Section 144 In Bengaluru: ಪ್ರತಿಕೃತಿ ಸುಡುವಂತಿಲ್ಲ, ಘೋಷಣೆ ಮಾಡುವಂತಿಲ್ಲ: ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಜಾರಿ

ಚುನಾವಣಾ ಮತ ಎಣಿಕೆ ಹಿನ್ನಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಇಂದಿನಿಂದ ಮೇ 13 ಮಧ್ಯರಾತ್ರಿ 12ರ ವರೆಗೆ ಈ ಆದೇಶ ಜಾರಿಯಲ್ಲಿರಲಿದೆ.

ಮತ ಎಣಿಕೆ ಸಂದರ್ಭದಲ್ಲಿ ಅಹಿತಕರ ಘಟನೆ ಅಥವಾ ಸಮಾಜಘಾತುಕ ಕೃತ್ಯ ಎಸಗುವ ಸಾಧ್ಯತೆ ಇರುವುದರಿಂದ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ಈಗಾಗಲೇ ಕೆಲವೆಡೆ ಇವಿಎಂ ಮಿಷನ್ ಒಡೆದು, ಕಲ್ಲು ತೂರಾಟ ನಡೆಸಿದ ಘಟನೆಗಳೂ ನಡೆದಿವೆ. ಹೀಗಾಗಿ ಯಾವುದೇ ಅಹಿತಕರ ಘಟನೆ ಮತ ಎಣಿಕೆ ಸಂದರ್ಭದಲ್ಲಿ ನಡೆಯದಂತೆ ತಡೆಯಲು ಬೆಂಳೂರಿನಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ನಿಷೇಧಾಜ್ಞೆ ಜಾರಿಯಾದ್ರೆ ಏನೆಲ್ಲಾ ಕ್ರಮ..?

144 ಸೆಕ್ಷನ್ ಜಾರಿಯಾದರೆ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಯಾವುದೇ ಮಾರಕಾಸ್ತ್ರ ಕೊಂಡೊಯ್ಯುವಂತಿಲ್ಲ. ಪ್ರತಿಕೃತಿ ಸುಡುವಂತಿಲ್ಲ, ಘೋಷಣೆ ಮಾಡುವಂತಿಲ್ಲ. ಮದುವೆ ಹಾಗೂ ಶವಸಂಸ್ಕಾರವನ್ನ ಹೊರತುಪಡಿಸಿ ಉಳಿದೆಲ್ಲದಕ್ಕೂ ಪ್ರತಿಬಂಧಕಾಜ್ಞೆ ಅನ್ವಯವಾಗಲಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

More News