ಚಿಕ್ಕಮಗಳೂರು: ಸಚಿವರು, ಶಾಸಕರ ಪತ್ನಿಯರು ಬುರ್ಖಾ ಧರಿಸಿ ಮುಸ್ಲಿಮರ ಬೀದಿಗೆ ಹೋದ್ರು ಅವರಗೆ ಒಂದು ಓಟು ಬೀಳಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಟಿಗಾಗಿ ಬಿಜೆಪಿಯರವ್ರು ಸೆಕ್ಯೂಲರ್ ಆಗಲು ಹೊರಟಿದ್ದಾರೆ, ಒಂದೆಡೆ ದೇವಸ್ಥಾನ ಕೆಡವಿದ್ದು ಮತ್ತು ಗಣೇಶೋತ್ಸವ, ದತ್ತಪೀಠ ವಿಚಾರದಲ್ಲಿ ನಡೆದುಕೊಂಡ ರೀತಿಯಲ್ಲಿ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನ ಮುಖಂಡರಲ್ಲಿ ಇರುವ ಗಟ್ಟಿತನ ಇಂದು ಬಿಜೆಪಿಯ ಮುಖಂಡರಲ್ಲಿ ಕಾಣುಸುತ್ತಿಲ್ಲ, ಹಿಂದೂಗಳು ಬಿಜೆಪಿಯವರನ್ನು ಗೆಲ್ಲಿಸಿದ್ದಾರೆ, ಆದರೆ, ಹಿಂದೂಗಳಿಗೆ ನ್ಯಾಯ ಒದಗಿಸುತ್ತಿಲ್ಲ, ಅದನ್ನು ಪ್ರಮುಖ ಆದ್ಯತೆ ಮೇಲೆ ನೀಡಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಇರೋದೇ ಮುಸ್ಲಿಮರಿಗಾಗಿ ಎಂದು ತಿಳಿಸಿದ ಅವರು, ನಾಳೆ ಅವ್ರ ಮಕ್ಳು, ಮೊಮ್ಮಕ್ಳು ಮುಸ್ಲಿಮರಾಗ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ ಎಂದು ಟಿಕೀಸಿದರು.




