Yogaraj Bhat: ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಗೊತ್ತಾ..?: ತಮ್ಮದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟ ಡೈರೆಕ್ಟರ್ ಯೋಗರಾಜ್ ಭಟ್

ರಾಜಕೀಯ ನಾಯಕರ ಹೈಡ್ರಾಮ ನಡುವೆ ಭರದ ಪ್ರಚಾರವಾಯ್ತು, ಚುನಾವಣೆ ನಡೆದೂ ಆಯ್ತು. ಇದೀಗ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಅಂತೆ ಕಂತೆಗಳ ಸಮೀಕ್ಷೆ ನಾಡ ತುಂಬೆಲ್ಲಾ ಸದ್ದು ಮಾಡ್ತಿದೆ.
ಒಂದು ಸಮೀಕ್ಷೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದರೆ, ಮತ್ತೊಂದು ಸಮೀಕ್ಷೆ ಕಾಂಗ್ರೆಸ್ ಎನ್ನುತ್ತೆ. ಮಗದೊಂದು ಸಮೀಕ್ಷೆ ಸಮ್ಮಿಶ್ರ ಪರಿಸ್ಥಿತಿ ಎಂದು ಮತ ಎಣಿಕೆ ಮೊದಲೇ ಭವಿಷ್ಯ ನಿರ್ಧಾರದ ಸ್ಪರ್ಧೆಗೆ ಇಳಿದಿದೆ. ಇದೆಲ್ಲದರ ನಡುವೆ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಸ್ಯಾಂಡಲ್ ವುಡ್ ಕ್ರಿಯೇಟಿವ್ ನಿರ್ದೇಶಕ ಯೋಗರಾಜ್ ಭಟ್ ತಮ್ಮದೇ ಧಾಟಿಯಲ್ಲಿ ಉತ್ತರಿಸಿದ್ದಾರೆ.

ಸಮೀಕ್ಷೆ ಭರಾಟೆ‌ ನಡುವೆ ನಿರ್ದೇಶಕ ಯೋಗರಾಜ್ ಭಟ್ ವೀಡಿಯೋ ಒಂದನ್ನ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ತಾಯಿ ಮತ್ತು ಆಕೆಯ ಮಗಳು ಯೋಗರಾಜ್ ಭಟ್ ಗೆ ಚುನಾವಣೆ ಕುರಿತ ಪ್ರಶ್ನೆ ಹಾಕುವ ಮೂಲಕ ವೀಡಿಯೋ ಪ್ರಾರಂಭವಾಗುತ್ತೆ. ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಪ್ರಶ್ನೆ ಗೆ ಯೋಗರಾಜ್ ಭಟ್ ತಮ್ಮದೇ ಸ್ಟೈಲ್ ನಲ್ಲಿ ಚಾಟಿ ಬೀಸಿದ್ದಾರೆ.

ವೀಡಿಯೋ ದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಪ್ರಶ್ನೆ ಗೆ ರ್ಯಾಪರ್ ಸ್ಟೈಲ್ ನಲ್ಲಿ ಉತ್ತರಿಸಿದ್ದಾರೆ.
“ಜಮಾನಾ ಫಾಸ್ಟ್ ಆಗಿದೆ. ಮನುಷ್ಯ ಸ್ಪೀಡ್ ಮಾಡ್ತಾ ಇದಾನೆ. ಮುಂಚೆ 5 ದಿನದ ಟೆಸ್ಟ್ ಕ್ರಿಕೆಟ್ ಇತ್ತು. ಆಮೇಲೆ ಒಂದು ದಿನ ಆಡೋದು ಕಷ್ಟ ಆಯ್ತು. ಈಗ 20 ಓವರ್ ಗೆ ಬಂದಿದೆ. ಮುಂದೆ ಕೇವಲ ಹೈಲೈಟ್ಸ್ ನೋಡೋದು ಬರಬಹುದು. ಮಕ್ಕಳು ಏಳು ತಿಂಗಳಿಗೆ ಹುಟ್ತಿದ್ದಾರೆ. ಜನ ಕೂಡ ಫಾಸ್ಟ್. 3 ಗಂಟೆ ಸಿನಿಮಾದಿಂದ 20 ಸೆಕೆಂಡ್ ರೀಲ್ಸ್ ಗೆ ಬಂದಿದೆ. ಇನ್ನು ಐದು ವರ್ಷಕ್ಕೊಂದು ಎಲೆಕ್ಷನ್. ನಾಲ್ಕೈದು ಜನ ಕುರ್ಚಿ ಮೇಲೆ ಕೂತು ಏಳ್ತಾರೆ. ವರ್ಷಕ್ಕೆ ಒಬ್ಬರು ಕೂರ್ತಾರೆ ಅಂದರೆ ವರ್ಷಕ್ಕೆ ಒಂದು ಎಲೆಕ್ಷನ್ ಲೆಕ್ಕವೇ ಆಯ್ತು. ಕಾಲನೇ ಫಾಸ್ಟ್ ಆಗಿದೆ. ಹೀಗಾಗಿ, ಕಾಲನ ಪ್ರಶ್ನೆ ಮಾಡಬಾರದು” ಎಂದು ಮಾರ್ಮಿಕವಾಗಿ ವ್ಯಂಗ್ಯ ಮಾಡಿದ್ದಾರೆ.

More News