PM PROGRAMME STAGE COLLAPSED: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಹಾಕಿದ್ದ ಬೃಹತ್ ವೇದಿಕೆ ವರುಣಾರ್ಭಟಕ್ಕೆ ನೆಲಸಮ

ಸಿಂಧನೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಧಾನಿ ಅವರು ತಮ್ಮ ಎಲ್ಲಾ ಇತರೆ ಕಾರ್ಯಕ್ರಮಗಳನ್ನು ಬದಿಗಿಟ್ಟು ಸುಮಾರು ಆರು ದಿನ ಕರ್ನಾಟಕದಲ್ಲೇ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಅಲ್ಲದೆ, ಸುಮಾರು 30 ಸಮಾವೇಶ, ರೋಡ್ ಶೋ ಮೂಲಕ ಮತಯಾಚನೆ ನಡೆಸಲಿದ್ದಾರೆ.

ಇದರ ನಡುವೆಯೇ ಸಿಂಧನೂರಿನಲ್ಲಿ ಮೋದಿ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಲಾಗಿದ್ದ ಬೃಹತ್ ವೇದಿಕೆಯು ವರುಣಾರ್ಭಟಕ್ಕೆ ನೆಲಸಮವಾಗಿದೆ. ಸಿಂಧನೂರು ನಗರದ ಹೊಸಹಳ್ಳಿ ಕ್ಯಾಂಪ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೇ 2 ರಂದು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಎಲ್ಲಾ ರೀತಿಯ ಸಿದ್ದತೆಗಳು ನಡೆದಿದ್ದವು.
ಅದಕ್ಕಾಗಿ ಸ್ಥಳ ನಿಗದಿ ಮಾಡಿ ಬೃಹತ್ ಪೆಂಡಾಲ್ ಅನ್ನು ಮಾಡಲಾಗಿತ್ತು. ಬಹುತೇಕ ಪೂರ್ಣಗೊಂಡಿದ್ದ ವೇದಿಕೆ ವರುಣನ ಆರ್ಭಟಕ್ಕೆ ನೆಲಸಮವಾಗಿದೆ. ಭಾರಿ ಬಿರುಗಾಳಿ ಸಹಿತ ಮಳೆ ಬಂದ ಹಿನ್ನೆಲೆಯಲ್ಲಿ ಸಿದ್ಧಗೊಂಡಿದ್ದ ವೇದಿಕೆ ಸಂಪೂರ್ಣವಾಗಿ ನೆಲಸಮವಾಗಿದ್ದು, ಸ್ಥಳೀಯ ಬಿಜೆಪಿ ಮುಖಂಡರಲ್ಲಿ ಒಂದಷ್ಟು ಆತಂಕ ಹೆಚ್ಚಿಸಿದೆ.

ಇನ್ನು ಸಮಯ ಕಡಿಮೆ ಇರುವ ಹಿನ್ನೆಲೆಯಲ್ಲಿ ಭರದಿಂದ ವೇದಿಕೆ ಸಿದ್ಧಮಾಡುವ ಕಾರ್ಯ ಮಾಡಲಾಗುತ್ತಿದ್ದು ಇಂದು ಕೂಡ ಬಾರಿ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

More News