Deepika Padukone: ಟೈಮ್ ಮುಖಪುಟದಲ್ಲಿ ದೀಪಿಕಾ: ಜಗತ್ತು ನಿನ್ನ ಪಾದದ ಬಳಿ. ನಿನ್ನ ಬಗ್ಗೆ ಹೆಮ್ಮೆ ಇದೆ ಎಂದ ಪತಿ ರಣವೀರ್

ಇತ್ತೀಚೆಗೆ ಅಷ್ಟೇ ಫಿಫಾ ವಿಶ್ವಕಪ್ ಟ್ರೋಫಿಯನ್ನು ಪ್ರಾರಂಭಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಟೈಮ್ ಮ್ಯಾಗಜೀನ್ ಕವರ್ ಪೇಜ್ ಅನ್ನು ಅಲಂಕರಿಸಿದ್ದಾರೆ.ಮೆಂಟಲ್ ಹೆಲ್ತ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರಿಗೆ ಟೈಮ್ 100 ಇಂಪ್ಯಾಕ್ಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಖಿನ್ನತೆಗೆ ಒಳಗಾಗಿದ್ದ ಬಗ್ಗೆ ಸಾಕಷ್ಟು ಬಾರಿ ಹೇಳಿಕೊಂಡಿದ್ದ ನಟಿ ದೀಪಿಕಾ ಪಡುಕೋಣೆ ತಮ್ಮಂತೆ ಸಮಸ್ಯೆ ಯಲ್ಲಿ ಇರುವವರಿಗಾಗಿ ಫೌಂಡೇಷನ್ ನ್ನು ಸ್ಥಾಪಿಸಿದರು. ಅದಕ್ಕಾಗಿ ಅವರು ಶ್ರಮಿಸಿದ ರೀತಿ ಕಂಡು ಟೈಮ್ 100 ಇಂಪ್ಯಾಕ್ಟ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಮ್ಯಾಗಜಿನ್ ವರ್ಲ್ಡ್  ವೈಲ್ಡ್ ಆಗಿದ್ದು, ದೀಪಿಕಾ ಪಡುಕೋಣೆ ಈ ಮಾಧ್ಯಮದ ಮೂಲಕ ಇಡೀ ಜಗತ್ತನ್ನು ತಲುಪುವ ಅವಕಾಶವನ್ನು ಪಡೆದಿದ್ದಾರೆ. ಈ ಬಗ್ಗೆ ಸಂತಸಗೊಂಡ ದೀಪಿಕಾ ಪತಿ ರಣವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೇಬಿ ಗರ್ಲ್ ಗೆ ವಿಶೇಷವಾಗಿ ಶುಭ ಕೋರಿದ್ದಾರೆ.

ದೀಪಿಕಾ ಪಡುಕೋಣೆ ಅವರ ಟೈಮ್ ಮ್ಯಾಗಜೀನ್ ಕವರ್ ಫೋಟೋವನ್ನು ಪೋಸ್ಟ್ ಮಾಡಿರುವ ರಣವೀರ್, “ಜಗತ್ತು ನಿನ್ನ ಪಾದದ ಬಳಿ.. ನಿನ್ನ ಬಗ್ಗೆ ಹೆಮ್ಮೆ ಇದೆ, ಬೇಬಿಗರ್ಲ್ ಎಂದು ಪ್ರೇಮದಿಂದ ಬರೆದ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ‌.

ಇನ್ನು ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ದೀಪಿಕಾ, “ಇದು ಭಾರತದ ಕ್ಷಣ. ನಮ್ಮ ಬೇರುಗಳು, ನಮ್ಮ ಪರಂಪರೆ, ನಮ್ಮ ಇತಿಹಾಸದೊಂದಿಗೆ ಭಾರತವಿದೆ. ಹೊಸ ಮತ್ತು ಯುವ ಭಾರತ ಈಗ ಹೊರಹೊಮ್ಮುತ್ತಿದೆ. ಈ ಎರಡು ಭಾರತಗಳು ಒಂದಾಗುತ್ತಿರುವುದು ನನಗೆ ಈ ಕ್ಷಣದಲ್ಲಿ ನಿಜವಾಗಿಯೂ ಆಕರ್ಷಕವಾಗಿದೆ. ನನ್ನ ಧ್ಯೇಯ ಯಾವಾಗಲೂ ನನ್ನ ದೇಶದಲ್ಲಿ ಬೇರೂರಿ ಜಾಗತಿಕವಾಗಿ ಪ್ರಭಾವ ಬೀರುವುದು. ಭಾರತೀಯ ಚಿತ್ರರಂಗವು ಗಡಿಗಳನ್ನು ಮೀರಿದೆ. ಮತ್ತು ಭಾರತೀಯರು ಎಲ್ಲೆಡೆ ಇದ್ದಾರೆ. ಆದ್ದರಿಂದ ನೀವು ಎಲ್ಲಿಗೆ ಹೋದರೂ ಖ್ಯಾತಿ ಹೊಂದುತ್ತೀರಿ ಎಂದು ಹಂಚಿಕೊಂಡರು.

More News