DK SHIVAKUMAR: ಮೊನ್ನೆ ರಣಹದ್ದು ಡಿಕ್ಕಿ, ಇಂದು ಡಿಕೆ ಶಿವಕುಮಾರ್ ಹೆಲಿಕಾಪ್ಟರ್ ಪಕ್ಕದಲ್ಲೇ ಬೆಂಕಿ

ಹೊನ್ನಾವರ: ಡಿಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪಕ್ಕದಲ್ಲೇ ಹುಲ್ಲಿಗೆ ಏಕಾಏಕಿ ಬೆಂಕಿ ಹತ್ತಿಕೊಂಡ ಘಟನೆ ಇಂದು ಕಾರವಾರದ ಹೊನ್ನಾವರದಲ್ಲಿ ನಡೆಯಿತು.

ಮೊನ್ನೆ ಅಷ್ಟೇ ಡಿಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಲ್ಲಿ ಬಹಳ ಡೇಂಜರಸ್ ಘಟನೆ ನಡೆದು ಬಿಟ್ಟಿತ್ತು. ಪ್ರಚಾರ ಸಭೆಯಲ್ಲಿ ಭಾಗಿಯಾಗಲು ಮುಳುಬಾಗಿಲಿಗೆ ಪ್ರಯಾಣಿಸುತ್ತಿದ್ದ ವೇಳೆಯೇ ಹೆಲಿಕಾಪ್ಟರ್ ಗೆ ಏಕಾಏಕಿ ಹದ್ದು ಡಿಕ್ಕಿಯೊಡೆದಿದೆ. ಹದ್ದು ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್ ಗಾಜು ಪುಡಿ ಪುಡಿಯಾಗಿ ಎಲ್ಲರನ್ನೂ ಆತಂಕಕ್ಕೆ ಎಡೆಮಾಡಿಕೊಟ್ಟುಬಿಟ್ಟಿತ್ತು. ಇದೀಗ ಮತ್ತೊಂದು ದೊಡ್ಡ ಅನಾಹುತದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾರಾಗಿದ್ದಾರೆ.

ಇಂದು ಕಾರವಾರದ ಹೊನ್ನಾವರ ದ ಸೇಂಟ್ ಥಾಮಸ್ ಸಭಾಂಗಣ ದ ಆವರಣದಲ್ಲಿ ಕಾಂಗ್ರೆಸ್ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗಿಯಾಗಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಲಿಕಾಪ್ಟರ್ ನಲ್ಲಿ ಹೋಗುವ ವೇಳೆ ಹೆಲಿಕಾಪ್ಟರ್ ಗೆ ಸಿಗ್ನಲ್ ಕೊಡುವ ಸ್ಮೂಕ್ ಕ್ಯಾಂಡರ್ ನಿಂದ ಬೆಂಕಿ ಉಂಟಾಗಿ, ಪಕ್ಕದಲ್ಲಿದ್ದ ಹುಲ್ಲಿಗೆ ಹತ್ತಿಕೊಂಡ ಘಟನೆ ನಡೆಯಿತು. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಲಿಲ್ಲ.

ಇನ್ನು ಸ್ಥಳಕ್ಕೆ ತಕ್ಷಣ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಡಿಕೆ ಶಿವಕುಮಾರ್ ಭಾರೀ ಅವಘಡದಿಂದ ಪಾರಾಗಿದ್ದಾರೆ.

More News