SSLC RESULT 2023: ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ: ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ, ಹಾಸನ ತೃತೀಯ ಸ್ಥಾನ

ಬೆಂಗಳೂರು: ರಾಜ್ಯದ ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ (KSEAB SSLC results ೨೦೨೩) ಹೊರಬಿದ್ದಿದ್ದು, ಈ ಬಾರಿ ಶೇಕಡ 83.89 ಫಲಿತಾಂಶ ದಾಖಲಾಗಿದೆ.

ಒಟ್ಟು 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ 3,41,108 ಬಾಲಕರು, 3,59,511 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.
2022-23ನೇ ಸಾಲಿನ ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ, ಹಾಸನ ತೃತೀಯ ಹಾಗೂ ಯಾದಗಿರಿ ಜಿಲ್ಲೆ ಅಂತಿಮ ಸ್ಥಾನ ಗಳಿಸಿದೆ.
ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ೨೩ ಜಿಲ್ಲೆಗಳು ‘A’ ಗ್ರೇಡ್, ೧೨ ಜಿಲ್ಲೆಗಳು ‘ಬಿ’ ಗ್ರೇಡ್ ಪಡೆದಿವೆ.
ಮೇ 15ರಿಂದ ಮೇ 21ರವರೆಗೆ ಮರುಮೌಲ್ಯಮಾಪನಕ್ಕೆ ಅವಕಾಶವಿದೆ. ಇಂದಿನಿಂದ ಮೇ 15ರವರೆಗೆ ಪೂರಕ ಪರೀಕ್ಷೆ ನೋಂದಣಿಗೆ ಅವಕಾಶ ನೀಡಲಾಗುತ್ತಿದೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.

ಪ್ರಥಮ ಸ್ಥಾನ ಪಡೆದವರು.
ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ -ನ್ಯೂ ಮೆಕಾಲೆ ಶಾಲೆಯ ಭೂಮಿಕಾ ಪೈ , ಚಿಕ್ಕಬಳ್ಳಾಪುರ ಜಿಲ್ಲೆ ಅಗಲಗುರ್ಕಿ ಬಿಜಿಎಸ್​ ಶಾಲೆಯ ಯಶಸ್​​ಗೌಡ, ಸವದತ್ತಿ ಶ್ರೀಕುಮಾರೇಶ್ವರ ಶಾಲೆಯ ಅನುಪಮಾ ಶ್ರೀಶೈಲ್ ಹಿರೆಹೋಳಿ ಹಾಗು ಜಯಪುರದ ಬೀಮನಗೌಡ ಪಾಟೀಲ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಜಿಲ್ಲಾವಾರು ಫಲಿತಾಂಶ:
ಚಿತ್ರದುರ್ಗ -ಶೇ.96.8
ಮಂಡ್ಯ-ಶೇ.96.74
ಹಾಸನ-ಶೇ.96.68
ಬೆಂಗಳೂರು ಗ್ರಾಮಾಂತರ-ಶೇ.96.48
ಚಿಕ್ಕಬಳ್ಳಾಪುರ-ಶೇ.96.15
ಕೋಲಾರ-ಶೇ.94.6
ಚಾಮರಾಜನಗರ -ಶೇ.,94.32
ಮಧುಗಿರಿ- ಶೇ.93.23
ಕೊಡಗು-ಶೇ.93.19
ವಿಜಯನಗರ- ಶೇ.91.41
ವಿಜಯಪುರ- ಶೇ. 91.23
ಚಿಕ್ಕೋಡಿ-91.07
ಉತ್ತರಕನ್ನಡ- ಶೇ.90.53
ದಾವಣಗೆರೆ- ಶೇ.90.43
ಕೊಪ್ಪಳ- ಶೇ.90.27
ಮೈಸೂರು ಜಿಲ್ಲೆ- ಶೇ.89.75
ಚಿಕ್ಕಮಗಳೂರು-ಶೇ.89.69
ಉಡುಪಿ- ಶೇ. 89.49
ದಕ್ಷಿಣ ಕನ್ನಡ- ಶೇ. 89.47
ತುಮಕೂರು- ಶೇ. 89.43
ರಾಮನಗರ- ಶೇ. 89.42
ಹಾವೇರಿ ಶೇ.89.11
ಶಿರಸಿ- ಶೇ.87.39
ಧಾರವಾಡ-ಶೇ.86.55
ಗದಗ-ಶೇ.86.51
ಬೆಳಗಾವಿ-ಶೇ.85.85
ಬಾಗಲಕೋಟೆ-ಶೇ.85.14
ಕಲಬುರಗಿ- ಶೇ.84.51
ಶಿವಮೊಗ್ಗ-ಶೇ.84.04
ರಾಯಚೂರು- ಶೇ. 84.02
ಬಳ್ಳಾರಿ- ಶೇ.81.54
ಬೆಂಗಳೂರು ಉತ್ತರ ಶೇ.80.93
ಬೆಂಗಳೂರು ದಕ್ಷಿಣ ಶೇ.78.95
ಬೆಂಗಳೂರು ಪಶ್ಚಿಮ ಶೇ.80.93
ಬೀದರ್ ಶೇ. 78.73
ಯಾದಗಿರಿ (ಕೊನೆಯ ಸ್ಥಾನ)- ಶೇ.75.49

More News

You cannot copy content of this page