BJP CORRUPTION RATE CARD: ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ರೇಟ್ ಕಾರ್ಡ್ ರಿಲೀಸ್ ಮಾಡಿದ ಕಾಂಗ್ರೆಸ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ರಾಜಕೀಯ ನಾಯಕರುಗಳ ವಾಕ್ಸಮರವೂ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು. ಅನೇಕ ಮಾಧ್ಯಮಗಳಲ್ಲಿ ಇದನ್ನು ಜಾಹೀರಾತಾಗಿ ನೀಡಿದೆ. ಇದು ಬಿಜೆಪಿಯನ್ನು ಇನ್ನಷ್ಟು ಆತಂಕಕ್ಕೆಡೆ ಮಾಡಿದೆ. 2019ರಿಂದ 2023 ರ ತನಕ ಬಿಜೆಪಿ ರಾಜ್ಯ ಸರ್ಕಾರದಲ್ಲಿ ಆಡಳಿತ ನಡೆಸುತ್ತಿತ್ತು. ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಇದು ಎಂದು ಎಂದು ಹೇಳಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಆಡಳಿತದುದ್ದಕ್ಕೂ ಲೂಟಿಯನ್ನೇ ಪರಮಧೈವ ಎಂದುಕೊಂಡು ರಾಜ್ಯದ ಖಜಾನೆಯನ್ನು ಬರಿದು ಮಾಡಿದ ಸರ್ಕಾರ ಕನ್ನಡಿಗರನ್ನು, ಕರ್ನಾಟಕದ ಅಭಿವೃದ್ಧಿಯನ್ನು ಬೀದಿ ಪಾಲು ಮಾಡಿದೆ. ಮತ ಹಾಕುವ ಮುನ್ನ ಕರ್ನಾಟಕದ ಭವಿಷ್ಯವನ್ನು ಪರಿಗಣಿಸಿ ಕಾಂಗ್ರೆಸ್ ಬೆಂಬಲಿಸಿ, ಹಾಗೂ ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಎಂದು ಹ್ಯಾಷ್ ಟ್ಯಾಗ್ ಬಳಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಜಾಹೀರಾತಿನಲ್ಲಿ ನೀಡಿರುವ ರೇಟ್ ಕಾರ್ಡ್ ಹೀಗಿದೆ


ಸಿಎಂ ಹುದ್ದೆಗೆ 2,500 ಕೋಟಿ
ಮಂತ್ರಿಗಳ ಹುದ್ದೆಗೆ 500 ಕೋಟಿ
ಕೆಎಸ್ ಡಿ ಎಲ್ ಹುದ್ದೆಗೆ 5 ಕೋಟಿಯಿಂದ 15 ಕೋಟಿ
ಎಂಜಿನಿಯರ್ 1 ಕೋಟಿಯಿಂದ 5ಕೋಟಿ
ಸಬ್ ರಿಜಿಸ್ಟಾರ್ 50 ಲಕ್ಷದಿಂದ 5ಕೋಟಿ
ಬೆಸ್ಕಾಂ 1 ಕೋಟಿ
ಪಿಎಸ್ ಐ 80 ಲಕ್ಷ
ಸಹಾಯಕ ಪ್ರಾಧ್ಯಾಪಕ 50 ಲಕ್ಷದಿಂದ 70 ಲಕ್ಷ
ಉಪನ್ಯಾಸಕ 30 ಲಕ್ಷದಿಂದ 50 ಲಕ್ಷ
ಎಫ್ ಡಿ ಎ 30 ಲಕ್ಷ
ಬಮುಲ್ 25 ಲಕ್ಷ
ಪೊಲೀಸ್ 10 ಲಕ್ಷ
ಬಿಡಿಎ ಆಯುಕ್ತ 10 ಕೋಟಿಯಿಂದ 15 ಕೋಟಿ
ಕೆಪಿಎಸ್ ಸಿ ಅಧ್ಯಕ್ಷ 5 ಕೋಟಿಯಿಂದ 15ಕೋಟಿ
ಡಿಸಿ ಮತ್ತು ಎಸ್ ಪಿ 5ಕೋಟಿಯಿಂದ 15 ಕೋಟಿ
ಉಪಕುಲಪತಿ 5 ಕೋಟಿಯಿಂದ 10 ಕೋಟಿ
ಎಸಿ- ತಹಶೀಲ್ದಾರ್ 50 ಲಕ್ಷದಿಂದ 3 ಕೋಟಿ

More News