈದ್ಧಾಂತಿಕವೂ ಉಳಿದಿಲ್ಲ, ಬಿಜೆಪಿ ಪಕ್ಷದ ಸೈದ್ಧಾಂತಿಕವಾಗಿ ಇದ್ದಿದ್ರೆ ಅಧಿಕಾರಕ್ಕೆ‌ ಬರುತ್ತಿರಲಿಲ್ಲ. ಈಗ ಬಿ.ಎಲ್ ಸಂತೋಷ ಮತ್ತೊಬ್ಬರ ಹೆಗಲ‌ ಮೇಲೆ‌ ಬಂದೂಕು ಇಟ್ಟು ಹೊಡೆಯುತ್ತಿದ್ದಾರೆ. ನಾನು ನಾಯಕನಾಗಿ ಬೆಳೆದಿದ್ದೇನೆ. ಒಂದು ಕ್ಷಣದಲ್ಲಿ ಹೊಸಕಿ ಹಾಕಿದರೆ ಸುಮ್ಮನೆ ಇರಬೇಕಿತ್ತಾ? ಇವರು ಮಾತು ಕೇಳಿಕೊಂಡು ಗುಲಾಮನಾಗಿ ಇರಬೇಕಿತ್ತಾ.? ಎಂದು ಪ್ರಶ್ನೆ ಮಾಡಿದರು

“ಟಿಕೆಟ್ ಕೊಡಿಸುವುದಾಗಿ ಹೇಳಿ ಯಡಿಯೂರಪ್ಪ ಈಗ ಅಸಹಾಯಕರಾಗಿದ್ದಾರೆ”

ಅಮಿತ್ ಶಾ, ಯಡಿಯೂರಪ್ಪ, ಜೆಪಿ‌ ನಡ್ಡಾ, ಸ್ಮೃತಿ ಇರಾನಿ ಹೀಗೆ ಎಲ್ಲರೂ ಸೇರಿ ನನ್ನ ಸೋಲಿಸಲು ಪಣ ಕೊಟ್ಟಿದ್ದಾರೆ.
ಜಗದೀಶ್ ಶೆಟ್ಟರ್ ನ ಸೋಲಿಸುವ ಅಭಿಯಾನ ಬಿಜೆಪಿ ನಡೆಸುತ್ತಿದೆ. ಬಡಪಾಯಿ ಮೇಲೆ ಯಾಕೆ ಮುಗಿ ಬೀಳುತ್ತಿದ್ದಾರೆ ಗೊತ್ತಿಲ್ಲ..? ಆಯನೂರ ಮಂಜುನಾಥ, ಲಕ್ಷ್ಮಣ ಸವದಿ, ಎನ್.ಆರ್ ಸಂತೋಷ ಎಲ್ಲರೂ ಪಕ್ಷ ತೊರೆದಿದ್ದಾರೆ. ಆದ್ರೆ ನಾನು ಪಕ್ಷ ತೊರೆದಿದ್ದನ್ನು
ದೊಡ್ಡ ಅಪರಾಧ ಮಾಡಿದವನಂತೆ ನನ್ನ ವಿರುದ್ಧ ಮುಗಿಬಿದ್ದಿದ್ದಾರೆ. ಯಡಿಯೂರಪ್ಪ ಕೆಜೆಪಿ‌ ಕಟ್ಟಿವಾಗ ಐಡಿಯಲಾಜಿ ಎಲ್ಲಿ ಹೋಗಿತ್ತು.? ನಾನು ಪಕ್ಷ ದ್ರೋಹದ ಕೆಲಸ ಮಾಡಿಲ್ಲ. ನನ್‌ ಸ್ವಾಭಿಮಾನಕ್ಕೆ ದಕ್ಕೆಯಾಗಿದೆ.
ಪಕ್ಷದಲ್ಲಿ ನನ್ನ ವಿರುದ್ಧ ಕುತಂತ್ರ- ಷಡ್ಡ್ಯಂತ್ರ ನಡೆಯುತ್ತಿತ್ತು. ಯಡಿಯೂರಪ್ಪ ಅವರ ಹೇಳಿಕೆಯನ್ನು ಅಶೀವಾರ್ದ ಎಂದು ತೆಗೆದುಕೊಂಡಿದ್ದೇನೆ. ಟಿಕೆಟ್ ಕೊಡಿಸುವುದಾಗಿ ಹೇಳಿ ಯಡಿಯೂರಪ್ಪ ಈಗ ಅಸಹಾಯಕರಾಗಿದ್ದಾರೆ ಎಂದು ವ್ಯಂಗ್ಯ ಮಾಡಿದರು.

“ನನ್ನ ಗೆಲುವು ನಿಶ್ಚಿತ”

ನೇರವಾಗಿ ನಾನು ಟೀಕಿಸಿದ್ದು ಬಿ ಎಲ್ ಸಂತೋಷ ಬಗ್ಗೆ ಆದ್ರೆ ಸಂತೋಷ ಉತ್ತರಿಸಿಲ್ಲ. ಯಡಿಯೂರಪ್ಪನವರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವ ಕೆಲಸ ನಡೆದಿದೆ. ಕೆಜೆಪಿ ಕಟ್ಟಿ ಶಿಗ್ಗಾಂವ್ ಗೆ ಪ್ರಚಾರಕ್ಕೆ‌ ಹೋದಾಗ ಇದೇ ಯಡಿಯೂರಪ್ಪ ಬೊಮ್ಮಾಯಿ‌ ಅವರನ್ನು ಬೈಯ್ದಿದ್ದರು.ಆದ್ರೆ ಬೊಮ್ಮಾಯಿ ಗೆದ್ದು ಬಂದಿದ್ದರು. ಸೆಂಟ್ರಲ್ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ. ಎಷ್ಟು ನನ್ನ ಮೇಲೆ ಅಟ್ಯಾಕ್ ಮಾಡ್ತಾರೆ, ಟೀಕೆ ಮಾಡ್ತಾರೆ.
ಅದು ನನಗೆ ಲಾಭವಾಗಲಿದೆ ಎಂದರು.

More News