MINISTER ASHWATHNARAYAN: ಆದಾಯ ತೆರಿಗೆ ಉಲ್ಲಂಘನೆ, ಕಪ್ಪು ಹಣ ಅವ್ಯವಹಾರ ಪ್ರಕರಣದಲ್ಲಿ ಸಚಿವ ಅಶ್ವತ್ಥನಾರಾಯಣ ಭಾಗಿ: ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಆರೋಪ

ಬೆಂಗಳೂರು :ಐಟಿ ಬಿಟಿ, ಉನ್ನತ ಶಿಕ್ಷಣ, ವಿಜ್ಞಾನ ತಂತ್ರಜ್ಞಾನ ಸಚಿವ ಸಿ.ಎನ್ ಅಶ್ವತ್ ನಾರಾಯಣ ಅವರು ಪ್ರಗತಿ ಸಮೂಹದ ಮಾಲೀಕರಾಗಿದ್ದಾರೆ. ಈ ಪ್ರಗತಿ ಸಮೂಹವು 40 ಎಕರೆ, 27.42 ಗುಂಟೆ ಜಮೀನನ್ನು ಟೋಟಲ್ ಎನ್ ವೈರ್ಮೆಂಟ್ ಬಿಲ್ಡಿಂಗ್ ಸಿಸ್ಟಮ್ಸ್ ಗೆ ಮಾರಾಟ ಮಾಡಿದೆ ಎಂದು ಸೇಲ್ಸ್ ಡೀಡ್ ನಲ್ಲಿ ಬಹಿರಂಗವಾಗಿದೆ. ನವೆಂಬರ್ 2017 ಹಾಗೂ ಮಾರ್ಚ್ 2018 ನಡುವೆ ನಾಲ್ಕು ಸೇಲ್ಸ್ ಡೀಡ್ ಮೂಲಕ ಮಾಡಲಾಗಿದೆ.


ಈ ಜಮೀನನ್ನು 199 ಕೋಟಿಗೆ ಮಾರಾಟ ಮಾಡಲಾಗಿದೆ. ಇದೆಲ್ಲವೂ ಟಿಡಿಎಸ್ ಗೆ ಒಳಪಟ್ಟಿದ್ದು, 1.99 ಕೋಟಿ ಟಿಡಿಎಸ್ ಕಡಿತವಾಗಿರುತ್ತದೆ. ಆದರೆ ಈ ಬಗ್ಗೆ ತನಿಖೆ ಮಾಡಿದಾಗ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಟಿಡಿಎಸ್ ದಾಖಲಾತಿಯಲ್ಲಿ ಕೇವಲ 120 ಕೋಟಿಯಷ್ಟು ಮೊತ್ತ ತೋರಿಸಿ 1.20 ಕೋಟಿ ಟಿಡಿಎಸ್ ಕಡಿತವಾಗಿದೆ. ಉಳಿದ ಮೊತ್ತ ಎಲ್ಲಿ ಹೋಗಿದೆ. ಉಳಿದ ಮೊತ್ತ 13 ಎಕರೆ ಗುಂಟೆ 39.1 ಭೂಮಿ ಖರೀದಿ ಸೇಲ್ಸ್ ಡೀಡ್ ನ 15 ನೆ ಪುಟದಲ್ಲಿ 79 ಕೋಟಿಯನ್ನು ಪ್ರಗತಿ ಸಮೂಹಕ್ಕೆ ನೀಡಲಾಗಿದ್ದು, ಇದಕ್ಕೆ ರಶೀದಿಯನ್ನು ನೀಡಲಾಗಿದೆ. ಆದರೆ ಇದನ್ನು ತೆರಿಗೆ ದಾಖಲಾತಿಯಲ್ಲಿ ತೋರಿಸಿಲ್ಲ ಯಾಕೆ?


ಮೊದಲ ಸೇಲ್ಸ್ ಡೀಡ್ 84 ಕೋಟಿ, ಎರಡನೇ ಸೇಲ್ಸ್ ಡೀಡ್ 79 ಕೋಟಿ, ಮೂರನೇ ಸೇಲ್ಸ್ ಡೀಡ್ 6.88 ಕೋಟಿ, ನಾಲ್ಕನೇ ಸೇಲ್ಸ್ ಡೀಡ್ 28.53 ಕೋಟಿ. ಈ ನಾಲ್ಕರಲ್ಲಿ ಮೂರು ಸೇಲ್ಸ್ ಡೀಡ್ ನಲ್ಲಿ ಚೆಕ್ ಸಂಖ್ಯೆ ಹಾಗೂ ಬ್ಯಾಂಕ್ ವಿವರ ನೀಡಲಾಗಿದ್ದು, 79 ಕೋಟಿ ಸೇಲ್ಸ್ ಡೀಡ್ ನಲ್ಲಿ ಈ ಮಾಹಿತಿ ಉಲ್ಲೇಖಿಸಿಲ್ಲ.
ಈ ಹಣ ಎಲ್ಲಿ ಹೋಗಿದೆ? ಈ ಬಗ್ಗೆ ಅಶ್ವತ್ ನಾರಾಯಣ ಅವರ ಪ್ರಗತಿ ಸಮೂಹ ಹೇಳಬೇಕು. ಈ ಬಗ್ಗೆ ನಾವು ಐದು ಪ್ರಶ್ನೆ ಕೇಳ ಬಯಸುತ್ತೇವೆ. ಅಶ್ವತ್ ನಾರಾಯಣ ಅವರ ಪ್ರಗತಿ ಸಮೂಹಕ್ಕೆ ಯಾವ ರೀತಿ ಪೇಮೆಂಟ್ ಮಾಡಲಾಗಿದೆ?

ಕೇವಲ 120 ಕೋಟಿ ನೀಡಲಾಗಿದ್ದರೆ, ಖರೀದಿದಾರರಿಂದ 1.20 ಕೋಟಿ ಟಿಡಿಎಸ್ ಕಡಿತವಾಗಿದ್ದರೆ, 79 ಕೋಟಿಗೆ 13 ಎಕರೆ ಜಮೀನು ಹೇಗೆ ಮಾರಾಟವಾಯಿತು?
40% ಕಮಿಷನ್ ಸರ್ಕಾರ ಯಾವಾಗಲೂ ಸಾಕ್ಷಿ ಕೇಳುತ್ತದೆ. ಈ ಸೇಲ್ ಡೀಡ್ ಗಳೆ ಈಗ ಸಾಕ್ಷಿಯಾಗಿವೆ. ಇದು ಕಪ್ಪು ಹಣವೇ? ಹಣಕಾಸು ಅವ್ಯವಹಾರವೇ? ಸಚಿವರು ಇದಕ್ಕೆ ಉತ್ತರಿಸಬೇಕು.
ಆದಾಯ ತೆರಿಗೆ ಹಾಗೂ ಇತರೆ ತನಿಖಾ ಸಂಸ್ಥೆಗಳು ಯಾವ ಕಾರಣಕ್ಕೆ ಈ ಪ್ರಕರಣದ ಬಗ್ಗೆ ತನಿಖೆ ಮಾಡಿಲ್ಲ? 40% ಸರ್ಕಾರ ಹಣಕಾಸಿನ ವ್ಯವಹಾರ ಇದೇ ರೀತಿ ನಡೆಯುತ್ತದೆಯೇ?

ಇದು ಆದಾಯ ತೆರಿಗೆ ಕಾನೂನು ಉಲ್ಲಂಘನೆ, ಕಪ್ಪು ಹಣ ಹಾಗೂ ಹಣ ಅವ್ಯವಹಾರ ಪ್ರಕರಣವಾಗಿದೆ. ಇದು ಇಡಿ, ಐಟಿ ಇಲಾಖೆಯ ಪ್ರಕರಣವಾಗಿದೆ. ಸಚಿವರಿಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ನನ್ನ ಪ್ರಶ್ನೆಗಳಿಗೆ ಉತ್ತರಿಸಿ.
ಈ ಬಗ್ಗೆ ಮುಖ್ಯಮಂತ್ರಿ, 40% ಕಮಿಷನ್ ಏಜೆಂಟ್ ಮೌನವಾಗಿ ಇರುವುದೆಕೆ? ಮೋದಿ ಅವರು ರಾಜ್ಯದಲ್ಲೇ ಇದ್ದರೂ ಈ ಬಗ್ಗೆ ಮೌನ ವಹಿಸಿರುವುದು ಏಕೆ?

More News