ಚುನಾವಣಾ ಪ್ರಚಾರದ ವೇಳೆ ಕಿಡಿಗೇಡಿಗಳಿಂದ ಕಲ್ಲು ಎಸೆತ ದಾಳಿಯಿಂದ ಮಾಜಿ ಡಿಸಿಎಂ, ಕಾಂಗ್ರೆಸ್ ಹಿರಿಯ ನಾಯಕ, ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ಜಿ ಪರಮೇಶ್ವರ್ ತಲೆಗೆ ಪೆಟ್ಟು ಆಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊರಟಗೆರೆ ಕ್ಷೇತ್ರದಲ್ಲಿ ಇಂದು ಡಾ. ಜಿ ಪರಮೇಶ್ವರ್ ಪ್ರಚಾರ ನಡೆಸುತ್ತಿದ್ದರು. ಕೊರಟಗೆರೆ ತಾಲೂಕಿನ ಬೈರನಹಳ್ಳಿ ಕ್ರಾಸ್ ಬಳಿ ಮತಯಾಚನೆ ವೇಳೆ ಭಾರೀ ಸಂಖ್ಯೆಯಲ್ಲಿ ಕೈ ಕಾರ್ಯಕರ್ತರು ನೆರೆದು ಪ್ರಚಾರ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಇದೇ ವೇಳೆ ಪರಮೇಶ್ವರ್ ಅವರ ತಲೆಯ ಮೇಲೆ ಕಲ್ಲು ಬಿದ್ದಿದೆ.
ಉದ್ದೇಶ ಪೂರ್ವಕವಾಗಿಯೇ ಕಲ್ಲೆಸೆದಿದ್ದು, ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವವಾಗಿದೆ.ಗಾಯಗೊಂಡ ಪರಮೇಶ್ವರ್ ಅವರನ್ನು ಶೀಘ್ರದಲ್ಲೇ ಅಕಿರಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.




