Imran Khan Arrest: ಮಾಜಿ ಪ್ರಧಾನಿ ಇಮ್ರಾನ್ ಅರೆಸ್ಟ್: ಉದ್ವಿಗ್ನ ಸ್ಥಿತಿಯಲ್ಲಿ ಪಾಕಿಸ್ತಾನ

ಕರಾಚಿ: ಪಾಕಿಸ್ತಾನ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಆಲ್ ಖೈದಾ ಫಂಡಿಂಗ್ ಕೇಸ್ ಗೆ ಸಂಬಂಧಿಸಿದಂತೆ ಮೊನ್ನೆ ಅಷ್ಟೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಕಿಟಕಿ ಗಾಜು ಹೊಡೆದು ಪೊಲೀಸರು ಅರೆಸ್ಟ್ ಮಾಡಿದ ಘಟನೆ ಇಸ್ಲಾಮಾಬಾದ್ ಕೋರ್ಟ್ ಬಳಿ ನಡೆಯಿತು. ಇದರಿಂದ ರೊಚ್ಚಿಗೆದ್ದ ಬೆಂಬಲಿಗರು ಪಾಕಿಸ್ತಾನದ ಲ್ಲಿ ರಕ್ತದೋಕುಳಿ ಹರಿಸುತ್ತಿದ್ದಾರೆ.

ಲಾಹೋರ್, ರಾವಲ್ಪಿಂಡಿ, ಕರಾಚಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಇದುವರೆಗೂ 47 ಸಾವಾಗಿದ್ದು, ಘಟನೆಯಿಂದ 5500 ಮಂದಿ ಗಾಯಗೊಂಡಿದ್ದಾರೆ.
ಅಲ್ಲದೇ ಪಂಜಾಬ್ ಪ್ರಾಂತ್ಯದ ಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಲಾಕ್ ಆದ ಬಗ್ಗೆ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಇತ್ತ ಕ್ರೀಡಾಕೂಟಕ್ಕೆ ತೆರಳಿದ್ದ ಭಾರತದ ಕ್ರೀಡಾ ಪಟುಗಳನ್ನು ವಾಪಸ್ ಬರುವಂತೆ ಭಾರತ ಸೂಚಿಸಿದ್ದು, ಗಡಿಯಲ್ಲಿ ಭಿಗಿ ಭದ್ರತೆ ಒದಗಿಸಲಾಗಿದೆ.

ಅಷ್ಟಕ್ಕು ನಡೆದ ಘಟನೆ ಏನು..?

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ರ ಅಧಿಕಾರದ ಅವಧಿಯಲ್ಲಿ ದುಬಾರಿಯಾದ ನೆಕ್ಲೆಸ್ ಉಡುಗೊರೆಯೊಂದನ್ನ ಅವರ ಆಪ್ತರೊಬ್ಬರು ನೀಡಿದ್ದರು. ಅದನ್ನು ಸರ್ಕಾರದ ಗಮನಕ್ಕೆ ತಂದು, ಸರ್ಕಾರದ ಉಡುಗೊರೆ ಬಂಢಾರಕ್ಕೆ ಇಡುವ ಬದಲು ಇಮ್ರಾನ್ 18 ಕೋಟಿ ರೂಪಾಯಿ ಗೆ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಇದು ಕಾನೂನು ಬಾಹಿರ ಕೃತ್ಯವಾಗಿದ್ದು, ಇದನ್ನು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ತನಿಖೆ ನಡೆಸಿತ್ತು. ಇದರ ಬೆನ್ನಲ್ಲೇ ಆಗಸ್ಟ್ 20 ರಂದು ಎಫ್ -9 ಪಾರ್ಕ್‌ನಲ್ಲಿ ನಡೆದ ಪ್ರಚಾರದಲ್ಲಿ ಮ್ಯಾಜಿಸ್ಟ್ರೇಟ್ ಝೀಬಾ ಚೌಧರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಖಾನ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿತ್ತು. ಇದಕ್ಕೂ ಹಿಂದಿನ ದಿನ ಸಿವಿಲ್ ನ್ಯಾಯಾಧೀಶ ರಾಣಾ ಮುಜಾಹಿದ್ ರಹೀಮ್ ಅವರು ಮೂರು ಪುಟಗಳ ಕಾಯ್ದಿರಿಸಿದ ತೀರ್ಪನ್ನು ಬಿಡುಗಡೆ ಮಾಡಿದ್ದರು. ಜೊತೆಗೆ ಆಲ್ ಖೈದಾ ಫಂಡಿಗ್ ಕೇಸ್, ತೋಷ್ಕಾನ ಕೇಸ್ ನಡಿ ಪ್ರಕರಣ‌ ದಾಖಲಾಗಿದ್ದು,
ಕೋರ್ಟ್‌ಗೆ ಇಮ್ರಾನ್‌ ಖಾನ್‌ ಪದೇ ಪದೇ ಹಾಜರಾಗದೆ ಇರುವ ಕಾರಣ ಜಾಮೀನು ರಹಿತ ವಾರಂಟ್‌ ಆದೇಶ ನೀಡಲಾಗಿತ್ತು.ಹೀಗಾಗಿ ಪೊಲೀಸರು ಖಾನ್ ರನ್ನು ಬಂಧಿಸಿದರು.

More News