RASHMIKA MANDANNA: ಛತ್ರಪತಿ ಶಿವಾಜಿಯ ಸೊಸೆ ಪಾತ್ರದಲ್ಲಿ ರಶ್ಮಿಕಾ!?

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮರಾಠ ಸಾಮಾಜ್ರ್ಯ ಮಹಾರಾಜ ಶಿವಾಜಿಯ ಸೊಸೆ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಾ?
ಮೊದಲ ಪ್ರಯತ್ನದಲ್ಲೇ ಬಿಗ್‌ಬಿ ಮಗಳ ಪಾತ್ರವನ್ನು ಗಿಟ್ಟಿಸಿಕೊಂಡ ಈ ಚೆಲುವೆ ಇದೀಗ ‘ಅನಿಮಲ್‌’ ಎಂಬ ದೊಡ್ಡ ಬಜೆಟ್ ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಮರಾಠ ಸಮಾಜ್ರ್ಯದ ಕಥೆಯುಳ್ಳ ಮತ್ತೊಂದು ಅದ್ಧೂರಿ ಚಿತ್ರ ‘ಚಾವ’ ಕ್ಕೆ ರಶ್ಮಿಕಾ ಹೆಸರು ಕೇಳಿಬರ್ತಿದೆ.

ಸದ್ಯ ಟಾಲಿವುಡ್ ಸೇರಿದಂತೆ ಬಾಲಿವುಡ್ ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ ರಶ್ಮಿಕಾ ಮಂದಣ್ಣ. ಇತ್ತೀಚೆಗೆ ಹಾಟ್ ಫೋಟೋಶೂಟ್ ಗಳ ಮೂಲಕ ಬಾಲಿವುಡ್ ಬೆಡಗಿಯರಿಗೆ ಪೈಪೋಟಿ ನೀಡುತ್ತಿದ್ದಾರೆ.
ಸ್ಯಾಂಡಲ್ ವುಡ್ ನಿಂದ ಎಂಟ್ರಿ ಪಡೆದು ಟಾಲಿವುಡ್, ಕಾಲಿವುಡ್ ನಲ್ಲಿ ಬೇರೂರಿರುವ ರಶ್ಮಿಕಾ ಹವಾ  ಬಾಲಿವುಡ್ ನಲ್ಲೂ ಜೋರಾಗಿದೆ.
ಮರಾಠ ಸಾಮ್ರಾಜ್ಯದ ರಾಜ ಛತ್ರಪತಿ ಶಿವಾಜಿ ಮಹಾ ಪರಾಕ್ರಮಿ. ಹಾಗೇ ಅವರ ಮಗ ಸಂಭಾಜಿ ಕೂಡ ಮರಾಠ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರು. ಈಗಾಗಲೇ ಶಿವಾಜಿ ಕುರಿತು ಸಾಕಷ್ಟು ಸಿನಿಮಾಗಳು, ಧಾರಾವಾಹಿಗಳು ಬಂದಿವೆ. ಇದೀಗ ಸಂಭಾಜಿ ಪರಾಕ್ರಮದ ಕುರಿತು ಬಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತಿದೆ.

ನಟ ವಿಕ್ಕಿ ಕೌಶಲ್ ಸಂಭಾಜಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಸಂಭಾಜಿ ಪತ್ನಿ ಯೇಸುಬಾಯಿ ಭೋಂಸ್ಲೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಹೆಸರು ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಬಹಳ ಅದ್ಧೂರಿಯಾಗಿ ಈ ಐತಿಹಾಸಿಕ ಸಿನಿಮಾ ಸಿದ್ದತೆಗಳು ನಡೀತಿವೆ.
‘ಚಾವ’ ಹೆಸರಿನ ಟೈಟಲ್‌ನಲ್ಲಿ ಸಿನಿಮಾ ನಿರ್ಮಾಣದ ಬಗ್ಗೆ ಚರ್ಚೆಯಾಗುತ್ತಿದ್ದು, ಎಲ್ಲಾ ಅಂದುಕೊಂಡಂತೆ ಆದರೆ ರಾಣಿ ಯೇಸುಬಾಯಿ ಆಗಿ ಕೊಡಗಿನ ಕುವರಿ ರಶ್ಮಿಕಾ ನಟಿಸಲಿದ್ದಾರೆ. ಇದು ಬಹಳ ಮಹತ್ವದ ಪಾತ್ರವಾಗಿದ್ದು,  ಚಿತ್ರಕ್ಕಾಗಿ ಈಗಾಗಲೇ ರಶ್ಮಿಕಾ ಹೋಮ್ ವರ್ಕ್ ಶುರು ಮಾಡಿದ್ದಾರಂತೆ.
ಬಹಳ ರೂಪವತಿಯಾಗಿದ್ದ ಯೇಸುಬಾಯಿ ಬಹಳ ಬುದ್ಧಿವಂತೆ ಕೂಡ ಆಗಿದ್ದರು. ಇಂತಾದೊಂದು ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಿರುವುದು ವಿಶೇಷ. ಸಾಂಭಾಜಿ ಬೇರೆ ರಾಜ್ಯಗಳ ಮೇಲೆ ದಂಡೆತ್ತು ಹೋದಾಗ ಮರಾಠ ಸಾಮ್ರಾಜ್ಯದಲ್ಲಿ ಯೇಸುಬಾಯಿ ಅಧಿಕಾರ ಚಲಾಯಿಸುತ್ತಿದ್ದರು. ಆಡಳಿತದಲ್ಲಿ ಎಂತಹ ನಿರ್ಧಾರಗಳನ್ನು ತೆಗೆದುಕೊಳುತ್ತಿದ್ದರು? ಯಾವ್ಯಾವ ರೀತಿಯ ರಾಜಕೀಯ ವ್ಯೂಹಗಳನ್ನು ರಚಿಸಿ ಆಳ್ವಿಕೆ ನಟಿಸಿದರು? ಎನ್ನುವ ಕೋನದಲ್ಲೂ ಸಿನಿಮಾ ಕಥೆ ಸಾಗಲಿದೆ. ಹಾಗಾಗಿ ರಶ್ಮಿಕಾ ಪಾತ್ರಕ್ಕೆ ಭಾರೀ ಮಹತ್ವ ಇರಲಿದೆ ಎನ್ನಲಾಗುತ್ತಿದೆ.
ದಿನೇಶ್ ವಿಜನ್ ‘ಚಾವ’ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಲಕ್ಷ್ಮಣ್ ಉಟೆಕರ್ ಆಕ್ಷನ್ ಕಟ್ ಹೇಳಲಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಬಾಕಿಯಿದೆ.

ಈಗಾಗಲೇ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸಂಭಾಜಿ ಹಾಗೂ ಯೇಸುಬಾಯಿ ಪಾತ್ರಗಳಲ್ಲಿ ನಟಿಸುವ ವಿಚಾರ ಅಭಿಮಾನಿಗಳಿಗೆ ಖುಷಿತಂದಿದೆ. ‘ಚಾವ’ ಚಿತ್ರದಲ್ಲಿ ಸಾಂಭಾಜಿಯ ಶೌರ್ಯ, ಪರಾಕ್ರಮ ಕಥೆಯನ್ನು ಹೇಳಲಾಗುತ್ತಿದೆ.
ನಟಿ ರಶ್ಮಿಕಾ ಕೈಯಲ್ಲಿ ಸದ್ಯ 4 ಸಿನಿಮಾಗಳಿವೆ. ‘ಪುಷ್ಪ’- 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಣ್‌ಬೀರ್ ಕಪೂರ್ ಜೊತೆ ‘ಅನಿಮಲ್’ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಇನ್ನು ‘ಭೀಷ್ಮ’ ನಂತರ ನಿತಿನ್ ಜೊತೆ ಮತ್ತೊಂದು ಚಿತ್ರಕ್ಕೆ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಜೊತೆಗೆ ‘ರೈನ್‌ಬೋ’ ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನೆರವೇರಿತ್ತು. ಸಮಂತಾ ಮಾಡಬೇಕಿದ್ದ ಸಿನಿಮಾ ರಶ್ಮಿಕಾ ಪಾಲಾಗಿದೆ.
ಒಟ್ಟಿನಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಶ್ಮಿಕಾ, ಸಾಕಷ್ಟು ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಬೆಡಗಿ, ಹಾಟ್ ಫೋಟೊಗಳಿಂದ ಗಮನ ಸೆಳೆಯುತ್ತಿರುತ್ತಾರೆ. ಒಳ್ಳೆಯ ಅವಕಾಶಗಳು ಈ ಚೆಲುವೆಯನ್ನು ಅರಸಿ ಬರುತ್ತಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

More News