ರಾಜ್ಯ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಭಜರಂಗ ದಳದ ಬೆನ್ನಿಗೆ ನಿಂತು ಕಾಂಗ್ರೆಸ್ ವಿರುದ್ಧ ಬಿಜೆಪಿ ಸಮರ ಸಾರಿದೆ.
ಕಾಂಗ್ರೆಸ್, ಬಜರಂಗ ದಳ ನಿಷೇಧಿಸುವ ಪ್ರಸ್ತಾಪ ಮುಂದಿಡುತ್ತಿದ್ದಂತೆ, ಬಿಜೆಪಿ ಸೇರಿ ಹಿಂದೂಪರ ಸಂಘಟನೆಗಳು ಕಾಂಗ್ರೆಸ್‌ನ ಈ ನಡೆಯನ್ನು ವಿರೋಧಿಸಿವೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂದು ಟೀಕಿಸುವ ಜೊತೆಗೆ ಕೌಂಟರ್ ಅಟ್ಯಾಕ್ ಮಾಡಿವೆ. ಇದನ್ನೇ ಮುಂದಿಟ್ಟು ಮತವಾಗಿ ಪರಿವರ್ತಿಸುವ ಕಸರತ್ತಲ್ಲಿ ಇರುವ ಬಿಜೆಪಿ ಸಾಮೂಹಿಕ ಹನುಮಾನ್ ಚಾಲೀಸ್ ಪಠಣಕ್ಕೆ ಕರೆಕೊಟ್ಟಿವೆ.
ಜೈ ಹನುಮಾನ್ ಜ್ಞಾನಗುಣಸಾಗರ,
— BJP Karnataka (@BJP4Karnataka) May 4, 2023
ಜೈ ಕಪೀಶ ತಿಹು ಲೋಕ ಉಜಾಗರ….#JaiBajarangbali #HanumaBhaktaModi #PoornaBahumata4BJP #BJPYeBharavase #BJPWinningKarnataka pic.twitter.com/mJBlxHdiv8
ಭಜರಂಗ ದಳ ಬ್ಯಾನ್ ಮಾಡುವ ಕುರಿತು ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಹೊರಡಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ವಿರುದ್ದ ಹೋರಾಟ ತೀವ್ರಗೊಂಡಿದೆ. ಬೆಳಗ್ಗೆ ಅಷ್ಟೇ ಮಂಡ್ಯ ದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದ ಕಮಲ ಪಡೆ, ಸಾಮೂಹಿಕ ಬಿಜೆಪಿ ನಾಯಕರು ಹನುಮಾನ್ ಚಾಲೀಸ್ ಪಠಣ ಮಾಡುವ ಮೂಲಕ ರಾಜ್ಯ ಚುನಾವಣಾ ಅಖಾಡವನ್ನು ರಂಗೇರಿಸಿದೆ.
ಕೇಂದ್ರ ಸಚಿವೆ ಶೋಭ ಕರಂದ್ಲಾಜೆಯವರ ನೇತೃತ್ವದಲ್ಲಿ ಮಲ್ಲೇಶ್ವರದ ಶ್ರೀರಾಮ ದೇವಸ್ಥಾನದಲ್ಲಿ ಸಾಮೂಹಿಕ ಹನುಮಾನ್ ಚಾಲೀಸ್ ಪಠಣೆ ಮಾಡಲಾಯಿತು. ಇದೇ ವೇಳೆ ಶೋಭಾ ಕರಂದ್ಲಾಜೆ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೆಸರಲ್ಲಿ ಅರ್ಚನೆ ಮಾಡಿಸುವ ಮೂಲಕ ಗಮನ ಸೆಳೆದರು.
ಬಿಜೆಪಿ ಸಾಮೂಹಿಕ ಹನುಮಾನ್ ಚಾಲೀಸ್ ಪಠಣೆ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾನು ಶಿವ.. ಶಿವನ ಕುಮಾರ. ಪ್ರಧಾನಿ ಆದವ್ರು 15 ಲಕ್ಷ ಅಕೌಂಟ್ ಗೆ ಹಾಕ್ತೀನಿ ಅಂತ ಏನ್ ಹೇಳಿದ್ದರು.. ಅದರ ಬಗ್ಗೆ ಮಾತಾಡ್ಬೇಕು. ಡೀಸೆಲ್ ಪೆಟ್ರೋಲ್ ಬೆಲೆ ಕಡಿಮೆ ಮಾಡ್ತೀನಿ.. ಗ್ಯಾಸ್ ಬೆಲೆ ಏರಿಕೆ ಬಗ್ಗೆ ಮಾತಾಡ್ಬೇಕು. ಅದನ್ನು ಬಿಟ್ಟು ಏನೂ ಕೆಲಸ ಮಾಡದೇ ಜನರ ಭಾವನೆ ಮೇಲೆ ಕೆಲಸ ಮಾಡ್ತಿದ್ದಾರೆ. ನಾವು ಬದುಕಿನ ಮೇಲೆ ಕೆಲಸ ಮಾಡ್ತಿದ್ದೇವೆ. ಹನುಮಾನ್ ನಮ್ಮವ, ನಾನೂ ಒಬ್ಬ ಹಿಂದೂ. ಅದನ್ನು ಬಿಜೆಪಿಗೆ ಗುತ್ತಿಗೆ ಕೊಟ್ಟವ್ರು ಯಾರು ಎಂದು ಪ್ರಶ್ನಿಸಿದರು.




