MODI ROADS SHOW: ಬಾಲ್ಕಾನಿಯಲ್ಲಿ ನಿಲ್ಲುವಂತಿಲ್ಲ, ಅಂಗಡಿ ತೆರೆಯುವಂತಿಲ್ಲ: ಮೋದಿ ರೋಡ್ ಶೋ ಹಿನ್ನೆಲೆ ಪೊಲೀಸ್ ಕಟ್ಟೆಚ್ಚರ

ಮನೆಯ ಮೇಲಿನ ಬಾಲ್ಕನಿಯಲ್ಲಿ ನಿಲ್ಲುವಂತಿಲ್ಲ. ಅಪರಿಚಿತರನ್ನು‌ ಮನೆಗೆ ಸೇರಿಸುವಂತಿಲ್ಲ..‌ರೋಡ್ ಶೋ ಪ್ರದೇಶದ ಮನೆ ಅಂಗಡಿಗಳು ಬಾಗಿಲು ತೆರೆಯುವಂತಿಲ್ಲ ಎಂದು ಪೊಲೀಸ್ ಇಲಾಖೆ ಕರೆ ಕೊಟ್ಟಿದೆ.

ರಾಜ್ಯ ಚುನಾವಣೆ ಹಿನ್ನಲೆಯಲ್ಲಿ ಮತ ಬೇಟೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಪೊಲೀಸ್ ಭಿಗಿ ಬಂದೋಬಸ್ತ್ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಪ್ರಮುಖ ರಸ್ತೆಗೆ ಬಂದು ಸೇರುವ ಎಲ್ಲ ಸಂಪರ್ಕ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಇದರಿಂದ ಸಾರಿಗೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಪರ್ಯಾಯ ಮಾರ್ಗದ ಸೂಚನೆ ನೀಡಲಾಗಿದೆ. ಅಲ್ಲದೇ, ರಸ್ತೆಯ ಇಕ್ಕೆಲಗಳಲ್ಲಿ ಕೃತಕ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಜನ ಸಂಚಾರ ವಿರಳಗೊಂಡಿದೆ.

ಇಂದು ಬೆಳ್ಳಿಗ್ಗೆ 6 ಗಂಟೆಯಿಂದಲೇ ಪೋಲಿಸ್ ಭದ್ರತೆ ಶುರುವಾಗಿದ್ದು, ಪ್ರಧಾನಿ ಅವರ ರೋಡ್ ಶೋ ವೇಳೆ ಕೆಲ ಸೂಚನೆ ನೀಡಲಾಗಿದೆ. ರೋಡ್ ಶೋ ವೇಳೆ ಮನೆಯ ಮೇಲೆ ಬಾಲ್ಕನಿಯಲ್ಲಿ ಯಾರೂ ನಿಲ್ಲುವಂತಿಲ್ಲ. ರೋಡ್ ಶೋ ಪ್ರದೇಶದ ಮನೆ ಅಂಗಡಿಗಳು ಬಾಗಿಲು ತೆರೆಯುವಂತಿಲ್ಲ.ಅಪರಿಚಿತರನ್ನು ಮನೆಗಳಿಗೆ ಸೇರಿಸ ಬಾರದು. ರೋಡ್ ಶೋ ನೋಡುವವರಿಗೆ ನಿಗದಿ ಮಾಡಿರುವ ಸ್ಥಳದಲ್ಲಿಯೇ ಇರಬೇಕು ಎಂದು ಸೂಚನೆ ನೀಡಿದ್ದಾರೆ.

ಪ್ರಧಾನಿ ಮೋದಿಯವರ ಬೆಳಗಿನ ಪ್ರಯಾಣ

ಇನ್ನು ಇಂದು ಪ್ರಧಾನ ಮಂತ್ರಿಯಿಂದ ಬೃಹತ್ ರೋಡ್ ಶೋ ಹಿನ್ನಲೆ ಬೆಳಿಗ್ಗೆ 9:15ಕ್ಕೆ ರಾಜಭವನದಿಂದ ತೆರಳಲಿದ್ದಾರೆ. 9.25 ಕ್ಕೆ HQTC ಹೆಲಿಪ್ಯಾಡ್ ಗೆ ತೆರಳಿ, 9:50ಕ್ಕೆ ಹೆಲಿಪ್ಯಾಡ್ ನಲ್ಲಿ ಕೊಣನಕುಂಟೆಗೆ ಆಗಮಿಸಲಿದ್ದಾರೆ. ಕೊಣನಕುಂಟೆಯ ಲಯೋಲ ಕಾಲೇಜು ಆವರಣಕ್ಕೆ ಆಗಮಿಸುತ್ತಾರೆ. 9:55 ಕ್ಕೆ ಕಾಲೇಜಿನಿಂದ 10 ಗಂಟೆಗೆ ಸೋಮೇಶ್ವರ ಸಭಾ ಭವನದ ಬಳಿ ಆಗಮಿಸುತ್ತಾರೆ. ಬಳಿಕ 10 ಗಂಟೆಯಿಂದ 12:30 ರವರೆಗೆ ಆರ್ ಬಿಐ ಲೇಔಟ್ ನಿಂದ ಮಲ್ಲೇಶ್ವರಂವರೆಗೆ ರೋಡ್ ಶೋ ನಡೆಸಲಿದ್ದಾರೆ.

More News