IT RAID: ತಡರಾತ್ರಿ ಕೈ ನಾಯಕಿ ದೇವಕಿ ಮನೆ ಮೇಲೆ ಐಟಿ ದಾಳಿ: ನಾನು ವಿರೋಧ ಪಕ್ಷದಲ್ಲಿ ಇರೋದ್ರಿಂದ ನನ್ನ ಮೇಲೆ ಆರೋಪ ಬರುತ್ತೆ ಎಂದ ಸಿಎಂ

ಹುಬ್ಬಳ್ಳಿ: ರಾಜ್ಯ ಚುನಾವಣೆಗೆ ಕೆಲವೇ ಕ್ಷಣಗಳು ಬಾಕಿ ಇರುವ ಬೆನ್ನಲ್ಲೇ ಐಟಿ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ನಾಯಕಿ ದೇವಕಿ ಯೋಗಾನಂದ ಮನೆ ಮೇಲೆ ರಾತ್ರೋ ರಾತ್ರಿ ಚುನಾವಣಾಧಿಕಾರಿಗಳು ದಾಳಿ ನಡೆಸಿ, ಬರಿಗೈನಲ್ಲಿ ತೆರಳಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಕೈ ಅಭ್ಯರ್ಥಿ ದೀಪಕ್ ಚಿಂಚೋರೆಯ ಆಪ್ತೆಯಾಗಿದ್ದ ದೇವಕಿ ಕುರಿತು ಮಾಹಿತಿ ಬಂದ ಆಧಾರದ ಮೇಲೆ ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿರುವ ನಿವಾಸಕ್ಕೆ ತಡರಾತ್ರಿ ಆಗಮಿಸಿದ 12 ಜನ ಅಧಿಕಾರಗಳು ಮನೆ ಶೋಧ ನಡೆಸಿದರು. ಮೂರು ಗಂಟೆಗಳ ತಪಾಸಣೆ ನಡೆಸಿದ ಬಳಿಕ ಅಧಿಕಾರಿಗಳು ಬರಿಗೈಲ್ಲಿನಲ್ಲಿ ವಾಪಸ್ ಆದರು.

“ತಪ್ಪು ಮಾಡಿದವರ ಮೇಲೆ ಐ.ಟಿ ದಾಳಿಯಾಗುವುದು ಸಹಜ”

ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಮನೆಯ ಮೇಲೆ ಐಟಿ ದಾಳಿ ನಡೆದಿರುವ ಸಂಬಂಧ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ತಪ್ಪು ಮಾಡಿದವರ ಮೇಲೆ ಐಟಿ ದಾಳಿಯಾಗುವುದು ಸಹಜ ಎಂದರು.
ಸುಖಾಸುಮ್ಮನೆ ದಾಳಿ ಮಾಡಿಸಲಾಗ್ತಿದೆ ಎಂಬ ಆರೋಪದ ಬಗ್ಗೆ ನೀವೇನು ಹೇಳ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ತಪ್ಪು ಮಾಡಿರ್ತಾರೆ, ಅವರ ಮೇಲೆ ದಾಳಿ ಆಗುತ್ತೆ. ಸಹಜವಾಗಿ ನಾನು ವಿರೋಧ ಪಕ್ಷದಲ್ಲಿ ಇದ್ದೀನಿ. ನನ್ನ ಮೇಲೆ ಆರೋಪ ಬರುತ್ತೆ ಎಂದರು. ಇನ್ನು ಕಾಂಗ್ರೆಸ್ ಹೋಮ ಹವನ ಕೈಗೊಂಡಿರುವ ಬಗ್ಗೆ ಮಾತನಾಡಿದ ಅವರು, ತಂತ್ರಮಂತ್ರ ಯಾವುದೂ ನಡೆಯುವುದಿಲ್ಲ ಎಂದು ಕುಟುಕಿದರು‌.

More News