MANIKANTA RATHOD: ರೌಡಿ ಶೀಟರ್ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಪಿಸ್ತೂಲ್ ಪ್ರದರ್ಶನ..?

ಕಲಬುರಗಿ: ಕಲಬುರಗಿಯ ಚಿತ್ತಾಪುರ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಣಿಕಂಠ ರಾಥೋಡ್ ಕೈಯಲ್ಲಿ ಪಿಸ್ತೂಲ್ ಪ್ರದರ್ಶಿಸಿದ್ದಾರೆ ಎನ್ನಲಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದು ಹಳೆಯ ವಿಡಿಯೋ ಎಂದು ಅವರು ಹೇಳುತ್ತಿದ್ದರೆ. ಆದರೆ, ಇದೀಗ ಮುನ್ನೆಲೆಗೆ ಬಂದಿರುವ ಈ ವಿಡಿಯೋ ಸಾಕಷ್ಟು ಸೌಂಡ್ ಮಾಡುತ್ತಿದೆ.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ರಾಜ್ಯ ಹಾಗೂ ಹೊರರಾಜ್ಯದ ನಾನಾ ಪೊಲೀಸ್ ಠಾಣೆಯಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪ್ರಕರಣವೊಂದರಲ್ಲಿ ಒಂದು ವರ್ಷ ಜೈಲು ಶಿಕ್ಷೆಯೂ ಆಗಿದ್ದು, ಇದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ.
ಮಕ್ಕಳ ಹಾಲಿನ ಪುಡಿ ಕಳ್ಳತನ, ಅಕ್ರಮ ಅಕ್ಕಿ ಸಾಗಾಣಿಕೆ ಸೇರಿದಂತೆ ಹಲವಾರು ಕೇಸುಗಳು ಈ ಅಭ್ಯರ್ಥಿಯ ವಿರುದ್ಧ ಇದ್ದು, ಇವರ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರ ಮೇಲೂ ಪ್ರಕರಣಗಳಿದ್ದು ಜಾಮೀನಿನ ಮೇಲೆ ಇದ್ದಾರೆ. ಮಣಿಕಂಠನೂ ಜಾಮೀನು ಪಡೆದಿದ್ದಾರೆ ಎಂದಿದ್ದಾರೆ.
ಬಿಜೆಪಿ ಅಭ್ಯರ್ಥಿಯನ್ನು ಈ ರೀತಿಯಲ್ಲಿ ಸಮರ್ಥಿಸಿಕೊಂಡ ಮುಖ್ಯಮಂತ್ರಿ ಅವರ ನಡೆ ಇದೀಗ ಎಲ್ಲೆಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮುಖ್ಯಮಂತ್ರಿ ಅವರ ಸಮರ್ಥನೆ ಕೂಡ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅನೇಕ ಇದನ್ನು ಟೀಕಿಸಿದ್ದಾರೆ.
ಸುಸಂಸ್ಕೃತ ಪಕ್ಷ ಎಂದೇ ಹೇಳುತ್ತಿರುವ ಬಿಜೆಪಿಯಲ್ಲಿ ಇಂತಹ ವ್ಯಕ್ತಿ ಬಿಟ್ಟು ಬೇರೆ ಯಾರೂ ಸಿಕ್ಕಿಲ್ಲವಾ ಎಂಬ ಪ್ರಶ್ನೆ ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.
40 ಪ್ರಕರಣದಲ್ಲಿ ಭಾಗಿಯಾಗಿರುವ ರಾಥೋಡ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದಾರೆ.
ಗುಂಡಾಗಳಿಗೆ ಶ್ರೀರಕ್ಷೆ ನೀಡುತ್ತಿದೆಯಾ ಬಿಜೆಪಿ..? ಎಂಬ ಪ್ರಶ್ನೆ ಇದೀಗ ಕಾಡುತ್ತಿದ್ದು, 40 ಕೇಸ್​ಗಳಲ್ಲಿ ದೂರು ದಾಖಲಾಗಿದ್ರೂ ಬಿಜೆಪಿ ಟಿಕೆಟ್ ನೀಡಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಇದು ಯುಪಿ, ಬಿಹಾರ ಸಂಸ್ಕೃತಿ ಎಂದು ಕಾಂಗ್ರೆಸ್ ಕಿಡಿಕಾರಿದೆ.

More News