Code Of Conduct: ನೀತಿ ಸಂಹಿತೆ ಉಲ್ಲಂಘನೆ: ವೋಟ್ ಮಾಡಿ ಇಟ್ ಮಾಡಿ ಎಂದ ಹೋಟೆಲ್ ಮಾಲೀಕರಿಗೆ ಚುನಾವಣಾ ಆಯೋಗ ಎಚ್ಚರಿಕೆ

ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ಸಂಬಂಧ ದಿನಾಂಕ: 29-03-2023 ರಿಂದ ಮಾದರಿ ನೀತಿ ಸಂಹಿತಿಯು ಜಾರಿಯಲ್ಲಿದ್ದು, ದಿನಾಂಕ: 10-05-2023 ರಂದು ಮತದಾನವು ನಡೆಯಲಿದ್ದು, ದಿನಾಂಕ: 13-05-2023 ರಂದು ಮತ ಎಣಿಕೆ ಕಾರ್ಯವು ನಡೆಯಲಿರುತ್ತದೆ.

ಈಗಾಗಲೇ ಕೆಲವು ಪತ್ರಿಕೆಗಳಲ್ಲಿ ಕೆಲವೊಂದು ಹೋಟೆಲ್‌ಗಳ ಮುಂಭಾಗದಲ್ಲಿ ದಿನಾಂಕ: 10-05-2023 ರಂದು ಮತದಾನ ಮಾಡಿ ಬರುವ ಮತದಾರರು ಗುರುತು ತೋರಿಸಿದಲ್ಲಿ ಉಚಿತವಾಗಿ/ರಿಯಾಯಿತಿ ದರದಲ್ಲಿ ತಿಂಡಿ, ಪಾನಿಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಬೋರ್ಡ್‌ಗಳನ್ನು ಅಳವಡಿಸಿರುವುದು ಕಂಡುಬಂದಿದ್ದು, ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು (Considered as Inducement and violation of MCC) ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿಸಿದ ಹೋಟೆಲ್ ಮಾಲೀಕರನ್ನೇ ನೇರೆ ಹೊಣೆಗಾರರನ್ನಾಗಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಸಿದೆ.

More News