Corruption Rate Card: ಭ್ರಷ್ಟಾಚಾರ ರೇಟ್ ಕಾರ್ಡ್ ಪ್ರಕಟ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಕಾರಣ ಕೇಳಿ ಬಿಜೆಪಿಯಿಂದ ಕಾಂಗ್ರೆಸ್ ಗೆ ನೊಟೀಸ್

ಬೆಂಗಳೂರು : ಭ್ರಷ್ಟಾಚಾರದ ರೇಟ್ ಕಾರ್ಡ್ ಪ್ರಕಟಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೋರಿ ಕಾಂಗ್ರೆಸ್ ನಾಯಕರಿಗೆ ಕ್ರಿಮಿನಲ್ ಮಾನನಷ್ಟ ನೋಟೀಸ್ ಅನ್ನು ಬಿಜೆಪಿ ಜಾರಿಗೊಳಿಸಿದೆ.
ಇಂದು ಅಥವಾ ನಾಳೆಯೊಳಗೆ ಉತ್ತರಿಸದಿದ್ದಲ್ಲಿ ಕ್ರಿಮಿನಲ್ ಡಿಫಮೇಷನ್ ಕೇಸ್ ದಾಖಲಿಸಲಾಗುವುದು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

ಮಾಧ್ಯಮಗಳಲ್ಲಿ ಪ್ರಕಟಿಸಿರುವ ಜಾಹಿರಾತು ಪೇಯ್ಡ್ ಆಗಿದ್ದು, ದುರುದ್ದೇಶದಿಂದ ಕೂಡಿದೆ, ಕಾಂಗ್ರೆಸ್ ತಕ್ಷಣ ಬಿಜೆಪಿಗೆ ಬೇಷರತ್ತಾಗಿ ಕ್ಷಮೆ ಕೋರಬೇಕು, ಪತ್ರಿಕೆಗಳ ಮೂಲಕ ಆರೋಪ ತಪ್ಪು ಗ್ರಹಿಕೆಯಿಂದ ನಡೆದಿದೆ ಎಂದು ಜಾಹಿರಾತು ನೀಡಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಎದುರಿಸಿ ಎಂದು ನೋಟೀಸಿನಲ್ಲಿ ಉಲ್ಲೇಖಿಸಲಾಗಿದೆ.

More News