ಹಾರ್ಟ್ ಅಟ್ಯಾಕ್.. ಸಧ್ಯ ಎಲ್ಲಾ ವಯಸ್ಸಿನ ಮಂದಿಯನ್ನೂ ಕಾಡುತ್ತಿರುವ ಭೀಕರ ಆರೋಗ್ಯ ಸಮಸ್ಯೆ..
ಎಷ್ಟೇ ಫಿಟ್ ಹ್ಯಾಂಡ್ ಫೈನ್ ಆಗಿದ್ದರೂ ಕೂಡ ಕ್ಷಣ ಮಾತ್ರದಲ್ಲಿ ಜೀವವೇ ಹೋಗುವಂತೆ ಮಾಡಿಬಿಡುವ ಈ ಸಮಸ್ಯೆಗೆ ಪರಿಹಾರ ಏನು..? ಏನೆಲ್ಲಾ ಎಚ್ಚರಿಕೆ ಕ್ರಮ ಇವೆ..? ಹಾರ್ಟ್ ಅಟ್ಯಾಕ್ ವೇಳೆ ಏನೆಲ್ಲಾ ಆಗುತ್ತದೆ..? ಎಂಬುದು ಇನ್ನೂ ವರೆಗೂ ನಿಗೂಢ. ಎಷ್ಟೇ ಜಾಗರೂಕತೆ ವಹಿಸಿದರೂ ಪ್ರಾಣ ಪಕ್ಷಿ ಹಾರಿಬಿಡುವ ಸಂಖ್ಯೆಗೆ ಏನೂ ಕಮ್ಮಿ ಆಗ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಹಾರ್ಟ್ ಅಟ್ಯಾಕ್ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳು..
ಹೃದಯ ಎಡಭಾಗದಲ್ಲಿ ಇರೋದ್ರಿಂದ ಹಾರ್ಟ್ ಅಟ್ಯಾಕ್ ಎಡ ಭಾಗದಲ್ಲಿಯೇ ಕಾಣಿಸಿಕೊಳ್ಳುತ್ತದೆ ಎಂದೇ ಸಾಕಷ್ಟು ಮಂದಿ ಭಾವಿಸಿದ್ದಾರೆ. ಆದ್ರೆ ಹೃದಯ ಸ್ಥಬ್ದವು ಎದೆಯ ಯಾವ ಭಾಗದಲ್ಲಿ ಬೇಕಿದ್ದರೂ ಕಾಣಿಸಬಹುದು ಅಂತಾರೆ ಕಾರ್ಡಿಯಾಕ್ ಸರ್ಜನ್, ಡಾ.ರಾಜೇಶ್ ಟಿ.ಆರ್.

ಹೃದಯ ನಾಳಗಳಲ್ಲಿ ಬ್ಲಾಕ್ ಕಂಡು ಬಂದು, ಹೃದಯಕ್ಕೆ ರಕ್ತ ಸಂಚಾರ ಆಗುವುದು ಕಟ್ ಆದರೆ ಅಂದರೆ ರಕ್ತ ಸಂಚಾರ ಆಗುವ ಭಾಗಕ್ಕೆ ಧಕ್ಕೆ ಉಂಟಾಗುತ್ತದೆ. ಇದನ್ನು ಹಾರ್ಟ್ ಅಟ್ಯಾಕ್ ಎಂದು ಕರೆಯುತ್ತೇವೆ. ಕೆಲವರಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಹೃದಯ ನೋವು ಕಾಣಿಸಿಕೊಳ್ಳುತ್ತದೆ. ಕೆಲಸ ಮಾಡುವುದನ್ನು ನಿಲ್ಲಿಸಿದರೆ ನಿಂತು ಹೋಗುತ್ತದೆ. ಇದು ಹೃದಕ್ಕೆ ಸಂಬಂಧಿಸಿದ ನೋವು. ಆದರೆ ಅದು ಹೃದಯದ ಆಘಾತ ಅಲ್ಲ ಎಂದು ಸರ್ಜನ್ ಡಾ. ರಾಜೇಶ್ ತಿಳಿಸಿದ್ದಾರೆ.
ಹೃದಯದ ಆಘಾತಕ್ಕು ಮುನ್ನ ಕೈಗಳ ಬಾಹುಗಳಲ್ಲಿ ನೋವು ಕಾಣಿಸಿಕೊಳ್ಳುವುದು, ಕತ್ತಿನ ಮೇಲೆ ನೋವು ಕಾಣಿಸಿಕೊಳ್ಳುವುದು. ವಾಂತಿ ಬರುವಂತೆ ಆಗುವುದು, ಸುಸ್ತ್ ಆಗುವುದು ಹೀಗೆ.. ಒಂದೊಂದೇ ಲಕ್ಷಣ ಕಾಣುತ್ತಾ ಹೋಗುತ್ತದೆ. ನಂತರ ಹೃದಯಕ್ಕೆ ರಕ್ತ ಪಾಸ್ ಆಗುವುದು ನಿಲ್ಲುತ್ತದೆ. ಮತ್ತು ಹೃದಯ ಆಘಾತವು ಹೃದಯದ ಭಾಗದಲ್ಲೇ ಬರಬೇಕೆಂದೇನೂ ಇಲ್ಲ.. ಎದೆಯ ಯಾವ ಭಾಗದಲ್ಲಿ ಬೇಕಾದರೂ ಬರಬಹುದು ಎಂದು ಮಾಹಿತಿ ನೀಡಿದರು.




