Bollywood Stars In Newyork: ನ್ಯೂಯಾರ್ಕ್ ನಲ್ಲಿ ಹವಾ ಎಬ್ಬಿಸಿದ ಬಾಲಿವುಡ್ ತಾರೆಯರು

ವಸ್ತ್ರವಿನ್ಯಾಸಕರ ತಲೆಕೆಡಿಸುವಂತೆ ಮಾಡುವ ಮೆಟ್ ಗಲಾ ಫ್ಯಾಷನ್ ಹಬ್ಬದಲ್ಲಿ ದಕ್ಷಿಣ ಭಾರತದ ಬಾಲಿವುಡ್ ತಾರೆಯರು ಜಗಮಗಿಸಿದ್ದು, ಮುತ್ತಿನ ಮಣಿಗಳಿಂದ ಅಲಂಕೃತವಾದ ಗೌನ್ ಧರಿಸಿ ಆಲಿಯಾ ಭಟ್ ನೋಡುಗರನ್ನು ಧಂಗಾಗಿಸಿದ್ದರು.

ಇನ್ನೂ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ, ಪತಿ ನಿಕ್ ಜೋನಾಸ್ ಜೊತೆ ಕಾಣಿಸಿಕೊಂಡರು. ಪಿಗ್ಗಿ ಧರಿಸಿದ್ದ ಕೋಟಿ ಬೆಲೆ ಬಾಳುವ ಡೈಮೆಂಡ್ ನೆಕ್ಲೇಸ್ ನೋಡುಗರ ಕಣ್ ಕುಕ್ಕುವಂತೆ ಮಾಡಿತ್ತು‌.

ಅಮೆರಿಕಾದ ನ್ಯೂಯಾರ್ಕ ನಲ್ಲಿ ನಡೆಯುವ ಫ್ಯಾಷನ್ ಹಬ್ಬ ಮೆಟಗಾಲಾ ಒಂದು ರಾತ್ರಿ ನಡೆಯುವ ಈವೆಂಟಾಗಿದೆ. ಈ ಕಾರ್ಯಕ್ರಮದಲ್ಲಿ ನಟಿಯರು ಭಾರತವನ್ನ ಪ್ರತಿನಿಧಿಸುವುದೇ ಒಂದು ಸಂಭ್ರಮ
ಈ ಫ್ಯಾಷನ್ ಹಬ್ಬದಲ್ಲಿ ಜಗತ್ತಿನ ಹಲವು ಖ್ಯಾತ ಸೆಲಬ್ರೆಟಿಗಳು ತರಹೇವಾರಿ ಫ್ಯಾಷನ್ ಬಟ್ಟೆಗಳಿಂದ ಕಾಣಿಸಿಕೊಂಡಿದ್ದಾರೆ. ಅಂತಹ ಈ ಬೃಹತ್ ಕಾರ್ಯಕ್ರಮದಲ್ಲಿ ಕ್ಯೂಟಿ ಪೈ ಆಲಿಯಾ ಭಟ್ ಮತ್ತು ಪಿಗ್ಗಿ ದಂಪತಿಗಳು ಫುಲ್ ಹವಾ ಎಬ್ಬಿಸಿದ್ದಾರೆ.

https://twitter.com/Mcbquarters/status/1653337642652631040?t=jjFr5Xf6S9AADW2QAXNswg&s=08

ಆರ್ ಆರ್ ಆರ್ ಮತ್ತು ಗಂಗೂ ಬಾಯಿ ಕಾತಿಯವಾಡಿ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ಮಿಂಚಿದ್ದ ಆಲಿಯಾ ಭಟ್ ಮದುವೆ, ಮಕ್ಕಳ ಬಿಜಿ ಶೆಡ್ಯೂಲ್‌ ನಂತರ ಈವೆಂಟ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ. ಅಭಿಮಾನಿಗಳ ಕ್ಯೂಟಿ ಪೈ ಆಲಿಯಾ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ‘ಪ್ರಬಲ್ ಗುರುಂಗ್ ಗೌನ್’ ಧರಿಸಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಗ್ಲಾಮರಸ್ ಲುಕ್‌ನಲ್ಲಿ ತನ್ನ ಕಾಸ್ಟ್ಯೂಮ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ಟ್ ಜೊತೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.
ಈ ಮಧ್ಯೆ ಎಲ್ಲೆಲ್ಲೂ ‘ಐ ಲವ್ ಯೂ ಆಲಿಯಾ’ ಎಂಬ ಕೂಗು ಕೇಳಿ ಭಾವುಕರಾಗಿ ತನ್ನ ಅಭಿಮಾನಿಗಳಿಗೆ ‘ಐ ಲವ್ ಟೂ’ ಹೇಳಿ ಹುಡುಗರ ಮನಸ್ಸು ಕದ್ದಿದ್ದಾರೆ.

More News