THE KERALA STORY FILM : ಕೇರಳದಲ್ಲಿ ಕಿಡಿಹೊತ್ತಿಸಿದ ‘ದಿ ಕೇರಳ ಸ್ಟೋರಿ’ ಸಿನೆಮಾ:ಮೇ 5 ರಂದು ಬಿಡುಗಡೆ

ಬೆಂಗಳೂರು : ‘ದಿ ಕೇರಳ ಸ್ಟೋರಿ’ ಹಿಂದಿ ಸಿನೆಮಾ ತೆರೆಗೆ ಬರಲು ಸುದ್ದವಾಗಿದೆ. ಮೇ 5ರಂದು ದೇಶದೆಲ್ಲೆಡೆ ತೆರೆಗೆ ಬರಲಿದೆ. ಅದಕ್ಕೂ ಮುನ್ನಾ ರೀಲಿಸ್ ಆಗಿರುವ ಟ್ರೇಲರ್ ವಿವಾದದ ಕಿಡಿ ಹೊತ್ತಿಸಿದೆ. ಪರ- ವಿರೋಧದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಬಿರುಸುಗೊಂಡಿವೆ,
ವಿಪುಲ್ ಶಾ ನಿರ್ಮಾಣದ ಸುದೀಫ್ತೋ ಸೇನ್ ಅವರ ನಿರ್ದೇಶನದ ದಿ ಕೇರಳ ಸ್ಟೋರಿ ಸಿನೆಮಾದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಿಲಾನಿ ಹಾಗೂ ಸಿದ್ದಿ ಇದ್ ನಾನಿ ಅವರು ಅಭಿನಯಿಸಿದ್ದಾರೆ. ಇದು ಲವ್ ಬಿಹಾದ್ ಗೆ ಒಳಗಾಗುವ ಯುವತಿಯರ ಸ್ಟೋರಿಯನ್ನು ಒಳಗೊಂಡಿದೆ.

ಚಿತ್ರತಂಡ ನೀಡಿರುವ ಮಾಹಿತಿ ಪ್ರಕಾರ ಕೇರಳದಲ್ಲಿ ನಡೆದ ಹಿಂದು, ಕ್ರಿಶ್ಚಿಯನ್ ಮಹಿಳೆಯರ ಲವ್ ಬಿಹಾದಿ ಸ್ಟೋರಿ ಇದಾಗಿದೆ. ಲವ್ ಜಿಹಾದ್ ಗೆ ಒಳಪಟ್ಟ ಯುವತಿಯನ್ನು ಐಎಸ್ ಉಗ್ರಗಾಮಿ ಸಂಘಟನೆೆಗೆ ಸೇರಿಸಿ, ಚಿತ್ರಹಿಂಸೆ ನೀಡುವ ಕಥಾಹಂದರವನ್ನು ಒಳಗೊಂಡಿದೆ.
ಈ ಸಿನೆಮಾವನ್ನು ಬಹಿಷ್ಕರಿಸಬೇಕು ಎಂದು ಕೇರಳದ ಸಚಿವರು ಒತ್ತಾಯಿಸಿದ್ದಾರೆ. ಹಾಗೆಯೇ ಕೋಮುಸೌಹಾರ್ದತೆಗೆ ಹೆಸರುವಾಸಿಯಾಗಿರುವ ಕೇರಳದ ಹೆಸರು ಕೆಡಿಸುವ ಪ್ರಯತ್ನ ಇದಾಗಿದೆ ಎಂದು, ಕಾನೂನಿನ ಮೂಲಕ ಈ ಬಗ್ಗೆ ಏನು ಮಾಡಬೇಕು ಎನ್ನುವುದರ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಇದುವರೆಗೂ 32 ಸಾವಿರ ಯುವತಿಯರು ಕಾಣೆಯಾಗಿದ್ದಾರೆ. ಅವರನ್ನು ಲವ್ ಜಿಹಾದಿಗೆ ಬಳಸಿಕೊಳ್ಳಲಾಗಿದೆ ಇಲ್ಲವೆ ಮಾನವ ಕಳ್ಳಸಾಗಣೆ ಮಾಡಲಾಗಿದೆ ಎಂದು ಟ್ರೆಲರ್ ನಲ್ಲಿ ಮೂಡಿಬಂದಿದೆ. ಇನ್ನೊಂದು ವಿಶೇಷವೆಂದರೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಮೂರು ದಿನಕ್ಕೆ ಅದು 12 ಮಿಲಿಯನ್ ಸಮಾಜಿಕ ಜಾಲತಾಣದಲ್ಲಿ ವೀಕ್ಷಣೆಯಾಗಿದೆ.

More News