ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ನಡೆದ ಬೆನ್ನಲ್ಲೇ ಪಕ್ಷಾಂತರ ಪರ್ವ ನಡೆಯುವ ಸಾಧ್ಯತೆ ಇದೆ ಎಂಬ ಸುಳಿವು ಸಿಕ್ಕಿದೆ. ಮೆಜಾರಿಟಿ ಬರ್ದಿದ್ರೂ ಪರ್ವಾಗಿಲ್ಲ.. ನಮ್ದೇ ಕಪ್ ಎಂಬ ಸಚಿವ ಅಶೋಕ್ ಹೇಳಿಕೆ ಪಕ್ಷಾಂತರ ಪರ್ವದ ಸುಳಿವು ಕೊಟ್ಟಿದೆ.. ಈ ಹಿನ್ನೆಲೆ ಜೆಡಿಎಸ್ ನಾಯಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಯುತ್ತಿದ್ಯಾ ಎಂಬ ಪ್ರಶ್ನೆಗೆ ಬೆಂಗಳೂರಿನಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ನಮ್ಮಲ್ಲೆಲ್ಲ ಪತಿವ್ರತೆಯರು ಇದ್ದಾರೆ. ಮುಚ್ಚಿಡುವ ಸ್ಥಿತಿ ನಮಗೆ ಬಂದಿಲ್ಲ ಎಂದರು.
“ಹುಟ್ಟಿಸುವ ಶಕ್ತಿ ಇದೆ”
ಜೆಡಿಎಸ್ ಅಸ್ತಿತ್ವ ಉಳಿಯುತ್ತಾ ಎಂಬ ಪ್ರಶ್ನೆಗೆ ಬೆಂಗಳೂರಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಧ್ಯಕ್ಷ ಸಿಎಂ ಇಬ್ರಾಹಿಂ, ನಮಗೆ ಭಯ ಅನ್ನೋದೆ ಇಲ್ಲ. ಹುಟ್ಟಿಸುವ ಶಕ್ತಿ ಇದೆ. ಬಂಜೆ ಭಯಪಡಬೇಕು. ಪಂಚರತ್ನ ರಥಯಾತ್ರೆಗೆ ಜನ ಬಂದಿರೋದು ನೀವೆ ನೋಡಿದ್ದೀರಾ. ಚುನಾವಣೆಯಲ್ಲಿ ಹಣವಿಲ್ಲದ ಕಾರಣದಿಂದ ಸ್ವಲ್ಪ ಹಿನ್ನೆಡೆ ಅನುಭವಿಸಿದ್ದೇವೆ. ಈ ಚುನಾವಣೆ ಆದ್ಮೇಲೆ ಜನ ಯಾವ ಸರ್ವೆಯನ್ನು ನಂಬಲ್ಲ. ಚಾಣಕ್ಯರವರು 12 ಸೀಟು ಅಂದಿದ್ದಾರೆ. ಒಂದು ಜಿಲ್ಲೆಯಲ್ಲಿ 7 ಸೀಟು ಗೆಲ್ಲುತ್ತೇವೆ. ಮತ್ತೇ ಹೇಗೆ 12 ಸೀಟು ಕೊಟ್ಟಿದ್ದಾರೆ..? ದುಡ್ಡು ತಗೊಂಡು ಸರ್ವೆ ಕೊಟ್ಟಿದ್ದಾರೆ. ಸಿಎಂ ಇಬ್ರಾಹಿಂ ಅಭಿಪ್ರಾಯ ಕೇಳೋದಾದ್ರೆ ನಾವು ಮತ್ತೆ ಚುನಾವಣೆ ಹೋಗ್ಬೇಕು ಅಂತ ಹೇಳ್ತೀನಿ. ಸಮ್ಮಿಶ್ರ ಸರ್ಕಾರ ಸಂದರ್ಭ ಬಂದ್ರೆ ಯಾರ ಜೊತೆ ಹೋಗ್ತೀರಾ ಎಂಬ ಪ್ರಶ್ನೆಗೆ ಮಾತನಾಡಿದ ಇಬ್ರಾಹಿಂ, ನಾವು ನಮ್ಮ ನಾಯಕರು ಕೂತು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಪಕ್ಷದ ವರಿಷ್ಠರು ಕೂತು ನಿರ್ಧಾರ ಮಾಡ್ತೀವಿ ಎಂದರು.
ಅತಂತ್ರ, ಕುತಂತ್ರ ಎಲ್ಲಾ ಜೆಡಿಎಸ್ ಮೇಲೆ ನಡೆಯಿತು.
ರೈತರ, ಬಡವರ ಪಕ್ಷದ ಮೇಲೆ ಎರಡು ರಾಷ್ಟ್ರೀಯ ಪಕ್ಷಗಳು ಕುತಂತ್ರ ನಡೆಸಿದರು. ಹಣ,ಅಧಿಕಾರ ಎಲ್ಲ ಬಳಸಿ ರಾಷ್ಟ್ರೀಯ ಪಕ್ಷಗಳು ಕುತಂತ್ರ ನಡೆಸಿದರು. ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳೋದಕ್ಕೆ ನಮ್ಮ ಪರಿಶ್ರಮ ಹಾಕಿದ್ದೇವೆ. ಸ್ವಂತ ಬಲದಿಂದ ನಿಲ್ಲುವ ವಿಶ್ವಾಸವಿದೆ. ಹಣಬಲ ವಿಲ್ಲ ನಮಗೆ. ಕೊನೆ ಹಂತದಲ್ಲಿ ನಮಗೆ ಪೋಲಿಂಗ್ ಏಜೆಂಟ್‌ಗೆ ಕೊಡೋದಕ್ಕೆ ದುಡ್ಡಿರಲಿಲ್ಲ. ಇಷ್ಟಾದರೂ ಜನ ನಮ್ಮ ಜೊತೆ ಇರ್ತಾರೆ ಅನ್ನೋದನ್ನ ನಾಳೆ ನೋಡಿ ಎಂದು ಹೇಳಿದರು.
ಇನ್ನು ಡಿಕೆ ಶಿವಕುಮಾರ್ ಸಿಎಂ ಆಸೆ ವ್ಯಕ್ತಪಡಿಸಿದ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,
ಡಿಕೆ ಶಿವಕುಮಾರ್ ಸಿಎಂ ಆಕಾಂಕ್ಷೆಯಾಗಿದ್ದರೆ ತಪ್ಪಿಲ್ವಲ್ಲ. ಬಂಡವಾಳ ಹಾಕಿದ್ರೆ ಪ್ರತಿಫಲ ಕೇಳೋದು ತಪ್ಪಿಲ್ವಲ್ಲ. ನಮ್ಮ ಬಳಿ ದುಡ್ಡಿಲ್ಲ. ಗೆದ್ದರೂ ಸೋತರು ಜನರಿಗೆ ಬಿಟ್ಟಿದ್ದು ಎಂದು ತಿಳಿಸಿದರು.




