Manikanta Rathod: ಮಣಿಕಂಠಗೆ BJP ಟಿಕೆಟ್ ನೀಡಿದ್ದು ಖರ್ಗೆ ಕುಟುಂಬವನ್ನ ಮುಗಿಸುವುದಕ್ಕಾ : ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು : AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಇಡೀ ಕುಟುಂಬವನ್ನು ಹತ್ಯೆ ಮಾಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸಿರುವುದಾಗಿ ಚಿತ್ತಾಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೌಡಿಶೀಟರ್ ಹಿನ್ನೆಲೆಯ ಮಣಿಕಂಠ ರಾಥೋಡ್ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಶೇಕಡಾ 40 ಪರ್ಸೆಂಟ್ ಕಮಿಷನ್ ನ ಬಿಜೆಪಿ 40 ಕ್ರಿಮಿನಲ್ ಪ್ರಕರಣ ಇರುವ ಮಣಿಕಂಠ ರಾಥೋಡನಿಗೆ ಟಿಕೆಟ್ ನೀಡಿದ್ದೇ ಖರ್ಗೆ ಕುಟುಂಬವನ್ನು ಮುಗಿಸುವುದಕ್ಕಾ ? ಬಿಜೆಪಿಗರೇ, ದಲಿತ ನಾಯಕ ಪರಮೇಶ್ವರ್ ಮೇಲಿನ ದಾಳಿ, ದಲಿತ ನಾಯಕ ಖರ್ಗೆ ಕುಟುಂಬ ಕೊಲ್ಲಲು ಸಂಚು ಈ ಷಡ್ಯಂತ್ರಗಳೆಲ್ಲಾ ಯಾರದ್ದು ? ನಾಗಪುರದ್ದೋ, ಅಮಿತ್ ಶಾರದ್ದೋ ? ಎಂದು ಕಾಂಗ್ರೆಸ್ ಬಿಜೆಪಿಗೆ ಪ್ರಶ್ನಿಸಿದೆ.
40 ಪ್ರಕರಣಗಳ ಸರದಾರ ಎಂದು ಬಿರುದು ಪಡೆದಿರುವ ಮಣಿಕಂಠ ರಾಜ್ಯದಲ್ಲಿನ ಎಲ್ಲಾ ಅಭ್ಯರ್ಥಿಗಳಿಗಿಂತ ಹೆಚ್ಚು ಕ್ರಿಮಿನಲ್ ಪ್ರಕರಣ ಹೊಂದಿರುವ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ನ ಭದ್ರಕೋಟೆಯಾದ ಚಿತ್ತಾಪುರ ವಿಧಾನಸಭೆಯ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. ರೌಡಿ ಹಿನ್ನೆಲೆಯುಳ್ಳ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಈ ಕ್ಷೇತ್ರ ರಾಜ್ಯದಲ್ಲಿ ಹೈ ವೋಲ್ಟೇಜ್ ಕಣವಾಗಿ ಬಿಂಬಿತವಾಗಿದೆ.

More News