ರಾಜ್ಯದಲ್ಲಿ ನರೇಂದ್ರ ಮೋದಿ ಮೇನಿಯ ಶುರುವಾಗಿದೆ. ಇಂದು ಬೆಂಗಳೂರಿಗೆ ಆಗಮಿಸಲಿರುವ ನಮೋ ಭರ್ಜರಿ ರೋಡ್ ಶೋ ನಡೆಸಲಿದ್ದು, 13 ಕ್ಷೇತ್ರಗಳ ಕಬ್ಜಕ್ಕೆ ಭಾರೀ ಸಿದ್ದತೆ ನಡೆಸಿದ್ದಾರೆ.
ರಾಜ್ಯ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ “ನಮ್ಮ ಕರ್ನಾಟಕ” ಎಂಬ ಯಾತ್ರೆ ಹೆಸರಿನಲ್ಲಿ ಭರ್ಜರಿ ರೋಡ್ ಶೋ ಮಾಡಲಿದ್ದಾರೆ. ಗುಜರಾತ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ನಡೆಸುತ್ತಿರುವ ಅತಿದೊಡ್ಡ ರೋಡ್ ಶೋ ಇದಾಗಿದ್ದು, ಅಬ್ಬರ ಭಾಷಣ ಮಾಡಲು ಸಜ್ಜಾಗಿದ್ದಾರೆ. ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ, 33 ಕಿಲೋ ಮೀಟರ್ ಸಂಚರಿಸಿ, 13 ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ನಾಯಕರ ಪರ ಅಬ್ಬರದ ಪ್ರಚಾರ ಮಾಡಲಿದ್ದಾರೆ.
ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಇಂದು ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಪ್ರಚಾರ ಮಧ್ಯಾಹ್ನ 12.30 ರ ವರೆಗೆ ನಡೆಯಲಿದೆ. ಭಾನುವಾರ ನೀಟ್ ಪರೀಕ್ಷೆ ಇರುವ ಹಿನ್ನಲೆಯಲ್ಲಿ ಬೆಳಗ್ಗೆ 10 ಕ್ಕೆ ಪ್ರಾರಂಭವಾಗುವ ಪ್ರಚಾರ 11.30 ಕ್ಕೆ ಕೊನೆ ಗೊಳಿಸಲು ನಿರ್ಧರಿಸಲಾಗಿದೆ.
ಎಲ್ಲೆಲ್ಲಿ ನಮೋ ಪ್ರಚಾರ..?
ಇಂದಿನ ಪ್ರಚಾರದ ಮಾರ್ಗ
ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂ ನಿಂದ ಪ್ರಾರಂಭವಾಗುವ ರ್ಯಾಲಿ- ಸಾರಕ್ಕಿ ಜಂಕ್ಷನ್- ಸೌತ್ ಎಂಡ್ ಸರ್ಕಲ್- ಕೃಷ್ಣರಾವ್ ಪಾರ್ಕ್- ರಾಮಕೃಷ್ಣ ಆಶ್ರಮ- ಮಕ್ಕಳ ಕೂಟ-ಟೌನ್ ಹಾಲ್-ಕಾವೇರಿ ಭವನ-ಮೆಜೆಸ್ಟಿಕ್- ಮಾಗಡಿ ರೋಡ್-GT ವರ್ಲ್ಡ್ ಮಾಲ್-ಹೌಸಿಂಗ್ ಬೋರ್ಡ್- ಬಸವೇಶ್ವರ ನಗರ-ಶಂಕರ ಮಠ ಸರ್ಕಲ್- ಮೋದಿ ಆಸ್ಪತ್ರೆ ರಸ್ತೆ-ನವರಂಗ್ ಸರ್ಕಲ್-ಮಹಾಕವಿ ಕುವೆಂಪು ರಸ್ತೆ-ಮಲ್ಲೇಶ್ವರಂ ಸರ್ಕಲ್ -ಸಂಪಿಗೆ ರಸ್ತೆ-ಸರ್ಕಲ್ ಮಾರಮ್ಮ ದೇವಸ್ಥಾನಕ್ಕೆ ಕೊನೆ ಮಾಡಲಿದ್ದಾರೆ.
ಭಾನುವಾರದ ಪ್ರಚಾರ ಮಾರ್ಗ..?
ಬೆಮೆಲ್ ಸರ್ಕಲ್ ನಿಂದ ಪ್ರಾರಂಭವಾಗಿ ತಿಪ್ಪಸಂದ್ರ ಮುಖ್ಯರಸ್ತೆ- ಇಎಸ್ಐ ಆಸ್ಪತ್ರೆ, CMH ರೋಡ್- ಇಂದಿರಾನಗರ- ಹಲಸೂರು ಪೊಲೀಸ್ ಸ್ಟೇಷನ್, ಎಂ. ಜಿ ರಸ್ತೆ- ಬ್ರಿಗೇಡ್ ರೋಡ್ ನಲ್ಲಿ ಮುಕ್ತಾಯವಾಗಲಿದೆ.
ಇನ್ನು ಪ್ರಧಾನಿ ರೋಡ್ ಶೋ ಹಿನ್ನಲೆಯಲ್ಲಿ 34 ರಸ್ತೆಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30 ರ ವರೆಗೆ ಬಂದ್ ಆಗಲಿದ್ದು, ಪರ್ಯಾಯ ಮಾರ್ಗ ಬಳಕೆ ಕುರಿತು ಸೂಚನೆ ನೀಡಲಾಗಿದೆ.
ರಾಜಭವನ ರಸ್ತೆ
ರಮಣಮಹರ್ಷಿ ರಸ್ತೆ
ಮೇಖ್ರಿ ವೃತ್ತಿ,
ಆರ್‌ಸಿಬಿಐ ಲೇಔಟ್, ಜೆಪಿ ನಗರ
ರೋಸ್ ಗಾರ್ಡನ್, ಜೆಪಿ ನಗರ
ಶಿರ್ಸಿ ವೃತ್ತ, ಜೆಜೆ ನಗರ
ಬಿನ್ನಿ ಮಿಲ್ ರಸ್ತೆ, ಶಾಲಿನಿ ಮೈದಾನ
ಸೌತ್ ಎಂಡ್ ವೃತ್ತ, ಆರ್ಮುಗಂ ವೃತ್ತ
ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣಾಶ್ರಮ
ಉಮಾ ಟಾಕೀಸ್, ಟಿಆರ್ ಮಿಲ್
ಚಾಮರಾಜಪೇಟೆ ಮುಖ್ಯರಸ್ತೆ, ಬಾಳಿಕಾಯಿ ಮಂಡಿ
ಕೆಪಿ ಅಗ್ರಹಾರ
ಮಾಗಡಿ ಮುಖ್ಯರಸ್ತೆ, ಚೋಳೂರು ಪಾಳ್ಯ
ಎಂಸಿ ವೃತ್ತ, ಪಶ್ಚಿಮ ಕಾರ್ಡ್ ರಸ್ತೆ
ಎಂಸಿ ಲೇಔಟ್, ನಾಗರಭಾವಿ ರಸ್ತೆ
ಬಿಜಿಎಸ್ ಮೈದಾನ, ಹಾವನೂರು ವೃತ್ತ
8ನೇ ಮುಖ್ಯರಸ್ತೆ, ಬಸವೇಶ್ವನಗರ
ಶಂಕರಮಠ, ಮೋದಿ ಆಸ್ಪತ್ರೆ
ನವರಂಗ ವೃತ್ತ, ಎಂಕೆಕೆ ರಸ್ತೆ
ಮಲ್ಲೇಶ್ವರಂ ವೃತ್ತ, ಸಂಪಿಗೆ ರಸ್ತೆ, ಸ್ಯಾಂಕಿ ರಸ್ತೆ ಮಾರ್ಗದ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.




