JAWAN MOVIE: ಜೂನ್ ೨ ಕ್ಕೆ ಅಬ್ಬರಿಸಲಿದ್ದಾನೆ ‘ಜವಾನ್’: ಕಿಂಗ್ ಖಾನ್ ಪಠಾಣ್ ಬಳಿಕ ಗುಡ್ ನ್ಯೂಸ್

ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ಬಾಲಿವುಡ್ ನ ‘ಪಠಾಣ್’ ಸಿನಿಮಾ ಮರೆಯುವ ಮುನ್ನವೇ ನಟ ಶಾರುಖ್ ಖಾನ್ ತಮ್ಮ ಅಭಿಮಾನಿಗಳಿಗೆ ಹೊಸದಾಗಿ ಗುಡ್ ನ್ಯೂಸ್ ನೀಡಿದ್ದಾರೆ.

ಕಳೆದ ಆರೇಳು ವರ್ಷಗಳಿಂದ ಸೋಲುಂಡಿದ್ದ ಶಾರುಖ್‌ ಖಾನ್ ಗೆ ‘ಪಠಾಣ್’ ಸಿನಿಮಾ ಮರುಜೀವ ನೀಡಿತ್ತು. ಇದೀಗ ‘ಜವಾನ್’ ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಅಬ್ಬರಿಸಲಿದ್ದಾರೆ. ಈಗಾಗಲೇ ಈ ಹೊಸ ಸಿನಿಮಾ ಮುಹೂರ್ತ ಫಿಕ್ಸ್ ಆಗಿದ್ದು, ಜೂನ್ 2ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರೀಕರಣ ನಡೆಯುತ್ತಿರುವಾಗಲೇ ಶಾರುಖ್ ಖಾನ್, ಆಕ್ಷನ್-ಮಾಸ್ ಸಿನಿಮಾ ಒಂದಕ್ಕೆ ಒಪ್ಪಿಗೆ ನೀಡಿದ್ದರು. ಆ ಸಿನಿಮಾವೇ ಜವಾನ್! ಈ ಚಿತ್ರಕ್ಕೆ ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನವಿದೆ.‌ ಇದೀಗ ಜವಾನ್ ಸಿನಿಮಾದ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಲಾಗಿದ್ದು, ಮೇ ತಿಂಗಳ ಮೊದಲ ವಾರದಿಂದ ಚಿತ್ರತಂಡ ಪ್ರಚಾರ ಕಾರ್ಯ ಪ್ರಾರಂಭಿಸಲಿದೆ.

ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ಕಾರ್ಯಗಳು ಅಂತಿಮ ಹಂತದಲ್ಲಿ ನಡೆಯುತ್ತಿವೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್‌ಗೆ ಜೋಡಿಯಾಗಿ ಕಾಲಿವುಡ್ ಸೂಪರ್ ಸ್ಟಾರ್ ನಯನತಾರಾ ಬಣ್ಣ ಹಚ್ಚಿದ್ದಾರೆ. ಇನ್ನು ತಾರಾಗಣದಲ್ಲಿ ಶಾರುಖ್ ಖಾನ್ ಜತೆ ಹಾಸ್ಯ ನಟ ಯೋಗಿ ಬಾಬು, ತಮಿಳಿನ ಸ್ಟಾರ್ ವಿಜಯ್, ಅತಿಥಿ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರುವ ‘ಜವಾನ್’ ಜುಗಲ್ ಬಂದಿ ಕಣ್ತುಂಬಿಕೊಳ್ಳಲು ಜೂನ್ ೨ ರವರೆಗೆ ಅಭಿಮಾನಿಗಳು ಕಾಯಬೇಕಿದೆ.

More News