Dance Master Chaitanya Committed Suicide: ಸಾಲಭಾದೆ ತೀರಿಸಲು ಆಗ್ತಿಲ್ಲ.. ನನ್ನನ್ನು ಕ್ಷಮಿಸಿ ಎಂದು ಆತ್ಮಹತ್ಯೆ ಮಾಡಿಕೊಂಡ ಡ್ರಾನ್ಸ್ ಮಾಸ್ಟರ್‌ ಚೈತನ್ಯಾ..!

ಸಾಲಭಾದೆ ತಾಳಲಾರದೇ ಢೀ' ಡ್ಯಾನ್ಸ್ ಶೋನ ಕೊರಿಯೋಗ್ರಫರ್ ಚೈತನ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡ್ರಾನ್ಸ್ ಮಾಸ್ಟರ್ ಚೈತನ್ಯಾ ತೀವ್ರ ಸಾಲಭಾದೆಯಿಂದ ಬಳಲುತ್ತಿದ್ದು, ಆ ಸಮಸ್ಯೆ ಯಿಂದ ಹೊರ ಬರಲು ಆಗುತ್ತಲೇ ಇಲ್ಲ ಎಂದು ನೆಲ್ಲೂರು ಕ್ಲಬ್ ಹೋಟೆಲ್‌ನಲ್ಲಿ
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವೀಡಿಯೋ ಮಾಡಿ ಹೇಳಿಕೆ ನೀಡಿದ್ದಾರೆ‌. ಒಂದು ಸಾಲ ತೀರಿಸಲು ಮತ್ತೊಂದು ಸಾಲ, ಮತ್ತೊಂದು ಸಾಲ ತೀರಿಸಲು ಮಗದೊಂದು ಸಾಲ.. ಹೀಗೆ ಆಗಿ ತುಂಬಾ ಕಷ್ಟ ಆಗ್ತಿದೆ ಅದರಿಂದ ಹೊರ ಬರಲೇ ಆಗ್ತಿಲ್ಲ ಎಂದು ವೀಡಿಯೋ ದಲ್ಲಿ ಭಾವುಕ ರಾಗಿ ಮಾತನಾಡಿದ್ದು, ಆತ್ಮ ಹತ್ಯೆ ನಿರ್ಧಾರಕ್ಕೆ ಕ್ಷಮೆ ಇರಲಿ ಎಂದು ಪೋಷಕರಿಗೆ ಕ್ಷಮೆ ಯಾಚಿಸಿದ್ದಾರೆ.

ಸಾವಿಗೂ ಮುನ್ನ ಸೆಲ್ಫಿ ವೀಡಿಯೋ ಮಾಡಿದ ಅವರು, ಮಮ್ಮಿ, ಡ್ಯಾಡಿ, ಸಹೋದರಿ ತಮ್ಮನ್ನು ಚೆನ್ನಾಗಿ ನೋಡಿಕೊಂಡರು. ನನಗೆ ಯಾವುದೇ ಕಷ್ಟ ಬರದಂತೆ ಜೊತೆಗಿದ್ದರು. ನನಗಿರುವ ಕಷ್ಟಗಳಿಂದ ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ. ಫೀಲ್ ಆಗಬೇಡ ಎಂದು ಸಹೋದರಿಗೆ ಹೇಳಿ, ಬಹಳ ಬದುಕಬೇಕೆಂದು ಎಂದುಕೊಂಡೆ ಆದರೆ ಸಾಧ್ಯವಾಗುತ್ತಿಲ್ಲ. ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಹಣದ ವಿಚಾರದಲ್ಲಿ ಕಳೆದುಕೊಂಡಿದ್ದಕ್ಕೆ ಕ್ಷಮೆ ಇರಲಿ. ಸಾಲ ಮಾಡಿದರೆ ತೀರಿಸುವ ಛಲ ಇರಬೇಕು. ಆದರೆ ನಾನು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ, ಅದೇ ರೀತಿ ‘ಢೀ’ ಶೋನಲ್ಲಿ ಒಳ್ಳೆ ಫೇಮ್‌ ಸಿಗುತ್ತೆ ಆದರೆ ಕಮ್ಮಿ ಸಂಪಾದನೆ ಇದೆ. ಜಬರ್ದಸ್ತ್‌ ಶೋನಲ್ಲಿ ಇದಕ್ಕಿಂತ ಹೆಚ್ಚು ಆದಾಯ ಇದೆ. ಆದರೆ ಇಲ್ಲಿ ಅದು ಸಾಧ್ಯವಾಗುತ್ತಿಲ್ಲ. ಒಳ್ಳೆ ನೇಮು, ಫೇಮು ಸಿಕ್ತು, ಅದನ್ನು ಉಳಿಸಿಕೊಳ್ಳಬೇಕು, ಆದರೆ ಈ ಸಾಲವನ್ನು ಮಾತ್ರ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ತಪ್ಪಿನಿಂದ ಮತ್ತೊಂದು ತಪ್ಪು, ಅದರಿಂದ ತಪ್ಪು. ಅದರ ಮೇಲೆ ಮತ್ತೊಂದು, ಅಬ್ಬಾ ಖಂಡಿತ ನನ್ನಿಂದ ಸಾಧ್ಯವಾಗುತ್ತಿಲ್ಲ. ಬಹಳ ಜನರಿಗೆ ಸಮಸ್ಯೆ ತಂದೊಡ್ಡುತ್ತಿದ್ದೀನಿ. ಲವ್ ಯು ಮಮ್ಮಿ ಡ್ಯಾಡಿ. ಜಾಗ್ರತೆಯಿಂದ ಇರಿ. ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಜೀವನ ಸಾಕು, ಇದು ನನ್ನ ಕೊನೆ ದಿನ ಎಂದು ಹೇಳಿ ನೇಣಿಗೆ ಶರಣಾಗಿದ್ದಾರೆ.

More News